ಕೋವಿಡ್-19: ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ; ವೀಡಿಯೊ ಸಂವಾದದಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ

Spread the love

ಕೋವಿಡ್-19: ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ; ವೀಡಿಯೊ ಸಂವಾದದಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ

ಮಂಗಳೂರು: ಕೋವಿಡ್-19 ರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಾ|| ಅಶ್ವಥ್ ನಾರಾಯಣ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ಕುರಿತು ಆರೋಗ್ಯ ಮಂತ್ರಿ ಬಿ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗು ಜಿಲ್ಲಾಡಳಿತದೊಂದಿಗೆ ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಧ್ಯಮದಲ್ಲಿ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳ ಮೂಲಕ ಸಾರ್ವಜನಿಕರಲ್ಲಿ ಭಯಭೀತಿ ಹಾಗೂ ಕೋವಿಡ್ ಸೋಂಕಿತರಿಗೆ ಅವಮಾನ ಮಾಡುವುದು ಕರೋನಾ ವಾರಿಯರ್ಸ್ ವಿರುದ್ದ ಗೊಂದಲ ಸೃಷ್ಟಿಸುವ ಪ್ರಕರಣಗಳು ನಡೆಯುತ್ತಿದ್ದು ಅಂತಹ ಘಟನೆಗಳ ಕುರಿತು ಕಠಿಣ ಕ್ರಮ ಕೈಗೊಳ್ಳಲು ಅಶ್ವಥ್ ನಾರಾಯಣ್ ಆದೇಶ ನೀಡಿದರು.

ಆಕ್ಸಿಜನ್ ಸಿಲಿಂಡರ್ ಗಳು, ರ್ಯಾಪಿಡ್ ಅ್ಯಂಟಿಜೆನ್ ಟೆಸ್ಟ್ ಕಿಟ್, ಅಂಬುಲೆನ್ಸ್ ಗಳು ವೆಂಟಿಲೇಟರ್ ಗಳ ಸಹಿತ ಯಾವುದೇ ಸಮಸ್ಯೆಗಳಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಎಲ್ಲಾ ರೀತಿಯ ಸಹಕಾರಗಳನ್ನು ರಾಜ್ಯ ಸರಕಾರದಿಂದ ನೀಡಲಾಗುವುದು. ಕೋವಿಡ್ -19 ಸೋಂಕಿತರಿಗೆ ಆತಂಕವಾಗದಂತೆ ಸಮಸ್ಯೆಗಳನ್ನು ಪರಿಹರಿಸಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸಚಿವರು ಮೆಡಿಕಲ್ ಕಾಲೇಜುಗಳ ಪ್ರಮುಖರಿಗೆ ಸೂಚನೆ ನೀಡಿದರು.

ಜಿಲ್ಲೆಯ ಪರವಾಗಿ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ರೂಪ ಅವರು 204 ಆಕ್ಸಿಜನ್ ಸಿಲಿಂಡರ್ ಗಳು, 13500 ಅ್ಯಂಟಿಜನ್ ಟೆಸ್ಟ್ ಕಿಟ್, 57 ಅಂಬುಲೆನ್ಸ್ ಗಳು ಒಟ್ಟು 143 ವೆಂಟಿಲೇಟರ್ ಗಳು ಲಭ್ಯವಿದ್ದು ಹೊಸದಾಗಿ ಬಂದಿರುವ ವೆಂಟಿಲೇಟರ್ ಗಳ ಜೋಡಣೆ ಇನ್ನೇರಡು ದಿನಗಳಲ್ಲಿ ಪೂರ್ಣಗೊಳ್ಳುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕೊರತೆ ಇರುರುವುದಿಲ್ಲ ಎಂದು ತಿಳಿಸಿದರು.

ಪ್ರಸ್ತುತ ವೆನ್ಲಾಕ್, ಕೆಎಮ್ ಸಿ ಅತ್ತಾವರ, ಕೆ ಎಸ್ ಹೆಗಡೆ, ಯನಪೋಯ ಆಸ್ಪತ್ರೆಗಳಲ್ಲಿ ಲ್ಯಾಬ್ ವ್ಯವಸ್ಥೆ ಇದ್ದು, ಸರಾಸರಿ 500 ಟೆಸ್ಟ್ ಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೋವಿಡ್ ಟೆಸ್ಟ್ ಸಂಖ್ಯೆಯನ್ನು ಹೆಚ್ಚು ಮಾಡಬೇಕಾಗಿದ್ದು ಪ್ರತಿದಿನ 1000 ಟೆಸ್ಟ್ ಮಾಡುವಂತೆ ಆದೇಶಿಸಿದರು.


Spread the love