Home Mangalorean News Kannada News ಕೊರೋನಾ ವೈರಸ್

ಕೊರೋನಾ ವೈರಸ್

Spread the love
RedditLinkedinYoutubeEmailFacebook MessengerTelegramWhatsapp

ಕೊರೋನಾ ವೈರಸ್

ಕೊರೋನಾ ಎಂಬ ಪುಟ್ಟ ವೈರಸ್
ಮಾಡಿತು ಇಡೀ ಪ್ರಪಂಚವನ್ನೆ ಬೆರುಗು
ಜನರಿಂದ ಜನರಿಗೆ ಅವರಿಸಿತು ಕೆಮ್ಮು ನೆಗಡಿಯೊಳು
ಕೂಡಿ ಹಾಕಿತು ಮಾನವ ಕುಲವ ಮನೆಯೊಳು

ಪ್ರಪಂಚದ ಅದೆಷ್ಟೋ ಬಲಿಷ್ಠ ರಾಷ್ಟ್ರಗಳು
ಶಕ್ತರು ಯಾವುದೇ ಯುದ್ದವ ಎದುರಿಸಲು
ಚೀನಾದಿಂದ ಶುರುವಾಯಿತು ಕೊರೊನಾ ಸವಾಲು
ನಿಶ್ಶಕ್ತವಾದವು ಪರಮಾಣು ದೇಶಗಳು

ಲಾಕ್ ಡೌನ್ ಘೋಷಿಸಿದವು ಹಲವು ದೇಶಗಳು
ಮುಖವನ್ನು ಮುಚ್ಚಿಕೊಂಡರು ಜನರು
ಮನೆಯಿಂದ ಹೊರಹೋಗಲು ಹೆದರಿದರು
ಜಗತ್ತಲ್ಲಿ ಕೊರೋನಾ ಖದರು

ವೈದ್ಯರು, ದಾದಿಯರು, ಪೊಲೀಸರು, ಸೈನಿಕರು
ದುಡಿಯುತ್ತಾರೆ ತಮ್ಮ ಪ್ರಾಣವ ಒತ್ತೆಯಿಟ್ಟು,
ಜನರ ಆರೋಗ್ಯವ ಕಾಪಾಡಲು
ಶ್ರಮಿಸುತ್ತಾರೆ ಜೀವದ ಹಂಗು ಮರೆತು

ಕೊರೋನಾವನ್ನು ಹಗುರವಾಗಿ ತೆಗೆದುಕೊಳ್ಳದಿರಿ
ಮನೆಯಿಂದ ವಿನಾಕಾರಣ ಹೊರಗೆ ಬರದಿರಿ
ನಿಮ್ಮ ಮನೆಯವರ ಬಗ್ಗೆ ಚಿಂತೆ ಇರಲಿ
ಮಹಾಮಾರಿಗೆ ಜೀವ ಕೊಡದಿರಿ

ಹಣ, ಅಧಿಕಾರ, ಹೆಸರು, ಪೊಗರು
ಎಲ್ಲವೂ ನಶ್ವರ ಕೊರೋನಾ ಎದುರು
ಉಳಿದರೆ ಜೀವ ದುಡಿಯಬಹುದು ನಾಳೆ
ಮನೆಯಲ್ಲಿರಲು ಪಣತೊಡಿ ಇಂದೇ

 

ವಾಯ್ಲೆಟ್ ಜೆ. ಪಿರೇರಾ

Also Read


Spread the love

Exit mobile version