ಕೊರೋನಾ ಹೆಚ್ಚಳ ; ಒಂದು ಮನೆಯ ಬದಲು ಏರಿಯಾನೆ ಸೀಲ್ ಡೌನ್ ಮಾಡಿ – ವೈರಲ್ ಆದ ಡಿಜಿ ಜಗದೀಶ್ ಆಡಿಯೋ !

Spread the love

ಕೊರೋನಾ ಹೆಚ್ಚಳ ; ಒಂದು ಮನೆಯ ಬದಲು ಏರಿಯಾನೆ ಸೀಲ್ ಡೌನ್ ಮಾಡಿ – ವೈರಲ್ ಆದ ಡಿಜಿ ಜಗದೀಶ್ ಆಡಿಯೋ !

ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಒಂದೆರೆಡು ಮನೆಗಳನ್ನು ಸೀಲ್ ಡೌನ್ ಮಾಡಿದರೆ ಸಾಲೊದಿಲ್ಲ ಬದಲಾಗಿ ಇನ್ನು ಮುಂದೆ ಏರಿಯಾನೇ ಸೀಲ್ ಡೌನ್ ಮಾಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಆಡಿಯೋ ಒಂದು ವೈರಲ್ ಆಗಿದೆ.

ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ವೀಡಿಯೋ ಈ ರೀತಿ ಇದೆ ಎಸಿ- ತಹಶೀಲ್ದಾರ್ -ವಿಲೇಜ್ ಅಕೌಂಟೆಂಟ್ ಮತ್ತು ಆರ್ ಐ ಗಮನವಿಟ್ಟು ಕೇಳಿ. ನಾವು ಮಾಡುತ್ತಿರುವ ಕಂಟೈನ್ಮೆಂಟ್ ಝೋನ್ ಸರಿಯಾದ ಕ್ರಮದಲ್ಲಿ ಇಲ್ಲ. ಸದ್ಯ ಜಿಲ್ಲೆಯಲ್ಲಿ ಸಾಕಷ್ಟು ಸ್ಥಳೀಯ ಪ್ರಕರಣಗಳೇ ಬರುತ್ತಿವೆ. ಇನ್ನು ಮುಂದೆ ಆ ಊರು ಅಥವಾ ಏರಿಯಾವನ್ನೇ ಕಂಟೈನ್ಮೆಂಟ್ ಮಾಡಬೇಕಾಗುತ್ತೆ. ಕೇವಲ ಒಂದೆರಡು ಮನೆ ಸೀಲ್ ಡೌನ್ ಮಾಡಿದರೆ ಸಾಲೋದಿಲ್ಲ

ನಿಮಗೆ ಕೆಲಸ ಸುಲಭ ಆಗುತ್ತೆ ಅಂತ ಈಥರ ಮಾಡಬೇಡಿ, ಜಿಲ್ಲೆಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಸೀಲ್ ಡೌನ್ ಮಾಡಿಯೂ ಊರಲ್ಲಿ ಸಾವು ಸಂಭವಿಸಿದರೆ ಸರಿಯಲ್ಲ ಇನ್ನು ಮುಂದೆ ಏರಿಯಾನೇ ಸೀಲ್ ಡೌನ್ ಮಾಡಬೇಕು. ಕಾಟಾಚಾರಕ್ಕೆ ಒಂದೆರಡು ಮನೆ ಸೀಲ್ ಮಾಡಬೇಡಿ. ಕಂಟೈನ್ಮೆಂಟ್ ಝೋನ್ ದೊಡ್ಡದು ಮಾಡಬೇಕು ಅಂತ ತುಂಬಾ ದಿನದಿಂದ ಹೇಳುತ್ತಿದ್ದೇನೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ಮುಂದೆ ಯಾರಾದರೂ ಸತ್ತರೆ ನಿಮ್ಮ ಮೇಲೆ ಕ್ರಮ ಆಗುತ್ತೆ ಎಂದು ಹೇಳಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Spread the love