Home Mangalorean News Kannada News ಕೋಲಾರದ ಮಡೇರಹಳ್ಳಿ ಬಳಿ ರಸ್ತೆ ಅಪಘಾತ: ಮೂವರ ಸಾವು

ಕೋಲಾರದ ಮಡೇರಹಳ್ಳಿ ಬಳಿ ರಸ್ತೆ ಅಪಘಾತ: ಮೂವರ ಸಾವು

Spread the love

ಕೋಲಾರದ ಮಡೇರಹಳ್ಳಿ ಬಳಿ ರಸ್ತೆ ಅಪಘಾತ: ಮೂವರ ಸಾವು

ಕೋಲಾರ: ತಾಲ್ಲೂಕಿನ ಮಡೇರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶುಕ್ರವಾರ ನಸುಕಿನಲ್ಲಿ ಕಾರು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಯುವಕರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕೋಲಾರದ ದೊಡ್ಡಪೇಟೆಯ ನಿವಾಸಿಗಳಾದ ಶ್ರೀಹರಿ(23), ರೋಹನ್(22), ಸುಭಾಷ್(21) ಎಂದು ಗುರುತಿಸಲಾಗಿದೆ. ಕಾರ್ತಿಕ್(24) ಹಾಗೂ ಬಿಶ್ವಾಸ್(25) ಸ್ಥಿತಿ ಚಿಂತಾಜನಕವಾಗಿದ್ದು, ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರು ತಾಲ್ಲೂಕಿನ ನರಸಾಪುರ ಬಳಿಯ ಕಾಫಿ ಡೇಯಲ್ಲಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ ಕಾರಿನಲ್ಲಿ ಕೋಲಾರಕ್ಕೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಈ ಮೂವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಅಡ್ಡಾದಿಡ್ಡಿ ಚಲಿಸಿ ಪಕ್ಕದ ರಸ್ತೆಗೆ ಮಗುಚಿ ಬಿದ್ದಿದೆ. ಅದೇ ವೇಳೆಗೆ ಎದುರಿನಿಂದ ಬಂದ ಬಸ್ ಕಾರಿಗೆ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

Exit mobile version