Home Mangalorean News Kannada News ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ –  ಕೋಟ ಶ್ರೀನಿವಾಸ ಪೂಜಾರಿ 37687 ಮತಗಳ ಮುನ್ನಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ –  ಕೋಟ ಶ್ರೀನಿವಾಸ ಪೂಜಾರಿ 37687 ಮತಗಳ ಮುನ್ನಡೆ

Spread the love

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 4,29,797 ಲಕ್ಷ ಮತ

ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 2,79,353 ಲಕ್ಷ ಮತಗಳು

ಬಿಜೆಪಿಗೆ 150444 ಮತಗಳ ಮುನ್ನಡೆ

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 326330 ಲಕ್ಷ ಮತ

ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 202680 ಲಕ್ಷ ಮತಗಳು

ಬಿಜೆಪಿಗೆ 123650 ಮತಗಳ ಮುನ್ನಡೆ

Nota – 5108

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 210116ಲಕ್ಷ ಮತ

ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 127459

ಬಿಜೆಪಿ ಗೆ 82657 ಮತಗಳ ಮುನ್ನಡೆ

ಮೊದಲ ಸುತ್ತು ಅಧಿಕೃತ

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 42912

ಜಯಪ್ರಕಾಶ್ ಹೆಗ್ಡೆ- 28459

ಬಿಜೆಪಿ ಮತಗಳ ಮುನ್ನಡೆ 14,453

Nota – 1903

ಕೋಟ ಶ್ರೀನಿವಾಸ ಪೂಜಾರಿ 37687 ಮತಗಳ ಮುನ್ನಡೆ

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 93052
ಜಯಪ್ರಕಾಶ್ 55365

ಬಿಜೆಪಿ ಮತಗಳ ಮುನ್ನಡೆ 37687

 ಕೋಟ ಶ್ರೀನಿವಾಸ ಪೂಜಾರಿ 9818 ಮತಗಳ ಮುನ್ನಡೆ

  • ಕೆ. ಜಯಪ್ರಕಾಶ್ ಹೆಗ್ಡೆ – 13560
  • ಕೋಟ ಶ್ರೀನಿವಾಸ ಪೂಜಾರಿ – 23375

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಆರಂಭ

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಮಂಗಳವಾರ ಬೆಳಿಗ್ಗೆ ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ ಆರಂಭವಾಗಿದೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ನಡೆದ ಮೊದಲ ಹಂತ ಮತದಾನದ ವೇಳೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆದಿತ್ತು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಶೇ.77.15ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 10 ಮಂದಿ ಸ್ಪರ್ಧಿಗಳಿದ್ದು, ಬಿಜೆಪಿಯ ಹಾಲಿ ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರ ನಡುವಿನ ಜಿದ್ದಾಜಿದ್ದಿನ ಸೆಣಸಾಟದ ಹಣೆಬರಹ ಮಧ್ಯಾಹ್ನದ ವೇಳೆಗೆ ನಿರ್ಧಾರಗೊಳ್ಳಲಿದೆ.

ಈ ಕ್ಷೇತ್ರದ ಒಟ್ಟು 15,85,162 ಮತದಾರರ ಪೈಕಿ 12,22,888 ಮಂದಿ ಎ.26ರಂದು ನಡೆದ ಮತದಾನದಲ್ಲಿ ಮತ ಚಲಾಯಿಸಿದ್ದರು. 7,68,215 ಪುರುಷ ಮತದಾರರಲ್ಲಿ 5,94,565 ಮಂದಿ ಹಾಗೂ 8,16,910 ಮಹಿಳಾ ಮತದಾರರ ಪೈಕಿ 2,28,316 ಮಂದಿ ಮತ ಚಲಾಯಿಸಿದ್ದಾರೆ. ಅಲ್ಲದೇ 37 ಮಂದಿ ಇತರೆ ಮತದಾರರಲ್ಲಿ ಏಳು ಮತದಾನ ಮಾಡಿದ್ದರು. ಈ ಎಲ್ಲಾ ಮತಗಳೊಂದಿಗೆ 7800ಕ್ಕೂ ಅಧಿಕ ಅಂಚೆ ಮತಪತ್ರಗಳ ಹಾಗೂ 260+ ಸರ್ವಿಸ್ ಮತಗಳ ಎಣಿಕೆಯೂ ನಡೆಯಬೇಕಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕನಿಷ್ಠ 15ರಿಂದ ಗರಿಷ್ಠ 19 ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಲಿದೆ. ಅವುಗಳ ವಿವರ ಹೀಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ: 222 ಮತಗಟ್ಟೆಗಳು-16 ಸುತ್ತುಗಳು, ಉಡುಪಿ: 226-17, ಕಾಪು: 209-15, ಕಾರ್ಕಳ: 209-15, ಶೃಂಗೇರಿ: 256-19, ಮೂಡಿಗೆರೆ: 231-17, ಚಿಕ್ಕಮಗಳೂರು: 261-19 ಹಾಗೂ ತರಿಕೆರೆ: 228-17 ಸುತ್ತುಗಳು.

ಪ್ರತಿ ಕ್ಷೇತ್ರದ ಮತ ಎಣಿಕೆ 14 ಮೇಜುಗಳಲ್ಲಿ ನಡೆಯಲಿವೆ. ಕುಂದಾಪುರ ಕಾರ್ಕಳ, ಶೃಂಗೇರಿ, ತರೀಕೆರೆ ಕ್ಷೇತ್ರಗಳ ಮತ ಎಣಿಕೆ ಒಂದೇ ಕೋಣೆಯಲ್ಲಿ ನಡೆದರೆ, ಉಳಿದ ನಾಲ್ಕು ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ರೂಮುಗಳಲ್ಲಿ ನಡೆಯಲಿವೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿರುವ ಮತ ಎಣಿಕಾ ಕೇಂದ್ರದಲ್ಲಿ ಸುಮಾರು 350 ಪೊಲೀಸರು ಮತ್ತು ಅಧಿಕಾರಿಗಳು, ಓಂದು ಕೆಎಸ್ಆರ್ಪಿ, ಒಂದು ಜಿಲ್ಲಾ ಸಶಸ್ತ್ರ ಪಡೆ ಮತ್ತು ಒಂದು ಅಗ್ನಿಶಾಮಕ ವಾಹನ ವನ್ನು ನಿಯೋಜಿಸಲಾಗಿದೆ.

ಜಿಲ್ಲೆಯ ಹಲವು ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅದಕ್ಕಾಗಿ ಸುಮಾರು 400 ಪೊಲೀಸರು ಮತ್ತು ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ಜಿಲ್ಲೆಯಾದ್ಯಂತ ಮೂರು ಕೆಎಸ್ಆರ್ಪಿ, ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಗಳನ್ನು ನಿಯೋಜಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.


Spread the love

Exit mobile version