ಕೋವಿಡ್-19 ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲ – ಸಿ.ಪಿ.ಐ.ಎಂ. ಮುಖಂಡ ಎಚ್.ನರಸಿಂಹ
ಕುಂದಾಪುರ : ದೇಶದಾದ್ಯಂತ ಹರಡಿರುವ ಕೊವಿಡ್-19 ಮಹಾಮಾರಿ ವೈರಸ್ ಅನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಕಾರ್ಯವೈಖರಿಯಿಂದಾಗಿ ಕೋಟ್ಯಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿಪಿಐಎಂ ಮುಖಂಡ ಎಚ್.ನರಸಿಂಹ ಆರೋಪಿಸಿದರು.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರುವ ಪ್ರತಿ ಕುಟುಂಬಗಳಿಗೂ ಮಾಸಿಕ 7,500 ರೂ. ನೀಡಬೇಕು. ನಗರದಿಂದ ಜನರು ಗ್ರಾಮೀಣ ಭಾಗಗಳಿಗೆ ತೆರಳಿದ್ದು, ಅವರ ಕುಟುಂಬದ ಜೀವನ ನಿರ್ವಹಣೆಗಾಗಿ ವರ್ಷಕ್ಕೆ ಕನಿಷ್ಠ 200 ದಿನಗಳ ಕಾಲ ಕೂಲಿ ಸಿಗುವ ರೀತಿಯಲ್ಲಿ ಗ್ರಾ,ಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಒದಗಿಸಬೇಕು. ಪ್ರತಿ ವ್ಯಕ್ತಿಗೂ ಮಾಸಿಕ ತಲಾ 10 ಕೆ.ಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ಖಾಸಗಿಗಳಿಗೆ ಮುಕ್ತ ಅವಕಾಶ ನೀಡುವ ರಾಷ್ಟ್ರೀಯ ಸೊತ್ತು, ಆಸ್ತಿಗಳ ಮಾರಾಟ ಹಾಗೂ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ನಿರ್ಧಾರವನ್ನು ಕೈಬಿಡಬೇಕು. ರಾಜ್ಯದಲ್ಲಿ ಆರೋಗ್ಯ ಪರಿಕರ ಹಾಗೂ ವೆಂಟಿಲೇಟರ್ಕೊರತೆಯನ್ನು ನೀಗಿಸಬೇಕು ಎಂದು ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಸಮಿತಿಯ ಮುಖಂಡರಾದ ಕೆ.ಶಂಕರ ಅವರು, ಮಾಸಿಕ 7,500 ರೂಪಾಯಿ ನೀಡಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಯ ಮಾಡುತ್ತಿದ್ದಾರೆ. ಜನರ ಕೈಯಲ್ಲಿ ಹಣ ಬಂದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ದೇಶದ ಆರ್ಥಕ ಚಟುವಟಿಕೆ ಉತ್ತಮವಾಗುತ್ತದೆ ಎನ್ನುವ ಅಂಶಗಳನ್ನು ಗಮನಿಸದೆ, ಅನಗತ್ಯವಾಗಿ ಲಾಕ್ಡೌನ್, ಸೀಲ್ಡೌನ್ಮಾಡಲಾಗುತ್ತಿದೆ ಎಂದು ದೂರಿದರು.
ರಾಜ್ಯ ಸಿಪಿಎಂ ಕಾರ್ಮಿಕ ಸಂಘಟನೆಯ ಮುಖಂಡರಾದ ಕೆ.ಶಂಕರ, ಜಿಲ್ಲಾ ಸಂಘಟನೆಯ ಮುಖಂಡರಾದ ಮಹಾಬಲ ವಡೇರಹೋಬಳಿ, ಸುರೇಶ್ ಕಲ್ಲಾಗಾರ್, ಬಲ್ಕೀಸ್ ಬಾನು, ರಾಜೇಶ್ ವಡೇರಹೋಬಳಿ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ವಿ.ನರಸಿಂಹ, ರವಿ ವಿ ಎಂ, ರಾಜು ದೇವಾಡಿಗ ಇದ್ದರು.