Home Mangalorean News Kannada News ಕೋಮುಸಾಮರಸ್ಯ ವೃದ್ದಿಗೆ ಪ್ರಯತ್ನ; ಕ್ರೈಸ್ತ ಧರ್ಮಗುರುಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಭೇಟಿ

ಕೋಮುಸಾಮರಸ್ಯ ವೃದ್ದಿಗೆ ಪ್ರಯತ್ನ; ಕ್ರೈಸ್ತ ಧರ್ಮಗುರುಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಭೇಟಿ

Spread the love

 ಕೋಮುಸಾಮರಸ್ಯ ವೃದ್ದಿಗೆ ಪ್ರಯತ್ನ; ಕ್ರೈಸ್ತ ಧರ್ಮಗುರುಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಭೇಟಿ

ಮಂಗಳೂರು: ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಬಿಕರ್ನಕಟ್ಟೆ ಬಾಲಯೇಸು ಮಂದಿರದ ಧರ್ಮಗುರುಗಳು ಹಾಗೂ ಕುಲಶೇಖರ ಸಾಂತಾಕ್ರೂಜ್ ಕಾನ್ವೆಂಟಿನ ಧರ್ಮಭಗಿನಿಯರು ಸಂಘನಿಕೇತನದಲ್ಲಿ ಜರುಗಿತ್ತಿರುವ ಗಣೇಶ ಚತುರ್ಥಿ ಸಮಾರಂಭಕ್ಕೆ ಭಾಗವಹಿಸಿ ಹಿಂದೂ ಬಾಂಧವರಿಗೆ ಶುಭಾಶಯ ಕೋರಿದರು.

ಬಾಲ ಯೇಸು ಮಂದಿರದ ನಿರ್ದೇಶಕರಾದ ವಂ ಎಲಿಯಾಸ್ ಅವರು ಗಣಪತಿ ದೇವರಿಗೆ ಹಣ್ಣು, ಹಾಗೂ ರೇಷ್ಮೇ ಸೀರೆಯನ್ನು ಅರ್ಪಿಸಿ ಸಂಘದ ನಾಯಕರಿಗೆ ಶುಭಾಶಯ ಕೋರಿದರೆ ಅದಕ್ಕೆ ಪ್ರತಿಯಾಗಿ ಧರ್ಮಗುರುಗಳು ಮತ್ತು ಧರ್ಮಭಗಿನಿಯರಿಗೆ ಸಿಹಿ ನೀಡಿ ಗೌರವಿಸಿದರು.

image001rss-infant-jesus-ganeshotsava-20160906-001

 ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರ್ ಎಸ್ ಎಸ್ ಮಂಗಳೂರು ಮಹಾನಗರ ಸಂಚಾಲಕ ವಿ ನಾಗರಾಜ್ ಮಾತನಾಡಿ ನಿಜಕ್ಕೂ ಇಂದು ಕ್ರೈಸ್ತ ಧರ್ಮಗುರುಗಳು ಹಾಗೂ ಧರ್ಮಭಗಿನಿಯರನ್ನು ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಸ್ವಾಗತಿಸಲು ಅತೀವ ಸಂತಸವಾಗುತ್ತಿದೆ. ದೇವರೊಬ್ಬರೇ ಆದರೆ ಅವರನ್ನು ಆರಾಧಿಸುವ ವಿಧ ಬೇರೆಯದಿರಬಹುದು, ಕೊನೆಯಲ್ಲಿ ಪ್ರತಿಯೊಬ್ಬರು ಸಮಾಜದ ಹಾಗೂ ದೇಶದ ಅಭಿವೃದ್ಧಿಗಾಗಿ ಆರಾಧಿಸುವುದು ದೇವರನ್ನು. ನಮ್ಮ ಪ್ರಾರ್ಥನೆಯನ್ನು ದೇವರು ಖಂಡಿತವಾಗಿಯೂ ಆಲಿಸುತ್ತಾರೆ. ನಮ್ಮ ದೇಶದಲ್ಲಿ ಇಂದು ಶಾಂತಿ ಸೌಹಾರ್ದತೆ ನೆಲೆಗೊಳ್ಳಬೇಕಾಗಿದೆ. ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಅಲ್ಲದೆ ಪ್ರತಿಯೋಬ್ಬರು ಶಾಂತಿ ಸೌಹಾರ್ದತೆಯಿಂದ ಬಾಳಬೇಕಾಗಿದೆ.

ನಮ್ಮ ಆಹ್ವಾನವನ್ನು ಮನ್ನಿಸಿ ಇಂದು ಬಿಕರ್ನಕಟ್ಟೆ ಬಾಲ ಯೇಸು ಮಂದಿರದ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು ಬಂದಿರುವುದು ನಮಗೆ ನಿಜವಾಗಿಯೂ ಸಂತೋಷ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಶಾಂತಿ ಸೌಹಾರ್ದತೆ ಹಾಗೂ ಭ್ರಾತ್ರತ್ವ ಭಾವನೆ ಗಟ್ಟಿಗೊಳ್ಳಲಿ ಎಂದರು.

ಆರ್ ಎಸ್ ಎಸ್ ಮಂಗಳೂರು ನಗರ ಪ್ರಚಾರ ಪ್ರಮುಖ್ ಗಣೇಶ್ ಪ್ರಸಾದ್ ಮಾತನಾಡಿ ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಗಣೇಶೋತ್ಸವ ಸಮಾರಂಭಕ್ಕೆ ಧರ್ಮಗುರುಗಳನ್ನು ಆಹ್ವಾನಿಸಿದ್ದೇವು. ಇಂತಹ ಭೇಟಿಗಳು ಪರಸ್ಪರ ಧಾರ್ಮಿಕ ಸಾಮರಸ್ಯ ಹಾಗೂ ಭ್ರಾತ್ರತ್ವ ಭಾವನೆಯನ್ನು ಸಮಾಜದಲ್ಲಿ ಬೆಳೆಸಲು ಸಹಕಾರಿಯಾಗಲಿದೆ. ಅಗೋಸ್ತ್ 18 ರಂದು ಬಾಲ ಯೇಸು ಮಂದಿರದಲ್ಲಿ ರಕ್ಷಾ ಬಂಧನವನ್ನು ಆಚರಿಸಿದ್ದೇವು. ಅಲ್ಲದೇ ಮಂಗಳೂರು ಧರ್ಮಾಧ್ಯಕ್ಷರನ್ನು ಕೂಡ ಭೇಟಿಯಾಗಿ ಅವರಿಗೆ ರಕ್ಷೆಯನ್ನು ಕಟ್ಟಿದ್ದೇವು. ಸಮಾಜದಲ್ಲಿ ಪ್ರತಿಯೊಬ್ಬರೂ ಬ್ರಾತ್ರತ್ವದಿಂದ ಬದಕಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಇದೇ ಮೊದಲಬಾರಿ ಎಂಬಂತೆ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು ನಮ್ಮ ಗಣೇಶೋತ್ಸವ ಸಮಾರಂಭಕ್ಕೆ ಭೇಟಿ ನೀಡಿದ್ದು ನಮಗೆ ಸಂತಸ ತಂದಿದೆ ಎಂದರು.

ಬಿಕರ್ನಕಟ್ಟೆ ಬಾಲಯೇಸು ಮಂದಿರದ ಸಹ ನಿರ್ದೇಶಕ ವಂ ಪ್ರಕಾಶ್ ಮಾತನಾಡಿ, ಆರ್ ಎಸ್ ಎಸ್ ಸಹೋದರರು ನೀಡಿದ ಆಹ್ವಾನವನ್ನು ನಾವು ಪ್ರೀತಿಯಿಂದ ಸ್ವೀಕರಿಸಿ ಇಂದು ನಾವು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಸಮಾಜದಲ್ಲಿ ನಾವೆಲ್ಲಾ ಜೋತೆಯಾಗಿ ಸೇರಿ ಏಕತೆ, ಶಾಂತಿ ಹಾಗೂ ಪ್ರೀತಿಗಾಗಿ ಕೆಲಸ ಮಾಡಬೇಕಾಗಿದೆ. ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಇಂತಹ ಭೇಟಿಗಳು ಮುಂದಿನ ದಿನಗಳಲ್ಲಿ ಪರಸ್ಪರ ಭಾಂದ್ಯವ್ಯ ವ್ರದ್ಧಿಸಲು ಹಾಗೂ ಶಾಂತಿಯಿಂದ ಬಾಳಲು ಸಹಕಾರಿಯಾಗಲಿ. ಮುಂದಿನ ದಿನಗಳಲ್ಲಿ ನಮ್ಮಲ್ಲಿರುವ ಭೇಧಭಾವಗಳನ್ನು ಮರೆತು ಪರಸ್ಪರ ಪ್ರತಿಯೊಬ್ಬರು ಗೌರವಿಸುವಂತಾಗಲಿ ಎಂದರು.

ಭಗಿನಿ ಫ್ಲೋರಿತಾ, ಭಗಿನಿ ಗ್ಲಾಡಿಸ್, ಭಗಿನಿ ನಿಂಪ್ಲಾ, ಭಗಿನಿ ಡಿಯೊನಿಸಾ, ಆರ್ ಎಸ್ ಎಸ್ ನಾಯಕರಾದ ರಘವೀರ್ ಕಾಮತ್, ಪ್ರವೀಣ್ ಕುಮಾರ್, ಫ್ರಾಂಕ್ಲಿನ್, ಪ್ರಕಾಶ್ ಪಿಎಸ್, ಗುರುಪ್ರಸಾದ್ ಇತರರು ಉಪಸ್ಥಿತರಿದ್ದರು.


Spread the love

Exit mobile version