ಕೊರೋನಾ ಲಾಕ್ ಡೌನ್ ಹಿನ್ನಲೆ – ಜನ್ಮಾಷ್ಟಮಿಗೆ ಹುಲಿವೇಷ ಹಾಕದಿರುವಂತೆ ಮಾರ್ಪಳ್ಳಿ ಚಂಡೆ ಬಳಗ ನಿರ್ಧಾರ

Spread the love

ಕೊರೋನಾ ಲಾಕ್ ಡೌನ್ ಹಿನ್ನಲೆ – ಜನ್ಮಾಷ್ಟಮಿಗೆ ಹುಲಿವೇಷ ಹಾಕದಿರುವಂತೆ ಮಾರ್ಪಳ್ಳಿ ಚಂಡೆ ಬಳಗ ನಿರ್ಧಾರ

ಉಡುಪಿ: ಕೊರೊನಾ ವೈರಸ್ ಖಾಯಿಲೆ ಹರುಡುವುದನ್ನು ತಡೆಯುವ ಸಲುವಾಗಿ ಮಾರ್ಚ್, ಎಪ್ರಿಲ್ ತಿಂಗಳು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಪರಿಣಾಮ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯುಂಟಾಗಿ ಜನರು ಸಮಸ್ಯೆ ಅನುಭವಿಸಿದ್ದು, ಈ ಸಮಸ್ಯೆಯನ್ನು ಮನಗಂಡು ಈ ವರ್ಷದ ಕೃಷ್ಣ ಜನ್ಮಾಷ್ಟಮಿ-ವಿಟ್ಲಪಿಂಡಿ ಮಹೋತ್ಸವಕ್ಕೆ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗ(ರಿ) ಮಾರ್ಪಳ್ಳಿ ಇದರ ಸದಸ್ಯರು ಉಡುಪಿಯಲ್ಲಿ ಹುಲಿವೇಷ ಹಾಕದಿರುವಂತೆ ನಿರ್ಧರಿಸಿದ್ದಾರೆ

ಈ ಕುರಿತು ಬಳಗ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಾಗಿದ್ದು ಪೊಡವಿಗೊಡೆಯ ಉಡುಪಿಯ ಶ್ರೀ ಕೃಷ್ಣ ಜನ್ಮಾಷ್ಟಮಿ-ವಿಟ್ಲಪಿಂಡಿ ಮಹೋತ್ಸವದ ಸಂಭ್ರಮಕ್ಕೆ ಬಳಗದ ಸದಸ್ಯರು ಕಳೆದ 16 ವರ್ಷಗಳಿಂದ ಸಾಂಪ್ರದಾಯಿಕ ಹುಲಿವೇಷ ಧರಿಸಿ ಶ್ರೀ ಕೃಷ್ಣ ಸೇವೆ ನಡೆಸುತ್ತಿದ್ದು ಹುಲಿವೇಷ ಧರಿಸಿದ ಸಂದರ್ಭ ಪ್ರತೀ ವರ್ಷ ಬಳಗದ ಅಭಿಮಾನಿಗಳು, ಹಿತೈಷಿಗಳು ತಂಡವನ್ನು ಕರೆಸಿ ಗೌರವ ಮೊತ್ತವನ್ನು ನೀಡಿ ಪ್ರೋತ್ಸಾಹ ನೀಡುತ್ತಿದ್ದರು. ಸಂಗ್ರಹವಾದ ಮೊತ್ತವನ್ನು ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ, ಬಳಗದ ಮೂಲಕ ನಡೆಸುವ ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತಿತ್ತು.

ಈ ಬಾರಿ ಕೊರೊನಾ ವೈರಸ್ ಖಾಯಿಲೆ ಹರುಡುವುದನ್ನು ತಡೆಯುವ ಸಲುವಾಗಿ ಮಾರ್ಚ್, ಎಪ್ರಿಲ್ ತಿಂಗಳು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಪರಿಣಾಮ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯುಂಟಾಗಿ ಜನರು ಸಮಸ್ಯೆ ಅನುಭವಿಸಿದ್ದಾರೆ. ಈ ಸಮಸ್ಯೆಯನ್ನು ಮನಗಂಡು ಈ ವರ್ಷದ ಕೃಷ್ಣ ಜನ್ಮಾಷ್ಟಮಿ-ವಿಟ್ಲಪಿಂಡಿ ಮಹೋತ್ಸವಕ್ಕೆ ಬಳಗದ ಸದಸ್ಯರು ಹುಲಿವೇಷ ಹಾಕದಿರುವ ಬಗ್ಗೆ ಸಭೆ ನಡೆಸಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ.

ಅದಾಗ್ಯೂ ಸರ್ಕಾರದ ಅನುಮತಿ ದೊರೆತು ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ನಡೆಸಿದಲ್ಲಿ ಕೇವಲ ಉತ್ಸವದ ಸಂದರ್ಭದಲ್ಲಿ ಮಾತ್ರ ಹುಲಿವೇಷ ಧರಿಸಿ ಬಣ್ಣದ ಸೇವೆಯನ್ನು ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಬಳಗದ ಹಿತೈಷಿಗಳು, ಅಭಿಮಾನಿಗಳು ಪ್ರಾರಂಭದಿಂದಲೂ ನಮ್ಮ ತಂಡವನ್ನು ಕರೆಸಿ ಹುಲಿ ವೇಷ ಕುಣಿಸಿ ಗೌರವಧನ ನೀಡಿ ನಮ್ಮ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು. ಈ ವರ್ಷ ಯಾರಿಗೂ ಹೊರೆಯಾಗಬಾರದು ಎಂಬ ಉದ್ದೇಶವನ್ನು ಹೊಂದಿ ಕೈಗೊಂಡಿರುವ ಈ ನಿರ್ಧಾರವನ್ನು ಕೂಡ ಬೆಂಬಲಿಸಿ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಪ್ರೋತ್ಸಾಹ ನೀಡಬೇಕಾಗಿ ಸಂಘದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿದ್ದಾರೆ.


Spread the love