Home Mangalorean News Kannada News ಕೋಟ: ಆರೋಗ್ಯದ ಕುರಿತು ಎಚ್ಚರ ವಹಿಸಿ ; ಸಾಸ್ತಾನ ಚರ್ಚಿನ ಧರ್ಮಗುರು ವಂ ಜೋನ್ ವಾಲ್ಟರ್...

ಕೋಟ: ಆರೋಗ್ಯದ ಕುರಿತು ಎಚ್ಚರ ವಹಿಸಿ ; ಸಾಸ್ತಾನ ಚರ್ಚಿನ ಧರ್ಮಗುರು ವಂ ಜೋನ್ ವಾಲ್ಟರ್ ಮೆಂಡೊನ್ಸಾ

Spread the love

ಕೋಟ: ಪ್ರತಿಯೊಬ್ಬರು ತಮ್ಮ ಆರ್ಯೋಗದ ಕುರಿತು ಸದಾ ಗಮನ ವಹಿಸುವುದರಿಂದ ಕಾಯಿಲೆ ರಹಿತರಾಗಿ ಬದಕುವುದು ಸಾಧ್ಯವಿದೆ ಎಂದು ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ ಜೋನ್ ವಾಲ್ಟರ್ ಮೆಂಡೊನ್ಸಾ ಹೇಳಿದರು.

freemedicalcampsastan 22-06-2014 08-47-16

ಅವರು ಸೋಮವಾರ ಸಾಸ್ತಾನ ಚರ್ಚಿನ ಮೈತ್ರಿ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆ ಹಾಗೂ ಚ್ಯವನ ವ್ಯದ್ಯಕೀಯ ಸಂಸ್ಥೆ ಉಡುಪಿ ಇವರುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಆರೋಗ್ಯದ ಕುರಿತು ಸದಾ ಮುತುವರ್ಜಿ ವಹಿಸಿ ವ್ಯವಸ್ಥಿತ ಆಹಾರ ಪದ್ದತಿಯನ್ನು ರೂಡಿಕೊಂಡಾಗ ಆರೋಗ್ಯದಿಂದ ಬದುಕಲು ಸಾಧ್ಯವಿದೆ ಎಂದರು.

ಚ್ಯವನ ಆರೋಗ್ಯ ಕೇಂದ್ರ ಉಡುಪಿ ಇದರ ನಿರ್ದೇಶಕರಾದ ಡಾ ಬಿ ಎ ಭಟ್ ಮಾತನಾಡಿ ಕಾಯಿಲೆ ಬಂದ ಬಳಿಕ ಕೊರಗುವುದಕ್ಕಿಂತ್ ಕಾಯಿಲೆ ಬರುವ ಮೊದಲು ನಮ್ಮ ಆರೋಗ್ಯವನ್ನು ಸದಾ ತಪಾಸಣೆ ನಡೆಸಿ ಸುಸ್ಥಿತಿಯಲ್ಲಿಟ್ಟಾಗ ಸುಮ್ಮನೆ ಕೊರಗುವುದು ತಪ್ಪುತ್ತದೆ. ನಮ್ಮ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿದಾಗ ಮುಂದೆ ಬರುವ ಭೀಕರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಅಧ್ಯಕ್ಷರಾದ ವಲೇರಿಯನ್ ಆಲ್ಮೇಡಾ, ಮಹಿಳಾ ಸಂಘಟನೆಯ ಜಸಿಂತಾ ಸೆರಾವೊ ಚ್ಯವನ ಮೆಡಿಕಲ್ ಇದರ ಡಾ ನಿಕಿ ಇನ್ನಿತರರು ಉಪಸ್ಥಿತರಿದ್ದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದ ಗುಂಪಿನ ವರ್ಗಿಕರಣ, ಮಧುಮೇಹ ತಪಾಸಣೆ, ರಕ್ತದೊತ್ತಡ ತಪಾಸಣೆ, ಮೂಳೆ ಸಾಂದ್ರತೆಯ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು. ಅಲ್ಲದೆ ಇತರ ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳ ತಪಾಸಣೆಯನ್ನು ರಿಯಾಯತಿ ದರದಲ್ಲಿ ನಡೆಸಲಾಯಿತು. ತಪಾಸಣೆಯಲ್ಲಿ ಪರಿಸರದ ಹಲವಾರು ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.


Spread the love

Exit mobile version