ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ಕಾಲವೂ ನಾಗರೀಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಯುವ ಸಂಘಟನೆಗಳು ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿದರೆ ಸಮಾಜ ಅಭಿವೃದ್ಧಿ ಕಾಣುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಮಲೈ ಹೇಳಿದರು.
ಅವರು ಕೋಟ ಮೂರುಕೈ ಬಳಿ ಅಘೋರೇಶ್ವರ ಕಲಾರಂಗ ಆಯೋಜಿಸಿದ್ದ ಸಮ್ಮಿಲನ ತೃತೀಯ ವರ್ಶದ ವಾರ್ಶಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಮಾರಂಭದಲ್ಲಿ ಜಾನಪದ ಕ್ಷೇತ್ರದ ಸಾಧಕಿ ಕಮಲಾ ನಾರಿ ಪಿ, ಯಕ್ಷಗಾನ ಕ್ಷೇತ್ರದಲ್ಲಿ ಸಾದನೆಗೈದ ಸಾಧಕ ಸರ್ವೋತ್ತಮ ಗಾಣಿಗ ಮತ್ತು ಖ್ಯಾತ ಈಜು ತರಬೇತುದಾರ ಗೋಪಾಲಕೃಷ್ಣ ಅಡಿಗ ಅವರುಗಳನ್ನುಸನ್ಮಾನಿಸಲಾಯಿತು. ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ರಾಜೇಶ್ ಕೊಕ್ಕರ್ಣೆ ಮತ್ತು ಕೇಶವ ಗಾಣಿಗ ಹಾಗೂ ರಾಜು ಕೋಟ್ಯಾನ್ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.
ಬೆಂಗಳೂರಿನ ಉದ್ಯಮಿ ಕೆ. ಪರಮೇಶ್ವರ ನಾಯರಿ ಅವರು ಬಡ ವಿಧ್ಯಾಥರ್ಿನಿ ಅರ್ಪಿತಾ ಅವಳ ಶಿಕ್ಷಣ ದತ್ತು ಸ್ವೀಕಾರ ಪಡೆದರು. ಸಮಾರಂಭದಲ್ಲಿ ರೋಟರಿ ಜಿಲ್ಲೆ 3180ರ ಮಾಜಿ ಸಹಾಯಕ ಗವರ್ನರ್ ರೊ. ಅಭಿನಂದನ ಶಟ್ಟಿ, ಗೀತಾನಂದ ಪೌಂಡೇಶನ್ನ ಪ್ರವರ್ತಕರಾದ ಆನಂದ ಸಿ. ಕುಂದರ್, ಉದ್ಯಮಿ ಪರಮೇಶ್ವರ ನಾಯರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅದ್ಯಕ್ಷೆ ಪಿ ಸಾಧು, ಪಟ್ಟಣ ಪಂಚಾಯಿತಿ ಸದಸ್ಯ ಕಾರ್ಕಡ ರಾಜು ಪೂಜಾರಿ, ಕಲಾರಂಗದ ಗೌರವಾದ್ಯಕ್ಷ ಮುರಳೀಧರ ಪೈ, ಅದ್ಯಕ್ಷ ಶಿವಾನಂದ ನಾಯರಿ, ಕಾರ್ಯದರ್ಶಿ ರಾಧಕೃಷ್ಣ ಹಾಗೂ ಖಜಾಂಚಿ ನಿತ್ಯಾನಂದ ನಾಯರಿ ಉಪಸ್ಥಿತರಿದ್ದರು.
ಕಲಾರಂಘದ ಪ್ರಭಾಕರ ನಾರಿ ಸ್ವಾಗತಿಸಿದರು. ನ್ಯಾಯವಾದಿ ಶ್ಯಾಮಸುಂದರ ನಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಧಕೃಷ್ಣ ವರಧಿ ವಾಚಿಸಿದರು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ ನಾರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ ಮತ್ತು ಸ್ಮಾರ್ಟ್ ಗೈಸ್ ಡ್ಯಾನ್ಸ್ ಅಕಾಡೆಮಿ ಉಡುಪಿ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.