ಕೊರೋನಾ ಹೋರಾಟಕ್ಕೆ ಒಂದು ಕೋಟಿ ರೂ. ನೆರವು ನೀಡಿದ ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಕೈಗೊಳ್ಳುವ ಅಗತ್ಯ ಸುರಕ್ಷತಾ ಕ್ರಮಗಳಿಗೆ ವಿನಿಯೋಗ ಮಾಡುವ ಸಲುವಾಗಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಸಂಸದರ ಪ್ರದೇಶಾಭಿವೃಉದ್ಧಿ ಯೋಜನೆ ಅನುದಾನದಲ್ಲಿ ರೂ. 1ಕೋಟಿ ಯನ್ನು ನೀಡಿದ್ದಾರೆ.
ಈ ಕುರಿತು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಜಾಗತಿಕ ಮಹಾಮಾರಿ ಕೊರೋನಾವೈರಸ್ ರೋಗದ ವಿರುದ್ಧ ಹೋರಾಟಕ್ಕೆ ಇಡೀ ರಾಜ್ಯ ಸಜ್ಜಾಗಿದೆ. ಅದರ ಸಲುವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಲುವಾಗಿ ಸಂಸದರು ಸಂಸದರ ನಿಧಿಯಿಂದ ಒಂದು ಕೋಟಿ ನೆರವು ನೀಡುತ್ತಿದ್ದಾರೆ.
ಈ ಹಿಂದೆ ಹಲವಾರು ಸಂಸದರು ತಮ್ಮ ಸಂಸದ ಪ್ರದೇಶಾಭಿವೃದ್ಧಿನಿಧಿಯಿಂದ ಹಣವನ್ನು ಕೊರೋನಾ ವಿರುದ್ಧ ಹೋರಾಟಕ್ಕಾಗಿ ಬಿಡುಗಡೆ ಮಾಡಿದ್ದಾರೆ.