Spread the love
ಕೋವಿಡ್ -19 : ಜಿಲ್ಲೆಯಾದ್ಯಂತ ಸೆಕ್ಷನ್ 144(3) ಮುಂದುವರಿಕೆ- ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ : ಕೋವಿಡ್ -19 (ಕೋರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್ ಡೌನ್ ಅನ್ನು ದಿನಾಂಕ:03.05.2020 ರವರೆಗೆ ವಿಸ್ತರಿಸಲಾಗಿದೆ.
ಅದರಂತೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 (ಕೋರೊನ ವೈರಾಣು ಕಾಯಿಲೆ 2019) ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಬ0ದನೆಗಳನ್ನು ವಿಧಿಸುವದು ಅತಿ ಅವಶ್ಯಕವೆಂದು ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ , ಸಿಆರ್ಪಿಸಿ ಸೆಕ್ಷನ್ 144(3) ಅಡಿಯಲ್ಲಿ ನಿಷೇದಾಜ್ಞೆ ವಿಧಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
- ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಕೇವಲ ಧಾರ್ಮಿಕ ಕೇಂದ್ರಗಳ ಸಿಬ್ಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಿದೆ, ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ.
- ಬೇಸಿಗೆ ಶಿಬಿರ, ಸಮಾರಂಭಗಳು , ವಿಚಾರ ಸಂರ್ಕಿಣಗಳು, ಕ್ರೀಡಾಕೂಟಗಳು, ಮತ್ತಿತರ ಯಾವುದೇ ಒಂದಡೆ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದೆ.
- ಬೀಚ್ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.
- ಮದುವೆ/ ನಿಶ್ಚಿತಾರ್ಥ ಸಮಾರಂಭಗಳನ್ನು ಜನಸಂದಣಿಗೆ ಅವಕಾಶ ನೀಡದೆ ಅತಿ ಸರಳವಾಗಿ ಆಯೋಜಿಸಲು ಸೂಚಿಸಿದೆ.
- ವಾರದ ಸಂತೆಗಳನ್ನು ನಿರ್ಬಂಧಿಸಿದೆ.
- ಸಿನೇಮಾ ಮಂದಿರಗಳು, ಮಾಲ್ ಗಳು, ನಾಟಕಗಳು, ಯಕ್ಷಗಾನಗಳು, ರಂಗಮAದಿರಗಳು, ಪಬ್ ಗಳು, ಕ್ಲ ಬ್ ಗಳು,ಹಾಗು ನೈಟ್ ಕ್ಲಬ್ ಗಳನ್ನು ತೆರೆಯತಕ್ಕದ್ದಲ್ಲ.
- ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಮ್ಯಾರಾಥಾನ್ ಇತ್ಯಾದಿಗಳನ್ನು ನಡೆಸುವಂತಿಲ್ಲ.
- ಹೆಚ್ಚಾಗಿ ಜನರು ಬಳಸುವ ಸ್ವಿಮ್ಮಿಂಗ್ ಫೂಲ್, ಜಿಮ್, ಫಿಟ್ನೆಸ್ ಸೆಂಟರ್, ಉದ್ಯಾನವನ, ಇತ್ಯಾದಿಗಳನ್ನು ಮುಚ್ಚುವುದು.
- ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ವಾಣಿಜ್ಯ ಶಾಲೆಗಳನ್ನು , ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಲಾಗಿದ್ದು , ಅವುಗಳನ್ನು ತೆರೆಯತಕ್ಕದ್ದಲ್ಲ.
- ಎಲ್ಲಾ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳನ್ನು(ಶುಕ್ರವಾರದ ಜುಮ್ಮಾ ಫ್ರಾರ್ಥನೆ ಸೇರಿದಂತೆ) ನಿರ್ಬಂಧಿಸಲಾಗಿದೆ.
- ರೆಸ್ಟೋರೆಂಟ್ / ಉಪಾಹಾರ ಗೃಹ/ ಹೋಟೆಲ್ /ಕೆಫೆಗಳಲ್ಲಿ ಊಟ /ಉಪಹಾರ ಮಾಡುವುದನ್ನು ನಿಷೇದಿಸಲಾಗಿದೆ. ಅಡುಗೆ ಮನೆಗಳು ತೆರೆದಿದ್ದು,ನಿಗದಿತ ಅವಧಿಯಲ್ಲಿ ಗ್ರಾಹಕರು ಆಹಾರವನ್ನು ಖರೀದಿಸಿ ಕೇವಲ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.
- ಹವಾ ನಿಯಂತ್ರಿತ ವ್ಯವಸ್ಥೆಯುಳ್ಳ ಬಟ್ಟೆ ಅಂಗಡಿಗಳು , ಚಿನ್ನಾಭರಣ ಮಳಿಗೆಗಳು, ಎಲೆಕ್ಟ್ರಾನಿಕ್ ಮಳಿಗೆಗಳು, ಮತ್ತಿತರ ಮಳಿಗೆಗಳನ್ನು ತೆರೆಯತಕ್ಕದ್ದಲ್ಲ.
- ಸಾರ್ವಜನಿಕ ಬಸ್ಸ್ ಸಾರಿಗೆಯನ್ನು ನಿರ್ಭಂಧಿಸಲಾಗಿದೆ.
- ಸಾರ್ವಜನಿಕ ಟ್ಯಾಕ್ಸಿ / ಆಟೋ ಸಾರಿಗೆ ನಿರ್ಬಂಧಿಸಲಾಗಿದೆ( ತುರ್ತು ಸಂದರ್ಭ ಹೊರತುಪಡಿಸಿ)
- ಸಾರ್ವಜನಿಕರಿಗೆ ತುರ್ತು ವೈಧ್ಯಕೀಯ ಕಾರಣಗಳನ್ನು ಹೊರತು ಪಡಿಸಿ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣವನ್ನು ನಿರ್ಬಂಧಿಸಿದೆ..
- ಮಾರ್ಗಸೂಚಿಯಂತೆ ಅನುಮತಿಸಲಾದ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ , ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
- ಎಲ್ಲಾ ರಾಜಕೀಯ / ಸಾಮಾಜಿಕ /ಕ್ರೀಡಾ/ ಮನೋರಂಜನಾ/ಶೈಕ್ಷಣಿಕ /ಸಾಂಸೃತಿಕ ಮತ್ತು ದಾರ್ಮಿಕ ಮತ್ತು ಇತರ ಜನಸೇರುವ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ.
- ಎಲ್ಲಾ ಧಾರ್ಮಿಕ / ಪೂಜಾ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶವನ್ನು ಹಾಗೂ ಧಾರ್ಮಿಕವಾಗಿ ಜನರ ಒಟ್ಟು ಗೂಡುವಿಕೆಯನ್ನು ನಿರ್ಬಂಧಿಸಿದೆ.
ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು - 1. ಪಿ.ಜಿ ಮತ್ತು ವಸತಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿ /ವಿದ್ಯಾರ್ಥಿನಿಯರನ್ನು ಯಾವುದೇ ಕಾರಣಕ್ಕೆ ಪಿ.ಜಿ ಮತ್ತು ವಸತಿ ನಿಲಯಗಳಿಂದ ಹೊರಕ್ಕೆ ಕಳುಹಿಸಲು ಅವಕಾಶ ಇಲ್ಲ . ಅವರಿಗೆ ವಸತಿ/ ಉಟೋಪಚಾರದ ವ್ಯವಸ್ಥೆಯನ್ನು ಮುಂದುವರಿಸಿಕೊAಡು ಹೋಗತಕ್ಕದ್ದು. ಪಿ.ಜಿ / ವಸತಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ವಸತಿ / ಉಟೋಪಚಾರದ ವ್ಯವಸ್ಥೆ ಮಾಡದೆ ಇರುವಂತಿಲ್ಲ.
2) ಪಿಜಿ ಹಾಗೂ ವಸತಿ ನಿಲಯಗಳ ಮಾಲಿಕರು / ವ್ಯವಸ್ಥಾಪಕರು ಕರ್ನಾಟಕ ಸರಕಾರವು ನೀಡಿರುವ ಸಲಹೆಗಳಂತೆ ವೈಯಕ್ತಿಕ ಸ್ವಚ್ಚತೆಗಳ ಬಗ್ಗೆ ಮನವರಿಕೆ ಮಾಡಿಕೊಂಡು ಪಾಲಿಸತಕ್ಕದ್ದು.
3) ನಿಯತಕಾಲಿಕವಾಗಿ ಪಿ.ಜಿ. ವಸತಿ ನಿಲಯಗಳಲ್ಲಿ ನೈರ್ಮಲ್ಯತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವುದು ಪಿ.ಜಿ. ವಸತಿ ನಿಲಯಗಳ ಮಾಲಿಕರ / ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
Spread the love