ಕೋವಿಡ್-19 ರೋಗ ಪತ್ತೆಗೆ ಸರಳ ಮತ್ತು ಪರಿಣಾಮಕಾರಿ ಸೋಲಾರ್ ಕಿಯೋಸ್ಕ್ ಘಟಕ
ಕುಂದಾಪುರ: ಕೋವಿಡ್-19 ರೋಗ ಪತ್ತೆಗೆ ನೆರವಾಗುವಂತೆ ಒಂದು ಸರಳ ಮತ್ತು ಪರಿಣಾಮಕಾರಿ ಕಿಯೋಸ್ಕ್ ಘಟಕವನ್ನು ಸೆಲ್ಕೋ, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕುಂದಾಪುರದ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರ ಮಾರ್ಗದರ್ಶನದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆವರಣದಲ್ಲಿ ಅಳವಡಿಸಲಾಯಿತು.
ಸಮುದಾಯದಲ್ಲಿ ಸ್ಥಳೀಯವಾಗಿ ರೋಗ ಪತ್ತೆ ಹಚ್ಚಲು ಇದೊಂದು ಪರಿಣಾಮಕಾರಿಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗ ಳು, ಸಮುದಾಯ ಆರೋಗ್ಯ ಕೇಂದ್ರಗಳು, ಕ್ವಾರಂಟೈನ್ ಕೇಂದ್ರಗಳು ಇಂಥಹ ಸ್ಥಳಗಳಲ್ಲಿ ಸುಲಭವಾಗಿ ಅಳವಡಿಕೆ ಮಾಡಬಹುದು. 7 ಅಡಿ ಎತ್ತರ ಹಾಗೂ 3×3 ಅಡಿ ಸುತ್ತಳತೆಯ ಈ ಘಟಕವನ್ನು ಕಳಚಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯಲು ಅನುಕೂಲವಾಗುವಂತೆ ರಚನೆ ಮಾಡಲಾಗಿದ್ದು, ವಿಕೇಂದ್ರೀಕೃತ ಸೋಲಾರ್ ಬೆಳಕಿನ ವ್ಯವಸ್ಥೆಯ ಮೂಲಕ ಒಂದು ಸೋಲಾರ್ ಲೈಟ್, ಫ್ಯಾನ್ ಹಾಗೂ ಲೈಟ್, ಮೊಬೈಲ್ ಇತ್ಯಾದಿಗಳನ್ನು ಛಾರ್ಜ್ ಮಾಡಲು ಒಂದು ಛಾರ್ಜಿಂಗ್ ಪಾಯಿಂಟ್ನ್ನು ಅಳವಡಿಸಲಾಗಿದೆ.