ಕೊಲ್ಲಿ ನಾಡಿನಲ್ಲಿ ವಿಜೃಂಬಣೆಯಿಂದ ನಡೆದ ಆಲ್‍ಐನ್‍ ಕನ್ನಡ ಸಂಘದ ‘ಸೌಹಾರ್ದತೆಯ ಸಂಭ್ರಮ’ 2019

Spread the love

ಕೊಲ್ಲಿ ನಾಡಿನಲ್ಲಿ ವಿಜೃಂಬಣೆಯಿಂದ ನಡೆದ ಆಲ್‍ಐನ್‍ ಕನ್ನಡ ಸಂಘದ ‘ಸೌಹಾರ್ದತೆಯ ಸಂಭ್ರಮ’ 2019

ಅರಬ್ ಸಂಯುಕ್ತ ಸಂಸ್ಥಾನದ ಅಲ್‍ಐನ್‍ ಕನ್ನಡ ಸಂಘದ16ನೇ ವಾರ್ಷಿಕೋತ್ಸವ ಮತ್ತು “ಸೌಹಾರ್ದತೆಯ ಸಂಭ್ರಮ” 2019 ಅಲ್‍ಐನ್‍ ರಾಡಿಸ್ಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ಏಪ್ರಿಲ್ 26ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00ಗಂಟೆಯಿಂದ ಸಂಜೆ5.00ಗಂಟೆಯವರೆಗೆ ನಡೆಯಿತು.

ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಸುಮಂಗಲೆಯರು ಪೂರ್ಣಕುಂಭ ಕಲಶದೊಂದಿಗೆ ಮಹಾಧ್ವಾರದಿಂದ ಸಭಾಂಗಣಕ್ಕೆ ಬರಮಾಡಿಕೊಂಡರು.

ಪವಿತ್ರಕುರಾನ್ ಪಠಣದೊಂದಿಗೆಕಾರ್ಯಕ್ರಮವನ್ನುಪ್ರಾರಂಭಿಸಿಇತ್ತಿಚೆಗೆ ಭಾರತದಪುಲ್ವಾಮದಾಳಿಯಲ್ಲಿ ಹುತಾತ್ಮರಾದ ಮಹಾನ್‍ಯೋದರಿಗೆಗೌರವ ಶೃದ್ಧಾಂಜಲಿ ಸಲ್ಲಿಸಲಾಯಿತು.

ಯು.ಎ.ಇ. ಮತ್ತು ಭಾರತರಾಷ್ಟ್ರಗೀತೆಯ ನಂತರಡಾ ರಶ್ಮೀ ನರೇನ್ ಸರ್ವರನ್ನು ಸ್ವಾಗತಿಸಿದರು. ಸ್ವಾಗತ ನೃತ ಪ್ರತೀಕ್ಷಾ ನಡೆಸಿಕೊಟ್ಟರು.

ಗೌರವಾನ್ವಿತ ದೊರೆ ಶೇಖ್ ಸಲೆಮ್ ಬಾಲರಕ್ಕಡ್‍ಅಲ್‍ಅಮೇರಿರವರಿಂದ ಕಾರ್ಯಕ್ರಮಉದ್ಘಾಟನೆ

ಅಲ್‍ಐನ್‍ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಪ್ರಥಮ ಬಾರಿಗೆ ಮುಖ್ಯಅತಿಥಿಯಗಿ ಆಗಮಿಸಿದ ಯು.ಎ.ಇ. ಫೆಡರಲ್ ಪಾರ್ಲಿಮೆಂಟ್ ಸದಸ್ಯರಾದ ಗೌರವಾನ್ವಿತ ದೊರೆ ಶೇಖ್‍ಸಲೆಮ್ ಬಾಲರಕ್ಕಡ್‍ ಅಲ್‍ ಅಮೇರಿರವರು ಹಾಗೂ ಗೌರವ ಅತಿಥಿಯಾಗಿ ಆಗಮಿಸಿದ ಎನ್. ಎಂ.ಸಿ. ಟ್ರೇಡಿಂಗ್ ಸಿ.ಇ.ಒ. ಶ್ರೀ ನಿರ್ಮನ್ ಶೆಟ್ಟಿರವರ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ “ಸೌಹಾರ್ದತೆಯ ಸಂಭ್ರಮ” 2019ಕಾರ್ಯಕ್ರಮಕ್ಕೆಅಧಿಕೃತ ಚಾಲನೆ ನೀಡಿದರು. ಅತಿಥಿಗಳಾಗಿ ಎ. ಜೆ. ಗ್ರೂಪ್ ಸ್ಕೂಲ್‍ಚೇರ್ಮನ್ ಶ್ರೀ ಅರ್ಶದ್ ಶರೀಫ್, ಎನ್. ಎಂ.ಸಿ. ಸ್ಪೆಶಾಲಿಟಿ ಹಾಸ್ಪಿಟಲ್ ಜೆನರಲ್ ಮ್ಯಾನೇಜರ್ ಶ್ರೀ ಮೋಹಿತ್‍ಚತ್ರುವೇದಿ ಹಾಗೂ ಶಾರ್ಜಾಕರ್ನಾಟಕ ಸಂಘದ ಪೂರ್ವಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್‍ರೈಯವರು ಹಾಗೂ ಅಲ್‍ಐನ್‍ಕನ್ನಡ ಸಂಘದ ಮುಖ್ಯ ಸಂಘಟಕರು ಶ್ರೀ ರೋನಾಲ್ಡ್‍ಎಡ್ವಿನ್ ಲೋಬೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿ ಗೌರವಾನ್ವಿತ ದೊರೆ ಶೇಖ್ ಸಲೆಮ್ ಬಾಲರಕ್ಕಡ್‍ಅಲ್‍ ಅಮೇರಿ ಹಾಗೂ ಗೌರವ ಅತಿಥಿ ಶ್ರೀ ನಿರ್ಮನ್ ಶೆಟ್ಟಿರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಭಾಷೆಯ ಸೇವೆಗಾಗಿ “ವರ್ಷದಕನ್ನಡಿಗ ಪ್ರಶಸ್ತಿ” ಯನ್ನು ಶ್ರೀ ಬ್ರಹ್ಮಾವರ ಶೈಕ್ ಮನ್ಸೂರ್ ಹಾಗೂ ಶ್ರೀ ಮಹೇಶ್‍ಗುಂಜಿ ಸುವರ್ಣರವರಿಗೆ ನೀಡಿಗೌರವಿಸಲಾಯಿತು.

“ಅತ್ಯುತ್ತಮ ಸೇವಾ ಸಾಧನೆ” ಪ್ರಶಸ್ತಿಯನ್ನು ಶ್ರೀ ಬಿ. ಕೆ. ಗಣೇಶ್‍ರೈ, ಶ್ರೀ ಕೆ. ಬಿ. ರಮೇಶ್‍ಕೊಡಗು ಮತ್ತುಡಾ. ಬಿ. ಎನ್. ಕುಮಾರ್‍ರವರಿಗೆ ಪ್ರಧಾನಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ – ವಿಘ್ನೇಶ್ ವಿಮಲ್‍ಕುಮಾರ್, ಫ್ರೆಂಜಿಯಾ ಜೆಸ್ಸಿಕಾ ಡಿ’ಸೋಜಾ ಹಾಗೂ ಶ್ರೀಮತಿ ಶಾಲಿನಿ ಡಿ’ಸೋಜಾರವರಿಗೆ ನೀಡಿಗೌರವಿಸಲಾಯಿತು.

ಶ್ರೀಮತಿ ಕಾಮಿನಿ ತಂಡದವರಿಂದ ಸೌಹಾರ್ದತೆಗೀತೆ, ಶ್ರೀಮತಿ ಉಷಾ ಹರ್ಷರವರಿಂದ ವಾರ್ಷಿಕ ವರದಿ, ನೃತ್ಯಕಾರ್ಯಕ್ರಮದಲ್ಲಿರೋಜ್ಲಿನ್ ನೃತ್ಯ, ಎನ್. ಎಂ. ಸಿ. ಮಕ್ಕಳ ತಂಡ್, ಶರತ್ ಮತ್ತುಆರ್ಯ ದೀಪಕ್, ನೀಲ ಗಗಂಥ್ ಶಾನೆಲ್ ಮತ್ತು ನಿಸಾಲ್, ಹಾಗೂಕೊಂಕಣಿ ಬಳಗದ ಸುಶ್ರಾವ್ಯಗಾಯನ ಮತ್ತು ಬೈಲಾ ನೃತ್ಯಗೀತೆ ಗಮನ ಸೆಳೆಯಿತು.

ರೆಬೆಲ್ ಸ್ಟಾರ್‍ಅಂಬರೀಶ್ ನೆನಪಿನ ಅಂಗಳದಲ್ಲಿ ವಿಶೇಷ ಕಾರ್ಯಕ್ರಮಅಲ್‍ಐನ್‍ಕನ್ನಡ ಸಂಘದ ಪೂರ್ವಅಧ್ಯಕ್ಷರುಗಳುಹಾಗೂ ಅವರ ಶ್ರೀಮತಿಯವರ ತಂಡದವರಿಂದಅಂಬರೀಶ್ ನುಡಿನಮನ ನೃತ್ಯರೂಪಕಅಕರ್ಷಕವಾಗಿತ್ತು.

ಶ್ರೀಮತಿ ಸವಿತಾ ನಾಯಕ್‍ರಸಪ್ರಶ್ನೆಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಎಲ್ಲಾ ಪ್ರಾಯೋಜಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು

ಅಲ್‍ಐನ್‍ಕನ್ನಡ ಸಂಘದ ಯಶಸ್ವಿ ಹೆಜ್ಜೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿರುವ ಸದಸ್ಯರುಗಳಾದ ಶ್ರೀಮತಿಯರುಗಳಾದ ಶಾಲಿನಿ ಡಿ’ಸೋಜಾ, ಉಷಾ ಹರ್ಷಾ, ಡಿಂಪಲ್ ಆಳ್ವ,ಡಾ. ರಶ್ಮಿ ನರೇನ್ ಮತ್ತು ಶ್ರೀಯುತರುಗಳಾದ ಆದರ್ಶ್ ಲೂವಿಸ್, ಸೈಮನ್ ನವೀನ್ ಫೆರ್ನಾಂಡಿಸ್, ಸುದರ್ಶನ್‍ಕೆ.ಎಸ್. ಡೆರಿಕ್‍ಜೋಸೆಪ್ಫ್, ರೋನಾಲ್ಡ್ ಪಿರೇರಾ, ಡಾ ಹರ್ಷ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಲ್‍ಐನ್‍ಕನ್ನಡ ಸಂಘದ2019 – 2020 ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರಿಗೆಜವಬ್ಧಾರಿಯನ್ನು ಹಸ್ತಾಂತರಿಸಲಾಯಿತು.

ಶ್ರೀಮತಿ ಕಾಮಿನಿಯವರು ಸರ್ವರಿಗೂ ವಂದನೆಗಳನ್ನು ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.

Photo Album


Spread the love