Home Mangalorean News Kannada News ಕೊರೋನ ಹೆಚ್ಚಳ; ಜವಳಿ ಅಂಗಡಿ ತೆರೆಯಲು ಅವಕಾಶ ನೀಡಿದ ಸಚಿವ ಕೋಟ ನಡೆಗೆ ಶಾಸಕ ಖಾದರ್...

ಕೊರೋನ ಹೆಚ್ಚಳ; ಜವಳಿ ಅಂಗಡಿ ತೆರೆಯಲು ಅವಕಾಶ ನೀಡಿದ ಸಚಿವ ಕೋಟ ನಡೆಗೆ ಶಾಸಕ ಖಾದರ್ ಆಕ್ರೋಶ

Spread the love

ಕೊರೋನ ಹೆಚ್ಚಳ; ಜವಳಿ ಅಂಗಡಿ ತೆರೆಯಲು ಅವಕಾಶ ನೀಡಿದ ಸಚಿವ ಕೋಟ ನಡೆಗೆ ಶಾಸಕ ಖಾದರ್ ಆಕ್ರೋಶ

ಮಂಗಳೂರು: ಜವಳಿ ಅಂಗಡಿ ತೆರೆಯಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿರುವ ಸೂಚನೆಗೆ ಶಾಸಕ ಯು.ಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹ ನಿರ್ಧಾರ ಅಗತ್ಯವೇ? ಸರಕಾರಕ್ಕೆ ಖಾದರ್ ಪ್ರಶ್ನೆ ಮಾಡಿದ್ದು, ಮೊನ್ನೆ ಸಭೆಯಲ್ಲಿ ಜವಳಿ ಅಂಗಡಿ ತೆರವಿಗೆ ಅವಕಾಶವಿಲ್ಲ ಎಂದ ಸಚಿವರು ಹಾಗೂ ಜಿಲ್ಲಾಧಿಕಾರಿ ಇಂದು ಏಕಾಏಕಿ ಯಾವುದೇ ಸೂಚನೆ ನೀಡದೆ ತೆರವಿಗೆ ಅವಕಾಶ ನೀಡಿದ್ದು ತಪ್ಪು. ಮಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು ಅನಾವಶ್ಯಕವಾಗಿ ಜವಳಿ ಅಂಗಡಿ ಬಾರ್ ತೆರವುಗೊಳಿಸಿರುವುದು ಸರಕಾರದ ಬೇಜವಬ್ದಾರಿತನವನ್ನು ತೋರಿಸುತ್ತದೆ.

ಜವಳಿ ಅಂಗಡಿ,ಬಾರ್ ತೆರೆದು ಜನರ ಸಂಚಾರಕ್ಕೆ ಬಸ್ಸು ಸಂಚಾರ ತಡೆಗಟ್ಟಿರುವುದು ಅವೈಜ್ಞಾನಿಕವಾಗಿದ್ದು ಜನರು ಯಾರೊಬ್ಬರೂ ಜವಳಿ ಅಂಗಡಿ ತೆರವಿಗೆ ಅಪೇಕ್ಷೆ ಪಡುತ್ತಿಲ್ಲ ಈ ಬಗ್ಗೆ ದ.ಕ ಜಿಲ್ಲೆಯ ಸಂಸದರು,ಶಾಸಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದಿರುವ ಖಾದರ್ ದೂರದೃಷ್ಟಿ ಇಲ್ಲದೆ ಗೊಂದಲ ನಿರ್ಧಾರಗಳಿಂದ ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾದರೆ ಇದಕ್ಕೆ ನೇರ ಹೊಣೆ ಬಿಜೆಪಿ ಸರಕಾರ ಎಂದು ಅವರು ಆರೋಪಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಸಮರ್ಪಕ ಟೆಸ್ಟಿಂಗ್ ಕಿಟ್ ಕೊರತೆ ಇದ್ದು ಸೋಂಕಿತ ವ್ಯಕ್ತಿಗಳಿಗೆ ಟೆಸ್ಟ್ ಮಾಡಲು ವ್ಯವಸ್ಥೆ ಇಲ್ಲ. ಇನ್ನಿತರ ಖಾಯಿಲೆಗೆ ಸೂಕ್ತ ಆಸ್ಪತ್ರೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸುವುದು ಸರಕಾರದ ಹೊಣೆ ಅದು ಬಿಟ್ಟು ಜವಳಿ ಅಂಗಡಿ ತೆರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಖಾದರ್ ಪ್ರಶ್ನಿಸಿದ್ದಾರೆ.


Spread the love

Exit mobile version