ಕೋವಿಡ್ 19- ಸಂಪರ್ಕ ಮಾಹಿತಿ ಮರೆ ಮಾಚಿದವರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಕೋವಿಡ್ ಪಾಸಿಟಿವ್ ರೋಗಿಗಳು ತಮ್ಮ ಸಂಪರ್ಕ ಮಾಹಿತಿಯನ್ನು ಮರೆಮಾಚಿದ್ದರ ಹಿನ್ನಲೆಯಲ್ಲಿ ಇಬ್ಬರ ವಿರುದ್ದ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ.
ಜಿಲ್ಲೆಯ ಕೋವಿಡ್19 ಸೋಂಕಿತ ರೋಗಿ ಸಂಖ್ಯೆ 10186 ಮತ್ತು 10187 ಅವರು ತಮ್ಮ ಸಂಪರ್ಕ ಮಾಹಿತಿ ( travel Histroy) ಮತ್ತು ಪ್ರಾಥಮಿಕ ಸಂಪರ್ಕದ ಮಾಹಿತಿಯ ಬಗ್ಗೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದು ಕಂಡುಬಂದಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ .
ತಪ್ಪು ಮಾಹಿತಿ ನೀಡಿದ ಕಾರಣ ಇವರ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆಹಚ್ಚಲು ತೊಂದರೆ ಆಗಿದ್ದು , ಈ ರೀತಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದ್ದು ,ಕೋವಿಡ್ 19 ವಿರುದ್ದದ ಹೋರಾಟದಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದೆ.