Home Mangalorean News Kannada News ಕೋಟ: ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು

ಕೋಟ: ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು

Spread the love
RedditLinkedinYoutubeEmailFacebook MessengerTelegramWhatsapp

ಕೋಟ: ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು

ಕೋಟ: ರೆಸಾರ್ಟ್ ಕಂಪೌಂಡ್ ಒಂದರ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಕೋಟತಟ್ಟು ವ್ಯಾಪ್ತಿಯ ಪಡುಕೆರೆ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಕೋಟ ತಟ್ಟು ಪಡುಕೆರೆಯ ಸುಧೀರ್ ಕೋಟ್ಯಾನ್ ಹಾಗೂ ಶಾರದಾ ಅವರ ಪುತ್ರ ಸುಶಾಂತ್ (3) ಎಂದು ಗುರುತಿಸಲಾಗಿದೆ.

ಕೋಟತಟ್ಟು ಪಡುಕೆರೆಯ ಬೀಚ್ ಸಮೀಪ ಇರುವ ಪೃಥ್ವಿರಾಜ್ ರವರಿಗೆ ಸೇರಿದ ರೆಸಾರ್ಟ್ ಎದುರಿನ ಗೇಟ್ ಬಳಿ ಸಂಜೆ ಪಕ್ಕದ ಮನೆಯ ಹುಡುಗನ ಜೊತೆ ಆಟವಾಡುತ್ತಿದ್ದ ಸುಶಾಂತ್ ಮೈ ಮೇಲೆ ಆಕಸ್ಮಿಕವಾಗಿ ಸ್ಲೈಡಿಂಗ್ ಗೇಟ್ ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಮಗುವಿನ ತಂದೆ ಕೋಟ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ದಾರಿ ಮಧ್ಯೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ರೆಸಾರ್ಟ್ ಮಾಲಿಕ ಕಬ್ಬಿಣದ ಗೇಟನ್ನು ಸರಿಯಾಗಿ ಜೋಡಣೆ ಮಾಡದ ಕಾರಣ ಅವರ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.


Spread the love

Exit mobile version