ಕೋಮುದ್ವೇಷ ಕೆರಳಿಸುವ ಪೋಸ್ಟ್; ವಾಟ್ಸ್ ಆ್ಯಪ್ ಅಡ್ಮಿನ್ ಸಹಿತ ಇಬ್ಬರ ಬಂಧನ
ಮಂಗಳೂರು: ವಾಟ್ಸ್ ಆ್ಯಪ್ ನ ಗ್ರೂಪೊಂದರಲ್ಲಿ ಧರ್ಮನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮು ದ್ವೇಶ ಕೆರಳಿಸುವ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪಿನಂಗಡಿಯ ಬಾಲಕೃಷ್ಣ ಪೂಜಾರಿ (48) ಮತ್ತು ಬಂಟ್ವಾಳ ಇರಾ ಗ್ರಾಮದ ಸತೀಶ್ ಎಂದು ಗುರುತಿಸಲಾಗಿದೆ.
ಬಾಲಕೃಷ್ಣ ಪೂಜಾರಿ ಚಾಲಕನಾಗಿದ್ದು, ಗ್ರೂಪೊಂದರಲ್ಲಿ ಕೋಮುದ್ವೇಶ ಕೆರಳಿಸುವ ಹಾಗೂ ಮಹಿಳೆಯೊರ್ವರನ್ನು ಕೀಳು ಮಟ್ಟದಲ್ಲಿ ನಿಂದಿಸುವ ಮತ್ತು ಆಕ್ರಮಣಕಾರಿಯಾದ ಸಂದೇಶವನ್ನು ಹಾಕಿ, ಇತರ ಗ್ರೂಪ್ ಗಳಿಗೂ ಹರಿಯಬಿಟ್ಟಿದ್ದು ಸತೀಶ್ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಆಗಿದ್ದು, ಈತನ ಮೇಲೂ ಕ್ರಮ ಜರುಗಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಬಂಧಿತರು ಆರೋಪಿಗಳು ಧಾರ್ಮಿಕ ಭಾವನೆಗಳ ಹಾನಿಯುಂಟು ಮಾಡಬಲ್ಲ, ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.