ಕೊಲೆಯತ್ನ, ಹಲ್ಲೆ, ದರೋಡೆ ಪ್ರಕರಣ : ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ತೊಕ್ಕೊಟ್ಟು ಒಳಪೇಟೆಯ ಕವಿತ್ ಪೂಜಾರಿ (29) ಎಂಬಾತನನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ ಮತ್ತು ಡರೋಡೆ ಪ್ರರಕಣ ಸೇರಿದಂತೆ ಸುಮಾರು 6 ಪ್ರಕರಣಗಳು ದಾಖಲಾಗಿರುತ್ತದೆ. ಉಳ್ಳಾಲ ಪೊಲೀಸ್ ಠಾಣೆಯ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಯ ಬಗ್ಗೆ ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು . ಆರೋಪಿಯನ್ನು ಈ ದಿನ ದಸ್ತಗಿರಿ ಮಾಡಿ .ಮುಂದಿನ ಕ್ರಮದ ಬಗ್ಗೆ ಈತನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಡಾ:ಪಿ.ಎ.ಹರ್ಷಾ, ಐ.ಪಿ.ಎಸ್. ರವರ ನಿರ್ದೇಶನದಂತೆ, ಅರುಣಾಂಕ್ಷು ಗಿರಿ, ಐಪಿಎಸ್ ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಲಕ್ಷ್ಮೀ ಗಣೇಶ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಕೋದಂಡರಾಮ್ ರವರ ಆದೇಶದಂತೆ ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.