ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ
ಕೋಟ: ಬ್ಲಾಕ್ ಕಾಂಗ್ರೆಸ್ ಕೋಟ ” ಇಂದಿರಾ ಭವನ ಕಚೇರಿ ” ನಲ್ಲಿ ಈ ದೇಶ ಕಂಡ ಉಕ್ಕಿನ ಮಹಿಳೆ “ದಿ! ಇಂದಿರಾ ಗಾಂಧಿ ಪುಣ್ಯತಿಥಿ” ಕಾರ್ಯಕ್ರಮವನ್ನು ಎಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ “ಶಂಕರ್ ಎ ಕುಂದರ್ ” ಅವರು ಮಾತನಾಡಿ ಇಂದಿರಾ ಗಾಂಧಿ ಈ ಹೆಸರಿನಲ್ಲೇ ಏನೋ ಒಂದು ತರ ಶಕ್ತಿ, ಇಂದಿರಾ ಎಂದರೆ ಎಲ್ಲವೂ ಪ್ರಥಮ ಭಾರತದ ಹಾಗೂ ಇಂದಿನ ತನಕ ಏಕೈಕ ಮಹಿಳೆ ಪ್ರಧಾನಿ ನಮ್ಮೆಲ್ಲರ ಪ್ರೀತಿಯ ಇಂದಿರಮ್ಮ, ಭವ್ಯ ಭಾರತದ ಅಭಿವೃದ್ಧಿ ಹರಿಕಾರೇ, ಇಪ್ಪತ್ತು ಅಂಶದ ಕಾರ್ಯಕ್ರಮ ಎಂತಹ ಕ್ರಾಂತಿಕಾರಿ ಕಾರ್ಯಕ್ರಮಗಳು , ಉಳುವವನೇ ಹೊಲದೊಡೆಯ, ಬ್ಯಾಂಕ್ ರಾಷ್ಟ್ರೀಕರಣ, ಕೃಷಿ, ನೀರಾವರಿ, ಮಿಲಿಟರಿ, ವಿದೇಶಿ ನೀತಿ, ಆಂತರಿಕ ಭದ್ರತೆ, ಆರೋಗ್ಯ, ಶಿಕ್ಷಣ, ವಸತಿ ಮೂಲಭೂತ ಸೌಕರ್ಯ, ಅಣು ವಿಜ್ಞಾನ ಇತ್ಯಾದಿ, ಸಂಘ ಪರಿವಾರದ ಕೋಮು ಸೌಹಾರ್ದತೆಗೆ ಅಪಾಯ ಎಂದು ತಿಳಿದಾಗ ಸಂವಿಧಾನದ ಪೀಠಿಕೆಯಲ್ಲೇ “ಜಾತ್ಯಾತೀತ ಭಾರತ ” ಸೇರ್ಪಡೆ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಅಭೂತಪೂರ್ವ ಜಯ ಸಾದಿಸಿ ಬಾಂಗ್ಲಾ ವಿಮೋಚನ ಮಾಡಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ವಾಜಪೇಯಿಯವರಿಂದ ” ದುರ್ಗೆ ” ಎಂದು ಕರೆಯಲ್ಪಟ್ಟ ತಾಯಿ, ಪ್ರತ್ಯೇಕ ರಾಷ್ಟ್ರದ ಕೂಗು ಹೇಳುತ್ತಿದ್ದ ಖಲಿಸ್ತಾನಿಗಳನ್ನ ಬಗ್ಗು ಬಡಿದು ದೇಶ ರಕ್ಷಣೆ ಮಾಡಿ ಅದಕ್ಕಾಗಿ ಪ್ರಾಣತೆತ್ತ ಮಹಾತಾಯಿ ಎಂದು ಭಾವುಕರಾಗಿ ನುಡಿದರು.
ಕಾಂಗ್ರೆಸ್ ಮುಖಂಡರಾದ “ಗೋಪಾಲ ಬಂಗೇರ” ರವರು ಮಾತನಾಡಿ ಈ ದೇಶಕ್ಕೆ ಇಂದಿರಾಗಾಂಧಿಯವರ ನಾಯಕತ್ವ ಈ ಕಾಲಘಟ್ಟದಲ್ಲಿ ಅವಶ್ಯಕವಾಗಿದೆ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಈ ದೇಶದ ಆಸ್ತಿ, ಇವತ್ತು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಒಂದಷ್ಟು ಮತ ಠೇವಣಿಯಾಗಿ ಇದ್ದರೆ ಅದಕ್ಕೆ ಕಾರಣ ಇಂದಿರಾಗಾಂಧಿ ಅವರು ಎಂದು ನುಡಿದರು,
ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾಸ್ತಾನ ಸಹಕಾರಿ ಬ್ಯಾಂಕ್ ನ ಸದಸ್ಯರಾದ “ಚಂದ್ರಮೋಹನ್ ಪೂಜಾರಿ ಪಾಂಡೇಶ್ವರ ” ರವರು ಮಾತನಾಡಿ ಬಲಿಷ್ಠ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಭಾರತದ ಶಿಲ್ಪಿ ಹಾಗೂ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ‘ದುರ್ಗಿ’ಯಂತೆ ಹೋರಾಡಿ ಹುತಾತ್ಮರಾದ ಮಾಜಿ ಪ್ರಧಾನಿ, ಹೆಮ್ಮೆಯ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯವರು ನಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆ. ಅಸಮಾನತೆ ಮತ್ತು ಬಡತನಗಳ ನಿರ್ಮೂಲನೆಗಾಗಿ ಇಂದಿರಾ ಗಾಂಧಿಯವರು ಹಮ್ಮಿಕೊಂಡ ಕಾರ್ಯಕ್ರಮಗಳು ನಮ್ಮ ಆಡಳಿತಕ್ಕೆ ಇಂದಿಗೂ ಮಾದರಿಯಾಗಿವೆ. ದೇಶದ ಹಿತಕ್ಕಾಗಿ ತನ್ನ ಪ್ರಾಣವನ್ನೆ ಬಲಿದಾನಗೈದ ಇಂದಿರಾ ಗಾಂಧಿಯವರನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸಾಲಿಗ್ರಾಮದ ಪ್ರತಿ ಪಕ್ಷ ನಾಯಕರಾದ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದ್ಯಸರಾದ ರವಿ ಕಾಮತ್ ಗುಂಡ್ಮಿ, ಹಿರಿಯ ಕಾಂಗ್ರೆಸ್ ನಾಯಕರಾದ ಬಸವ ಪೂಜಾರಿ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಕೋಟ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಕೋಟ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀಕಾಂತ್ ಆಚಾರ್ ಪಾಂಡೇಶ್ವರ, ರತ್ನಾಕರ್ ಶ್ರೀಯಾನ್ ಕೋಟ ಪಡುಕೆರೆ, ರವಿ ಕುಮಾರ್ ಚಚ್ಚ್ಕೆರೆ, ರಾಜು ಪೂಜಾರಿ ತೊಡ್ಕಟ್ಟು, ಶಂಕರ್ ಪೂಜಾರಿ ಪಾರಂಪಳ್ಳಿ, ರತ್ನಾಕರ ಪೂಜಾರಿ ಪಾರಂಪಳ್ಳಿ, ಯಾಶಿನ್ ಪಾರಂಪಳ್ಳಿ, ಸಚಿನ್ ಶೆಟ್ಟಿ ವಡ್ಡರ್ಸೆ ಉಪಸ್ಥಿತರಿದ್ದು,
ಕೋಟ ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಗಣೇಶ್ ಕೆ ನೆಲ್ಲಿಬೆಟ್ಟು ಅವರು ಸ್ವಾಗತಿಸಿ ಧನ್ಯವಾದಿಸಿದರು.