ಕೊರೋನ ವೈರಸ್ : ದ.ಕ. ಜಿಲ್ಲೆಯಲ್ಲಿ ಈವರೆಗೆ 38,279 ಮಂದಿಯ ಸ್ಕ್ರೀನಿಂಗ್
ಮಂಗಳೂರು : ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ವಿದೇಶದಿಂದ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಸೋಮವಾರ 48 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,279 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಸೋಮವಾರ 9 ಮಂದಿಯ ಗಂಟಲಿನ ದ್ರವದ ಪ್ರಯೋಗಾಲಯದ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಅಗಿದೆ. ಅಲ್ಲದೆ ಸೋಮವಾರ ಮತ್ತೆ 8 ಮಂದಿಯ ವರದಿಯನ್ನು ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಈವರೆಗೆ 5875 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ 28 ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಆಸ್ಪತ್ರೆಗೆ 4 ಮಂದಿ ಸೋಮವಾರ ದಾಖಲಾಗಿದ್ದಾರೆ. 28 ದಿನದ ನಿಗಾ ಅವಧಿಯನ್ನು 169 ಮಂದಿ ಪೂರೈಸಿದ್ದಾರೆ. ದ.ಕ.ಜಿಲ್ಲೆಯ ಆಶಾ ಕಾರ್ಯಕರ್ತೆಯರು ಈವರೆಗೆ 3,77,569 ಮನೆಗೆ ಭೇಟಿ ನೀಡಿ ಕೊರೋನ ವೈರಸ್ ಕುರಿತು 15,33,783 ಮಂದಿಗೆ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.