ಕೋವಿಡ್ 19 ; ದಕ ಜಿಲ್ಲಾ ನೋಡಲ್ ಅಧಿಕಾರಿ ಪೊನ್ನು ರಾಜು ಅವರನ್ನು ಭೇಟಿ ಮಾಡಿದ ಯು ಟಿ ಖಾದರ್

Spread the love

ಕೋವಿಡ್ 19 ; ದಕ ಜಿಲ್ಲಾ ನೋಡಲ್ ಅಧಿಕಾರಿ ಪೊನ್ನು ರಾಜು ಅವರನ್ನು ಭೇಟಿ ಮಾಡಿದ ಯು ಟಿ ಖಾದರ್

ಮಂಗಳೂರು: ಕೋವಿಡ್ 19 ಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡ ವಿ.ಪೊನ್ನುರಾಜ್ ರವರನ್ನು ಮಾಜಿ ಆರೋಗ್ಯ ಸಚಿವ ಶಾಸಕ ಯು.ಟಿ.ಖಾದರ್ ಭೇಟಿ ಮಾಡಿದರು


ಭೇಟಿಯ ಸಂದರ್ಭದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿ.ಪೊನ್ನುರಾಜ್ ರವರಿಗೆ ಮಾಜಿ ಆರೋಗ್ಯ ಸಚಿವ ಶಾಸಕ ಯು.ಟಿ.ಖಾದರ್ ಸಲಹೆ ನೀಡಿದರು.

ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ ಬಿಪಿಲ್ ಮಾತ್ರವಲ್ಲದೆ ಎಪಿಲ್ ರೋಗಿಗಳಿಗೂ ಕೂಡಾ ಉಚಿತ ಚಿಕಿತ್ಸೆ ಹಾಗೂ ಮೆಡಿಸಿನ್ ಸಿಗುವಂತೆ ನೋಡಿಕೊಳ್ಳುವುದು ಸೇರಿದಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸದ್ರಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 230 ರೋಗಿಗಳಿಗೆ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಸದ್ಯಕ್ಕೆ ಇರುವ 30 ವೆಂಟಿಲೇಟರ್ ಗಳ ಜೊತೆಗೆ ಹೆಚ್ಚುವರಿಯಾಗಿ 70 ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಂಡು ಇದರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಇರುವ ಇತರ ಮೆಡಿಕಲ್ ಕಾಲೇಜುಗಳಿಗೆ ಜವಾಬ್ದಾರಿ ವಹಿಸುವುದು. ವೆನ್ಲಾಕ್ ಆಸ್ಪತ್ರೆಗೆ ಹೊಸತಾಗಿ ಬರುವ ತುರ್ತು ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲು ವೆನ್ಲಾಕ್ ಆಸ್ಪತ್ರೆಯ ಆವರಣದ ಹೊರಭಾಗದಲ್ಲಿ ಸಹಾಯ ಕೇಂದ್ರ ತೆರೆದು ಹತ್ತಿರದಲ್ಲಿ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು. ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಳಾಂತರಿಸಿದ ಅಥವಾ ಹೊಸ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುವ ಬಗ್ಗೆ ನೋಡಿಕೊಳ್ಳಲು ಹಾಗೂ ಅಲ್ಲಿರುವ ರೋಗಿಗಳ ಅನುಕೂಲಕ್ಕಾಗಿ “ಆರೋಗ್ಯ ಮಿತ್ರ” ನಿಗೆ ಜವಾಬ್ದಾರಿ ನೀಡುವಂತೆ ಖಾದರ್ ಆಗ್ರಹಿಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಸದ್ರಿ ಚಿಕಿತ್ಸೆ ಪಡೆಯುತ್ತಿರುವ ಹೈ ರಿಸ್ಕ್ ಟಿ.ಬಿ ರೋಗಿಗಳನ್ನು ಯಾವುದಾದರೂ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದು. ವೆನ್ಲಾಕ್ ಆಸ್ಪತ್ರೆಯಲ್ಲಿರುವ ಜೈಲ್ ವಾರ್ಡನ್ನು ಸರಿಯಾದ ಕ್ರಮದಲ್ಲಿ ಯಾವುದಾದರೂ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವುದು. ತಮ್ಮ ಜೀವವನ್ನೇ ಪಣವಿಟ್ಟು ಕೋವಿಡ್ 19 ರೋಗಗಳನ್ನು ಆರೈಕೆ ಮಾಡುತ್ತಿರುವ ವೈದ್ಯರು,ನರ್ಸ್ ಹಾಗೂ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ವಹಿಸುವುದು ಮತ್ತು ಅವರಿಗೆ ಸರಿಯಾದ ರೆಸ್ಕ್ಯೂ ಕಿಟ್ ಸಿಗುವಂತೆ ನೋಡಿ ಕೊಳ್ಳುವುದು.ಮಾತ್ರವಲ್ಲದೆ ತಾನು ಸಂಜೆ ಮನೆಗೆ ಹೋದಾಗ ತನ್ನ ಮನೆಯವರಿಗೆ ಕೋರೋನಾ ಹರಡಬಹುದಾ ಎಂಬ ಭಯದ ವಾತಾವರಣ ತಪ್ಪಿಸಲು ಕೋವಿಡ್ 19 ಆರೈಕೆ ಮಾಡುತ್ತಿರುವ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಹತ್ತಿರದಲ್ಲೇ ಯಾವುದಾದರೂ ಖಾಸಗಿ ಹೋಟೆಲ್ ಅಥವಾ ಅಪಾರ್ಟ್ ಮೆಂಟ್ ಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಪ್ರದೇಶಗಳ ಬಿ ಗ್ರೂಪ್ ನೌಕರಕರು ಕರ್ಪ್ಯೂ ಇದ್ದ ಕಾರಣ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ,ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ಅವರಿಗೆ ತಮ್ಮ ತಮ್ಮ ಪ್ರದೇಶದಿಂದ ಕೆಲಸಕ್ಕೆ ಹಾಜರಾಗಲು ಮತ್ತು ನಿರ್ಗಮಿಸಲು ಅನುಕೂಲವಾಗುವಂತೆ ವಾಹನಗಳಿಗೆ ಪಾಸ್ ವಿತರಿಸಲು ಕ್ರಮ ಕೈಗೊಂಡು ನೂರಕ್ಕೆ ನೂರರಷ್ಟು ನೌಕರಕರು ಕರ್ತವ್ಯಕ್ಕೆ ಹಾಜರಾಗುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುವುದು. ವೆನ್ಲಾಕ್ ನಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲು ಲ್ಯಾಬ್ ತೆರೆಯಲಾಗುತ್ತೆ ಎಂದು ಸರಕಾರ ಹೇಳಿದರೂ ICMR ನಿಂದ ಇನ್ನೂ ಕೂಡಾ ಯಾವುದೇ ಅನುಮತಿ ಸಿಕ್ಕಿಲ್ಲ.ಆದುದರಿಂದ ತಕ್ಷಣ ICMR ನಿಂದ ಅನುಮತಿ ಪಡೆದು ಪರೀಕ್ಷಾ ಕೇಂದ್ರ ತೆರೆಯುವಂತೆ ನೋಡಿಕೊಳ್ಳುವಂತೆ ಖಾದರ್ ಆಗ್ರಹಿಸಿದರು.


Spread the love