Home Mangalorean News Kannada News ಕೊರೋನಾ ವೈರಸ್ ಲಾಕ್ ಡೌನ್: ನಾಳೆಯಿಂದ ಏನಿರುತ್ತೆ..? ಏನಿರಲ್ಲ..?

ಕೊರೋನಾ ವೈರಸ್ ಲಾಕ್ ಡೌನ್: ನಾಳೆಯಿಂದ ಏನಿರುತ್ತೆ..? ಏನಿರಲ್ಲ..?

Spread the love

ಕೊರೋನಾ ವೈರಸ್ ಲಾಕ್ ಡೌನ್: ನಾಳೆಯಿಂದ ಏನಿರುತ್ತೆ..? ಏನಿರಲ್ಲ..?

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವ ಭಾರತದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಯಮಗಳಲ್ಲಿ ಕೇಂದ್ರ ಸರ್ಕಾರ ಒಂದಷ್ಟು ಮಹತ್ವದ ಬದಲಾವಣೆ ಮಾಡಿದ್ದು, ಕೆಲ ಕ್ಷೇತ್ರಗಳಿಗೆ ಲಾಕ್ ಡೌನ್ ನಿಂದ ಷರತ್ತು ಬದ್ಧ ವಿನಾಯಿತಿ ನೀಡಿದೆ.

ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಏಪ್ರಿಲ್.15 ರಿಂದ ಕೇಂದ್ರ ಸರ್ಕಾರ ಎರಡನೇ ಹಂತದ ಲಾಕ್‌ಡೌನ್‌ ಘೋಷಿಸಿದ್ದು, ಈ ಲಾಕ್‌ಡೌನ್‌ ಹೇಗಿರಲಿದೆ? ಜನ ಏನು ಮಾಡಬೇಕು? ಏನು ಮಾಡಬಾರದು? ಯಾವುದು ಲಭ್ಯ? ಯಾವುದು ಅಲಭ್ಯ? ಎಂಬ ಕುರಿತ ಸಂಪೂರ್ಣ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿತ್ತು. ನಾಳೆಯಿಂದ ಲಾಕ್ ಡೌನ್ ನಿಂದ ವಿನಾಯಿತಿ ಪಡೆಯುವ ಕ್ಷೇತ್ರಗಳ ಕುರಿತು ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ನಿರ್ದೇಶನಗಳನ್ನು ಮತ್ತು ಮಾಹಿತಿಗಳನ್ನು ನೀಡಿದ್ದು, ನಾಳಿನಿಂದ ಈ ಕೆಳಕಂಡ ಕ್ಷೇತ್ರಗಳು ಲಾಕ್ ಡೌನ್ ನಿಂದ ವಿನಾಯಿತಿ ಪಡೆಯಲಿದೆ. ಆದರೆ ಈ ವಿನಾಯಿತಿ ಜಾರಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು.. ಸರ್ಕಾರಗಳು ಬಯಸಿದರೆ ಇದನ್ನು ಜಾರಿಗೆ ತರಬಹುದು ಇಲ್ಲವೇ ಯಾಥಾ ಸ್ಥಿತಿ ಮುಂದುವರೆಸಬಹುದು ಎಂದೂ ಕೇಂದ್ರ ಗೃಹ ಸಚಿವಾಲಯ ಹೇಳಿದೆ.

1.ವಿತ್ತ ಕ್ಷೇತ್ರ: ವಿತ್ತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಈ ಹಿಂದಿನಂತೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದ್ದು, ಬ್ಯಾಂಕ್ ಗಳು, ಇತರೆ ಆರ್ಥಿಕ ಕ್ಷೇತ್ರಗಳ ಕಚೇರಿಗಳಲ್ಲಿ ಸಾಮಾಜಿಕ ಅಂತರ ಮತ್ತು ಶುಚಿತ್ವ ಮುಂಜಾಗ್ರತೆ ಕಾಯ್ದುಕೊಂಡು ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.

2.ಮನ್ರೇಗಾ: ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಾಳೆಯಿಂದ ಕೆಲಸಕ್ಕೆ ತೆರಳಬಹುದು. ಆದರೆ ಕೆಲಸ ಮಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವಕೆ ಕಡ್ಡಾಯ ಕೆಲಸದ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.

3.ಸಾರ್ವಜನಿಕ ಉಪಯೋಗಿಕ ಕ್ಷೇತ್ರಗಳು : ದಿನಸಿ ಅಂಗಡಿಗಳು, ಹಣ್ಣು-ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ವೈದ್ಯಕೀಯ ಔಷಧಾಲಯಗಳು

4.ವಾಣಿಜ್ಯ: ಅತ್ಯಗತ್ಯ ವಸ್ತುಗಳ ಪ್ಯಾಕಿಂಗ್ ಸಂಸ್ಥೆಗಳು, ಗೂಡ್ಸ್ ಅಥವಾ ಕಾರ್ಗೋ ಲೋಡಿಂಗ್ ಅನ್ ಲೋಡಿಂಗ್, ಅತ್ಯಗತ್ಯ ವಸ್ತುಗಳ ರವಾನೆ, ಆನ್ ಲೈನ್ ಟೀಚಿಂಗ್, ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು (ಶೇ.50ರಷ್ಟು ಸಿಬ್ಬಂದಿಗಳೊಂದಿಗೆ), ಖಾಸಗಿ ಮತ್ತು ಸರ್ಕಾರಿ ಕೈಗಾರಿಕಾ ಸಂಸ್ಥೆಗಳು, ಕಟ್ಟಡ ನಿರ್ಮಾಣ (ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ)

5.ಸಾರಿಗೆ: ತುರ್ತು ವಾಹನಗಳು (ಆ್ಯಂಬುಲೆನ್ಸ್), ವೈದ್ಯಕೀಯ ಪರಿಕರಗಳು, ಔಷಧಿಗಳ ರವಾನಿಸುವ ವಾಹನಗಳು, ಪಶು ವೈದ್ಯಕೀಯ ರವಾನೆ, ಅಗತ್ಯ ವಸ್ತುಗಳ ರವಾನೆ, ಕೆಲಸಕ್ಕೆ ತೆರಳುವವರ ವಾಹನಗಳು (ಬೈಕಿನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು-ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶ)

ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ.


Spread the love

Exit mobile version