ಕೋಟ: ಎಜುಕೇರ್ ಗ್ರೂಪ್, ಸಾಸ್ತಾನ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಬಾಲಮೇಳ 2015 ಪುಟಾಣಿಗಳ ಮನೋರಂಜನಾ ಕಾರ್ಯಕ್ರಮ ಪಾಂಡೇಶ್ವರ ಹಿ.ಪ್ರಾ.ಶಾಲಾ ಮೈದಾನದಲ್ಲಿ ಜರಗಿತು. ಬ್ರಹ್ಮಾವರ ವಲಯದ ಎಲ್ಲಾ 23 ಅಂಗನವಾಡಿಗಳಿಂದ ಮೂನ್ನೂರಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಗ್ರೇಸಿ.ಎಲ್.ಗೊನ್ಸಾಲ್ವಿಸ್, ಶಿಶು ಅಭಿವ್ರದ್ಧಿ ಇಲಾಖೆ ಬ್ರಹ್ಮಾವರÀ ಯೋಜನಾಧಿಕಾರಿ ಶ್ರೀಮತಿ ಜಯಂತಿ ಬಿ.ಜಿ., ಮೆಲ್ವಿಚಾರಕಿ ಶ್ರೀಮತಿ ಮೋಹಿನಿ ಗೌಡ, ಅವರ್ಸೆ ವಲಯದ ಮೆಲ್ವಿಚಾರಕಿ ಶ್ರೀಮತಿ ಭಾಗೀರಥಿ ಆಚಾರ್ಯ, ಕೆಮ್ಮಣ್ಣು ವಲಯದ ಮೆಲ್ವಿಚಾರಕಿ ಸವಿತಾ.ಡಿ, ಸಾೈಬರ್‍ಕಟ್ಟೆ ವಲಯದ ಮೆಲ್ವಿಚಾರಕಿ ಪೂರ್ಣಿಮಾ, ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್, ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೇಮ್ಸ್ ಡಿಸಿಲ್ವಾ ಆಗಮಿಸಿದ್ದರು.
ಎಜುಕೇರ್ ಗ್ರೂಪ್ ನ ಅಧ್ಯಕ್ಷರಾದ ಸ್ಟೀಫನ್ ರೋಡ್ರಿಗಸ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ವಿ.ಆರ್.ಫ್ರೆಂಡ್ಸ್‍ನ ಸುದರ್ಶನ್, ದಿನೇಶ್ ಭಾಂದವ್ಯ, ಗಣೇಶ್ ಮೆಂಡನ್ ಹಾಗೂ ಅಭಿ ಪಾಂಡೇಶ್ವರ ಸಹಕರಿಸಿದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ವಿಲ್ಮಾ ಫೆರ್ನಾಂಡಿಸ್ ಹಾಗು ರಿಶಾ ಆಗಮಿಸಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ರವರು ನಿರೂಪಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅಂಗನವಾಡಿಯ 523 ಪುಟಾಣಿಗಳಿಗೂ ಪ್ರಮಾಣಪತ್ರ ಮತ್ತು ಉಡುಗೊರೆ ನೀಡಲಾಯಿತು. ಇದೇ ಸಂದರ್ಭ ಎಲ್ಲಾ ಅಂಗನವಾಡಿಯ 23 ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಆಗಮಿಸಿದ ಎಲ್ಲಾ ಮಕ್ಕಳಿಗಾಗಿ ಉಚಿತ ಮಿಠಾಯಿ ಅಂಗಡಿ, ಬಲೂನ್ ಅಂಗಡಿ ಹಾಗೂ ಟ್ಯಾಟೋ ಅಂಗಡಿಗಳು ವಿಶೇಷ ಆಕರ್ಷಣೆಯಾಗಿದ್ದವು.