ಕೋಟ: ಮಣೂರು ಮನೆಗಳ್ಳತನ ಪ್ರಕರಣ- ಆರೋಪಿಯ ಬಂಧನ
ಕೋಟ: ಮನೆಯವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಗಳ್ಳತನ ಮಾಡಿದ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ
ಬಂಧಿತ ಆರೋಪಿಯನ್ನು ಮಣೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ (38) ಎಂದು ಗುರುತಿಸಲಾಗಿದೆ.
ಫೆಬ್ರವರಿ 23 ರಂದು ಮಣೂರು ಕೋಯ್ಕುಡು ನಿವಾಸಿಯಾದ ಶ್ರೀಧರ ರಘುರಾಮ ಶೆಟ್ಟಿಯವರ ಮನೆಯವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಯ ಬಾಗಿಲು ಮುರಿದು ಸುಮಾರು 2.70 ಲಕ್ಷ ರೂ ಗಳ ಚಿನ್ನಾಭರಣವನ್ನು ಕದ್ದೊಯ್ದ ಕುರಿತು ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ, ಐ.ಪಿ.ಎಸ್, ಇವರ ನಿರ್ದೇಶನದಲಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ ಮತ್ತು ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ, ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಂ.ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣಾ ಕಾನೂನು & ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಪೊಲೀಸ್ ಉಪನಿರೀಕ್ಷಕ ( ತನಿಖೆ) ಇವರು ಪ್ರಕರಣದ, ಖಚಿತ ಮಾಹಿತಿಯನ್ನು ಪಡೆದು ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ತೆಕ್ಕಟ್ಟೆ ಬಳಿಯಲ್ಲಿ ದಸ್ತಗಿರಿಗೊಳಿಸಿ, ಆತನಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೋಟಾ ಪೊಲೀಸ್ ಠಾಣೆಯ ಕಾನೂನು & ಸುವ್ಯವಸ್ಥೆ, ವಿಭಾಗದ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ ಮತ್ತು ಸುಧಾಪ್ರಭು, ಪಿ.ಎಸ್.ಐ. ( ತನಿಖೆ), ಜಯಪ್ರಕಾಶ್, ಎ.ಎಸ್.ಐ. ಮತ್ತು ಹೆಡ್ ಕಾನ್ಸಟೇಬಲ್ ರೇವತಿ, ಕೃಷ್ಣ,ಶೇರೆಗಾರ, ಶ್ರೀಧರ್ ಹಾಗೂ ಕಾನ್ಸಟೇಬಲ್ ರಾಘವೇಂದ್ರ ಮತ್ತು ವಿಜಯೇಂದ್ರ ರವರು ಪಾಲ್ಗೊಂಡಿರುತ್ತಾರೆ,