ಕೋವಿಡ್-19: ಜು1 ರಿಂದ ಶಾಲೆಗಳ ಪುನರ್ ಆರಂಭಕ್ಕೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವಿರೋಧ

Spread the love

ಕೋವಿಡ್-19: ಜು1 ರಿಂದ ಶಾಲೆಗಳ ಪುನರ್ ಆರಂಭಕ್ಕೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ವಿರೋಧ

ಉಡುಪಿ: ಕರೋನಾ ಮಹಾಮಾರಿ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ರಾಜ್ಯ ಸರಕಾರ ಜುಲೈ ತಿಂಗಳಿನಿಂದ ಹಂತ ಹಂತವಾಗಿ ತರಗತಿಗಳನ್ನು ಆರಂಭಿಸಲು ಚಿಂತಿಸಿರುವುದು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಆಘಾತಕಾರಿ ನಿರ್ಧಾರವಾಗಿದೆ.

ಕರೋನಾ ನಿಯಂತ್ರಣ ಉದ್ದೇಶದ ಲಾಕ್ ಡೌನ್ ಕ್ರಮಗಳು ಹಂತಹಂತವಾಗಿ ಜಾರಿಯಾದರೂ, ಲಾಕ್ ಡೌನ್ ಅವಧಿಯಲ್ಲಿ ಕೆಲಮಟ್ಟಿಗೆ ನಿಯಂತ್ರಣದಲ್ಲಿದ್ದ ಸೋಂಕು, ಇದೀಗ ಬಹುತೇಕ ಲಾಕ್ ಡೌನ್ ತೆರವಿನ ಬಳಿಕ ಆಘಾತಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಸೋಂಕು, ಇದೀಗ ಕಳೆದ ಒಂದು ತಿಂಗಳಿನಿಂದ ಗ್ರಾಮೀಣ ಭಾಗಗಳಿಗೂ ವ್ಯಾಪಿಸತೊಡಗಿದೆ. ಸೋಂಕು ತೀರಾ ವಿರಳವಿದ್ದಾಗ ಶಾಲೆಗಳನ್ನು ಮುಚ್ಚಿ, ಬೀದಿಬೀದಿಗಳಲ್ಲಿ ಸೋಂಕು ಹಬ್ಬಿರುವಾಗ ಪುನರಾರಂಭಿಸುತ್ತಿರುವುದು ಸರಿಯೇ ಎಂಬ ಆತಂಕ ಈಗ ಪೋಷಕರ ವರ್ಗದಲ್ಲಿ ಮೂಡಿದೆ.

ಶಾಲೆಗಳಲ್ಲಿ ಶಾಲೆಗಳಲ್ಲಿ ಭೌತಿಕ ಅಂತರ ಕಾಯುವುದು ಮತ್ತು ಮಕ್ಕಳಿಗೆ ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಇತರರ ವಸ್ತುಗಳನ್ನು (ಪೆನ್ನು, ಪೆನ್ಸಿಲ್, ನೋಟ್ ಬುಕ್) ಮುಟ್ಟದಿರುವಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ. ಸಾವಿರಾರು ಮಕ್ಕಳು ಒಂದೆ ಕಡೆ ಸೇರುವ, ಆಟೋಟದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಯಾರೊಬ್ಬರಿಗೆ ಸೋಂಕು ಇದ್ದರೂ ಅದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ರಾಜ್ಯದಲ್ಲಿ ಹಾಗಾಗಿ ಸರ್ಕಾರ ಕನಿಷ್ಟ ಸೋಂಕು ಪ್ರಕರಣಗಳು ಇಳಿಮುಖವಾಗುವವರೆಗಾದರೂ ಕಾಯುವುದು ಒಳಿತು .

ಸರಕಾರ ಕೋರಾನ ಮಹಾಮಾರಿ ಪರಿಣಾಮ ರಾಜ್ಯದಲ್ಲಿ ಹೆಚ್ಚಾಗಿರುವ ಸಂದರ್ಭದಲ್ಲಿ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಲು ಹೊರಟಿರುವುದು ಸರಿಯಾದ ನಿರ್ಧಾರವಲ್ಲ. ಮಕ್ಕಳು ಸುರಕ್ಷಿತವಿದ್ದರೆ ದೇಶ ಸುರಕ್ಷಿತವಿದ್ದರಂತೆ ಕಾರಣ ಮಕ್ಕಳೇ ನಮ್ಮ ದೇಶದ ಭವಿಷ್ಯ ಎನ್ನುವುದನ್ನು ಶಿಕ್ಷಣ ಸಚಿವರ ಮರೆಯಬಾರದು . ಆದ್ದರಿಂದ ಸರಕಾರ ಶಾಲೆ ಪುನರಾರಂಭದ ವಿಚಾರದಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಇಲ್ಲವಾದಲ್ಲಿ ಸರಕಾರದ ನಿರ್ಧಾರದ ವಿರುದ್ದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು.


Spread the love