ಕೋವಿಡ್ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಕೋವಿಡ್ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ – ಜಿಲ್ಲಾಧಿಕಾರಿ ಜಿ ಜಗದೀಶ್

ಕುಂದಾಪುರ: ಹೊರ ಭಾಗದಿಂದ ಬಂದವರು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೊವಿಡ್-19 ಶಂಕೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಫಿವರ್ಕ್ಲಿನಿಕ್ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿನ ತಾಲ್ಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್(ಬಿವಿಟಿ) ವತಿಯಿಂದ ನೀಡಲಾದ ಗಂಟಲು ದ್ರವ ಮಾದರಿ ಸಂಗ್ರಹ ’ಸೆಲ್ಕೋ ಕಿಯೋಸ್ಕ್ ’ ಸೌರ ಚಾಲಿತ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೋಂಕು ಕಾಣಿಸಿಕೊಂಡ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಯಿಲೆಯನ್ನು ಕೂಡಲೇ ಗುಣಪಡಿಸಲು ಪ್ರಯತ್ನ ಮಾಡಬಹುದು. ಆದರೆ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ವೈದ್ಯರಿಗೂ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುದಿಲ್ಲ. ಈ ಹಿನ್ನೆಲೆಯಲ್ಲಿ ಹೊರ ಭಾಗದಿಂದ ಬಂದವರು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೊವಿಡ್-19 ಶಂಕೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಫಿವರ್ಕ್ಲಿನಿಕ್ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.

ಗುರುವಾರ ಮುಂಬೈನಿಂದ ತೆಕ್ಕಟ್ಟೆಗೆ ಬಂದಿದ್ದ ನಾಲ್ವರ ಪೈಕಿ 54 ವರ್ಷ ಪ್ರಾಯದ ಓರ್ವ ವ್ಯಕ್ತಿ ಸಂಜೆ ಮೃತಪಟ್ಟಿದ್ದು, ಅವರ ಮೃತ ದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಕೊವಿಡ್-19 ಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 2 ಕ್ಕೆ ಏರಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮುಂಬೈಯಿಂದ ಬಂದಿದ್ದ ವ್ಯಕ್ತಿ ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿಕೊಂಡು ಹೋಂ ಕ್ವಾರಂಟೈನ್ಗಾಗಿ ಮನೆಗೆ ತೆರಳಿದ್ದರು. ಸಂಜೆಯ ವೇಳೆಗೆ ಕಾಯಿಲೆ ಉಲ್ಭಣವಾಗಿದ್ದರಿಂದ ಅವರು ಮೃತ ಪಟ್ಟಿದ್ದಾರೆ. ಅವರ ಮನೆಯನ್ನು ಸೀಲ್ಡೌನ್ ಮಾಡಲಾಗಿದ್ದು ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್ ವಲಯವಾಗಿ ಹಾಗೂ ಪರಿಸರವನ್ನು ಬಫರ್ ವಲಯವಾಗಿ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ 1039ಸೋಂಕಿನ ಪ್ರಕರಣಗಳಲ್ಲಿ ಕೇವಲ 92 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಈ ಪೈಕಿ ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿಯೇ ಗರಿಷ್ಠ 755 ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಕೇವಲ 59 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಶೇಖಡವಾರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಇಲ್ಲಿನ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ರೆಬೆಲ್ಲೋ, ಡಾ.ನಾಗೇಶ್, ಡಾ.ಕೆ.ಪ್ರೇಮಾನಂದ, ಡಾ.ಸನ್ಮಾನ್ಶೆಟ್ಟಿ ಮುಂತಾದ ವೈದ್ಯ ತಂಡದ ನೇತ್ರತ್ವದಲ್ಲಿ ಕೊವಿಡ್-19 ವಾರಿಯರ್ಸ್ಹಗಲಿರುವ ಸೇವೆಯನ್ನು ಮಾಡಿ ಮಾದರಿಯಾಗಿದ್ದಾರೆ. ಕುಂದಾಪುರದ ಡಾ.ಜಿ.ಶಂಕರ್ಆಸ್ಪತ್ರೆಯನ್ನು ಅಮ್ಲಜನಕ, ವೆಂಟಿಲೇಟರ್ಮುಂತಾದ ಸೌಲಭ್ಯಗಳನ್ನು ಅಳವಡಿಸಿ ಸುಸಜ್ಜಿತ ಕೊವಿಡ್-19 ಆಸ್ಪತ್ರೆಯನ್ನಾಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೌರ ಚಾಲಿತ ಕಿಯೋಸ್ಕ್
ಭಾರತೀಯ ವಿಕಾಸ ಟ್ರಸ್ಟ್ಸೌರ ಚಾಲಿತ ಗಂಟಲು ದ್ರವ ಮಾದರಿ ಸಂಗ್ರಹ ’ಕಿಯೋಸ್ಕ್’ ನೀಡಿರುವುದು, ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ಕೊವಿಡ್ವಾರಿಯರ್ಸ್ಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿಂದೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ಘಟಕವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. ’ಉಡುಪ’ ಮಾದರಿಗೆ ರಾಜ್ಯದಲ್ಲಿಯೇ ವಿಶೇಷ ಬೇಡಿಕೆ ಇದೆ. ಸರ್ಕಾರದ ಸಲಹೆಯಂತೆ ಹೆಚ್ಚು ಸಂಚಾರಿ ಘಟಕವನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಸೆಲ್ಕೋ ಕಂಪೆನಿಯ ವಲಯ ಮಹಾಪ್ರಬಂಧಕ ಗುರುಪ್ರಸಾದ್ಶೆಟ್ಟಿ, ಭಾರತೀಯ ವಿಕಾಸ್ಟ್ರಸ್ಟ್ನ ಸಿಇಓ ಮನೋಹರ್ ಕೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ರೆಬೆಲ್ಲೋ, ಡಾ.ನಾಗೇಶ್ಇದ್ದರು.


Spread the love