ಕೊರೋನ ವೈರಸ್; ರಾಜ್ಯ ಸರಕಾರದ ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲಿಸಿ – ಡಿಸಿ ಜಗದೀಶ್
ಉಡುಪಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ನಿರ್ದೇಶನ ನೀಡಿದ್ದಾರೆ.
ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾಕೂಟಗಳಾದ ಕ್ರಿಕೆಟ್, ಫುಟ್ ಬಾಲ್, ಬಾಸ್ಕೇಟ್ ಬಾಲ್, ಹಾಕಿ ಬ್ಯಾಡ್ಮಿಂಟನ್ ಇತ್ಯಾದಿಗಳನ್ನು ಆಯೋಜಿಸುವಂತಿಲ್ಲ.
ಮದುವೆ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ಪೂರ್ವ ನಿಗದಿಯಾಗಿದ್ದಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಜನರು ಸೇರದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ವಹಿಸುವುದು.
ಧಾರ್ಮಿಕ ಕಾರ್ಯಕ್ರಮಗಳು ಜಾತ್ರೆಗಳಲ್ಲಿ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವಂತೆ ತಿಳುವಳಿಕೆ ನೀಡಿ ಈ ಬಗ್ಗೆ ಅಗತ್ಯ ಕ್ರಮ ವಹಿಸುವುದು. ಹೆಚ್ಚಾಗಿ ಜನರು ಬಳಸುವು ಸ್ವಿಮ್ಮೀಂಗ್ ಫೂಲ್, ಜಿಮ್ ಫಿಟ್ ನೆಸ್ ಸೆಂಟರ್, ಉದ್ಯಾನವನ ಇತ್ಯಾದಿಗಳನ್ನು ಮುಚ್ಚುವುದು.
ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಾಣಿಜ್ಯ ಶಾಲೆಗಳನ್ನು, ಟ್ಯುಟೋರಿಯಲ್ ಗಳನ್ನು ಮತ್ತು ಕೋಚಿಂಗ್ ಸೆಂಟರ್ ಗಳನ್ನು ಮುಚ್ಚುವುದು. ಹಾಗೂ ಈಗಾಗಲೇ ನಿಗದಿ ಪಡಿಸಿದ ಪರಿಕ್ಷೇಗಳನ್ನು ಸೂಕ್ತ ಮುಂಜಾಗೃತ ಕ್ರಮದೊಂದಿಗೆ ನಡೆಸಬಹುದು.
ಹೆಚ್ಚಾಗಿ ವಿದೇಶಗಳಿಗೆ ಪ್ರಯಾಣಿಸುವ ಐಟಿ, ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲು ಸಂಸ್ಥೆಗಳು ಅಗತ್ಯ ಕ್ರಮಗಳನ್ನು ವಹಿಸುವುದು.
ಜಿಲ್ಲೆಯ ಖಾಸಗಿ ವೈದ್ಯರುಗಳು, ಖಾಸಗಿ ಆಸ್ಪತ್ರೆಗಳು, ಹಾಗೂ ನರ್ಸಿಂಗ್ ಹೋಮ್ ಗಳು ವಿದೇಶದಿಂದ ಬಂದು ರೋಗ ಲಕ್ಷಣಗಳು ಇರುವ ರೋಗಿಗಳಿದ್ದಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಫೋನ್, ಫ್ಯಾಕ್ಸ್, ವಾಟ್ಸಾಪ್ , ಸಹಾಯವಾಣಿ ಮುಕಾಂತರ ತಿಳಿಸಲು ಸೂಚಿಸಲಾಗಿದೆ ಎಂದರು.