ಕೊಲ್ಲೂರು: ಮೂಕಾಂಬಿಕೆ ಸನ್ನಿಧಾನದಲ್ಲಿ ಅಬ್ಬರದ ಹುಲಿವೇಷ ಸೇವೆ
ಕುಂದಾಪುರ: ಜಿಲ್ಲೆಯ ಪ್ರಸಿದ್ಧ ಹುಲಿ ವೇಷಧಾರಿಗಳ ತಂಡವಾದ ಮಲ್ಪೆ ಕೊಳ ಫ್ರೆಂಡ್ಸ್ ತಂಡದ ಸದಸ್ಯರು ಹಾಗೂ ಹರೀಶ್ ತೋಳಾರ್ ಆಯೋಜನೆಯಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ಬೆಳಿಗ್ಗೆ ಕೊಲೂರು ಮುಕಾಂಬಿಕಾ ದೇವಸ್ಥಾನದ ಆವರಣದ ಒಳಗೆ ಹುಲಿ ಮೇಷ ನರ್ತನ ಸೇವೆ ನಡೆಯಿತು.
35 ಕ್ಕಿಂತಲೂ ಅಧಿಕ ಹುಲಿವೇಷಧಾರಿಗಳು ಮೂಕಾಂಬಿಕಾ ಸಭಾಭವನದಿಂದ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದರು.
ದೇವಸ್ಥಾನದ ಮುಂಭಾಗದಲ್ಲಿ ಧೂಪ ಸೇವೆ ಮಾಡಿದ ಬಳಿಕ ಧ್ವಜ ಸ್ತಂಭದ ಎದುರು ಹುಲಿವೇಷಧಾರಿಗಳು ನರ್ತನ ಸೇವೆ ನಡೆಸಿದರು. ಹುಲಿವೇಷಧಾರಿಗಳ ಅಬ್ಬರದ ನರ್ತನಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಹುಲಿವೇಷಧಾರಿಗಳ ನರ್ತನವನ್ನು ಕಣ್ ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಹೋಂ ಗಾರ್ಡ್ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ತಾ.ಪಂ ಮಾಜಿ ಸದಸ್ಯರಾದ ರಮೇಶ್ ಗಾಣಿಗ, ಸದಾಶಿವ ಡಿ ಪಡುವರಿ, ಗ್ರೀಷ್ಮ ಭೀಡೆ, ಜಿಲ್ಲಾ ಬಿಜೆಪಿ ಮೋರ್ಚಾ ಉಪಾಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ ಪಡುಕೋಣೆ, ಬೈಂದೂರು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಉಡುಪಿ ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ, ಕೊಳ ಫ್ರೆಂಡ್ಸ್ ನ ರವಿ ಸಾಲ್ಯಾನ್, ಗಣೇಶ್ ಸಾಲ್ಯಾನ್, ಮಂಜುನಾಥ ಕೊಳ, ಉದ್ಯಮಿ ವಿವೇಕ್ ಸುವರ್ಣ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಗೋಪಾಲ ನಾಡ ಇದ್ದರು.