ಕೋವಿಡ್‌ 19: ದುಬೈಯಿಂದ ಬಂದಿದ್ದ ಭಟ್ಕಳದ ಯುವಕ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

Spread the love

ಕೋವಿಡ್‌ 19: ದುಬೈಯಿಂದ ಬಂದಿದ್ದ ಭಟ್ಕಳದ ಯುವಕ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು: ದುಬೈಯಿಂದ ಮಾರ್ಚ್ 19ರಂದು ಮಂಗಳೂರಿಗೆ ಬಂದಾಗ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟ ಭಟ್ಕಳದ ಯುವಕ ಇದೀಗ ಸಂಪೂರ್ಣ ಗುಣಮುಖವಾಗಿದ್ದು, ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ 22ರ ಹರೆಯ ಯುವಕ ಇದೀಗ ಸಂಪೂರ್ಣ ಗುಣಮುಖನಾಗಿದ್ದು, ಇದೀಗ ನಡೆಸಿದ ಎರಡು ಬಾರಿ ಟೆಸ್ಟ್‌ನಲ್ಲಿ ಕೊರೋನ ನೆಗಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸದಾಶಿವ ತಿಳಿಸಿದ್ದಾರೆ.

ಮಾ.19ರಂದು ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದಿದ್ದ ಭಟ್ಕಳದ ಯುವಕನಲ್ಲಿ ಮಾ.22ರಂದು ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ 14 ದಿನಗಳ ನಿಗಾ ಅವಧಿ ಪೂರೈಸಿದ್ದು, ಗುಣಮುಖನಾಗಿದ್ದಾರೆ. ಆತನ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಎ.2 ಮತ್ತು 3ರಂದು ಹೀಗೆ ಮತ್ತೆ ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಆತನ ದ್ರವದ ಮಾದರಿಯ ವರದಿಯು ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಎ.6ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ದಕ್ಷಿಣಕನ್ನಡಜಿಲ್ಲೆಯಲ್ಲಿ ಪ್ರಪ್ರಥಮಕರೋನಾ ಪ್ರಕರಣ ವರದಿಯಾಗಿದ್ದ ಭಟ್ಕಳದ ಯುವಕ ಸಂಪೂರ್ಣಗುಣಮುಖನಾಗಿ ಸೋಮವಾರ ಮುಂಜಾನೆತನ್ನಊರಿಗೆ ತೆರಳಿದರು.
ವಿದೇಶದಲ್ಲಿಉದ್ಯೋಗದಲ್ಲಿದ್ದ ಈ ಯುವಕನು ಮಾರ್ಚ್೧೯ರಂದು ಮಂಗಳೂರು ಅಂತಾರಾಷ್ಟಿçÃಯ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದನು. ಅಲ್ಲಿತಪಾಸಣೆ ಸಂದರ್ಭರೋಗ ಲಕ್ಷಣಗಳಿರುವುದು ಪತ್ತೆಯಾದ ಹಿನ್ನೆಲೆಯಲ್ಲಿಅಲ್ಲಿಂದಲೇಅAಬ್ಯುಲೆನ್ಸ್ನಲ್ಲಿ ವೆನ್‌ಲಾಕ್‌ಆಸ್ಪತ್ರೆಗೆದಾಖಲಿಸಲಾಗಿತ್ತು.ಯುವಕನಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ, ಮಾ.೨೨ ರಂದೊಕರೋನಾ ಪಾಸಿಟಿವ್ ಇರುವುದುದೃಢಪಟ್ಟಿತ್ತು.
ಬಳಿಕ ವೆನ್‌ಲಾಕ್‌ಆಸ್ಪತ್ರೆಯಲ್ಲಿ ಪ್ರತ್ಯೇಕಐಸೋಲೇಷನ್ ವಾರ್ಡ್ ಮಾಡಿಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ನಂತರ ವ್ಯಕ್ತಿಯಆರೋಗ್ಯದಲ್ಲಿ ದಿನೇದಿನೇ ಚೇತರಿಕೆಕಂಡುಬAದಿದ್ದು, ಸಂಪೂರ್ಣಗುಣಮುಖನಾಗಿ ಸೋಮವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಭಟ್ಕಳಕ್ಕೆ ತೆರಳಿದ ಯುವಕನು, ಸದ್ಯ ಮನೆಯಲ್ಲಿಯೂ ಪ್ರತ್ಯೇಕವಾಗಿಇರಲಿದ್ದಾರೆ.
ಜಿಲ್ಲೆಯ ಪ್ರಥಮ ಪ್ರಕರಣಇದಾಗಿದ್ದರಿಂದ ಜಿಲ್ಲಾಡಳಿತವು ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ತಕ್ಷಣದಿಂದಲೇಕೈಗೊAಡಿತು.ಅದರಲ್ಲೂ ವೆನ್‌ಲಾಕ್‌ಆಸ್ಪತ್ರೆಗೆಇದೊಂದು ಸವಾಲಿನ ಪ್ರಕರಣವಾಗಿತ್ತು.ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿಡುವುದರೊಂದಿಗೆರೋಗಕ್ಕೆಚಿಕಿತ್ಸೆ ನೀಡುವುದೂಕೂಡಾ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ವೆನ್‌ಲಾಕ್‌ಅಧೀಕ್ಷಕರು, ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗಳು ತಮ್ಮ ಪೂರ್ಣ ಸೇವೆಯನ್ನು ಮೀಸಲಿಟ್ಟು, ಅಂತಿಮವಾಗಿರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ, ಜಗತ್ತನ್ನೇ ನಲುಗಿಸಿರುವ ಕರೋನಾ ಸಾಂಕ್ರಾಮಿಕ ಕಾಯಿಲೆ ವಿರುದ್ಧ ವೆನ್‌ಲಾಕ್ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸುದೊರಕಿದೆ.
ಬೆಳ್ಳಂಬೆಳಿಗ್ಗೆ ಊರಿನತ್ತ: ಕರೋನಾದಿಂದಗುಣಮುಖನಾದ ಭಟ್ಕಳದ ೨೨ ರ ಹರೆಯದ ಈ ಯುವಕನು, ಸೋಮವಾರ ಬೆಳಿಗ್ಗೆ ತನ್ನಊರಿನತ್ತ ತೆರಳಿದನು. ಹೋಗುವಾಗ, ಯುವಕನು ಇಷ್ಟು ದಿನ ವೆನ್‌ಲಾಕ್‌ನಲ್ಲಿತನಗೆಚಿಕಿತ್ಸೆ ನೀಡಿ, ಎಲ್ಲಾಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೆನ್‌ಲಾಕ್ ವೈದ್ಯರಿಗೆ, ಸಿಬ್ಬಂದಿಗಳಿಗೆ ಗೌರವಿಸಿದನು. ಹಾಗೆಯೇ ವೈದ್ಯರ ಬಳಿ ಭಾವುಕನಾಗಿ ನಿಂತನು.
ದುಬೈಯಲ್ಲಿ ಕಳೆದ ೨ ವರ್ಷಗಳಿಂದ ಬ್ರಾಂಡೆಡ್ ವಾಚ್ ವ್ಯಾಪಾರ ಮಾಡುತ್ತಿದ್ದ ಈ ಯುವಕನು, ವೆನ್‌ಲಾಕ್‌ನಲ್ಲಿತನಗೆಉತ್ತಮಗುಣಮಟ್ಟದಚಿಕಿತ್ಸೆ ನೀಡಲಾಗಿದೆ.ತನ್ನನ್ನು ಬಹಳ ಪ್ರೀತಿಯಿಂದಇಲ್ಲಿಕಾಣಲಾಯಿತು. ಯಾವುದೇ ಸಮಸ್ಯೆಯಾಗದಂತೆ ಇಷ್ಟು ದಿನ ನೋಡಿಕೊಳ್ಳಲಾಗಿದೆ.ತಿನ್ನಲುಉತ್ತಮಆಹಾರವನ್ನೂ ನೀಡಲಾಗಿದೆಎಂದುತನ್ನ ಸಂತೋಷ ಹಂಚಿಕೊAಡನು.
ನನಗೆ ಈ ರೋಗ ಹೇಗೆ ಬಂತು ಎಂಬ ನಿಖರಕಾರಣ ತಿಳಿದಿಲ್ಲ ಎಂದು ಸ್ಪಷ್ಟಪಡಿಸುತ್ತಾ, ಪಾಸಿಟಿವ್ ದೃಢಪಟ್ಟನಂತರ, ನಾನೇ ಎಲ್ಲರಿಂದಲೂ ಸಂಪೂರ್ಣಅAತರಕಾಯ್ದುಕೊAಡೆಎAದುಯುವಕ ಹೇಳಿದರು.ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಬಗ್ಗೆ ಸಾಕಷ್ಟು ಭಯಭೀತಿ ಮೂಡಿಸುವಂತೆ ಮಾಡಲಾಗುತ್ತಿದೆಎಂದು ಆ ಯುವಕನುಅಸಮಾಧಾನ ವ್ಯಕ್ತಪಡಿಸಿದನು.
ಕರೋನಾ ವೈರಸ್ ನಮ್ಮದೇಹ ಪ್ರವೇಶಿಸುವುದು ಗೊತ್ತಾಗುವಾಗ ಹಲವು ದಿನಗಳು ಕಳೆದಿರುತ್ತದೆ.ನಮ್ಮಓಡಾಟ ನಿಯಂತ್ರಿಸುವುದು ಪ್ರಾಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಲಾಕ್‌ಡೌನ್ ಸರಕಾರದ ದಿಟ್ಟಹೆಜ್ಜೆಯಾಗಿದ್ದು, ಸರಕಾರದ ನಿರ್ದೇಶನದಂತೆಎಲ್ಲರೂ ಮನೆಯೊಳಗೆ ಇರುವುದುಅಗತ್ಯವಾಗಿದೆ.ನಾನು ವಿಮಾನನಿಲ್ದಾಣದಿಂದಲೇ ನೇರವಾಗಿಆಸ್ಪತ್ರೆಗೆದಾಖಲಾಗಿದ್ದರಿಂದ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆರೋಗ ಹರಡುವುದುತಪ್ಪಿತು.ಇದಕ್ಕಾಗಿ ಜಿಲ್ಲಾಡಳಿತಕ್ಕೆ ತಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದುಎಂದುಯುವಕ ಹೇಳಿದನು.
ಕರೋನಾರೋಗಕ್ಕೆ ಹೆದರುವಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ.ರೋಗಿಯು ಪ್ರತ್ಯೇಕವಾಗಿರುವುದುಅಗತ್ಯ. ಒಬ್ಬಂಟಿಯಾಗಿರುವುದಕ್ಕೆ ಹೆದರುವಅಗತ್ಯವಿಲ್ಲ. ಯಾವುದೇಕಾರಣಕ್ಕೂಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿಧೈರ್ಯ ಮುಖ್ಯವಾಗಿದೆಎಂದರು.
ವೈದ್ಯರಚಿಕಿತ್ಸೆ, ದೇವರಅನುಗ್ರಹದಿಂದ ಇದೀಗ ತನ್ನಆರೋಗ್ಯ ಸಾಮಾನ್ಯ ಸ್ಥಿತಿಗೆ ಬಂದಿದೆ.ವೆನ್‌ಲಾಕ್‌ಆಸ್ಪತ್ರೆಯವೈದ್ಯರ, ಸಿಬ್ಬಂದಿಗಳ ನಿರಂತರಆರೈಕೆ ಪರಿಣಾಮತಾನುಗುಣಮುಖನಾಗುವಂತಾಯಿತುಎAದು ಸೋಂಕನ್ನುಗೆದ್ದು ಬಂದ ಬಗ್ಗೆಅವರು ಹೇಳಿದರು.


Spread the love