Home Mangalorean News Kannada News ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಸಂಭ್ರಮದ ಆರಂಭ ಕಡಂದಳೆ, ಬ್ರ್ಯಾಂಡ್ ವಿಷನ್, ತುಳುನಾಡಿಗೆ ಜಯ

ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಸಂಭ್ರಮದ ಆರಂಭ ಕಡಂದಳೆ, ಬ್ರ್ಯಾಂಡ್ ವಿಷನ್, ತುಳುನಾಡಿಗೆ ಜಯ

Spread the love

ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಸಂಭ್ರಮದ ಆರಂಭ ಕಡಂದಳೆ, ಬ್ರ್ಯಾಂಡ್ ವಿಷನ್, ತುಳುನಾಡಿಗೆ ಜಯ

ಮಂಗಳೂರು: ಇಲ್ಲಿನ ನೆಹರೂ ಮೈದಾನವೂ ಬಲು ಅಪರೂಪದ ಕ್ರೀಡಾ ಸಂಭ್ರಮಕ್ಕೆ ಇಂದು ಸಾಕ್ಷಿಯಾಗಿತ್ತು. ಕರಾವಳಿಯ ಚಿತ್ರರಂಗದ ಕೋಸ್ಟಲ್‍ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕøತಿಕ ಸಂಘಟನೆಯು ಮಂಗಳೂರಿನ ನೆಹರೂ ಮೈದಾನದಲಿ ಆಯೋಜಿಸಿರುವ ಸುರಕ್ಷಾ ಕೋಸ್ಟಲ್‍ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾಟದ ಉದ್ಘಾಟನೆಯ ಸಡಗರವದು.

ಸಿಡಿಮದ್ದಿನ ಸಿಡಿತ, ವಿವಿಧ ರೀತಿಯ ಮನೋರಂಜನೆಯೊಂದಿಗೆ ಪಂದ್ಯಕೂಟದಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳ ಚಿತ್ರರಂಗದ ಮಂದಿ ಬಣ್ಣ ಬಣ್ಣದ ದಿರಿಸಿನೊಂದಿಗೆ ಭಾಗವಹಿಸಿ ಪಂದ್ಯಾಟದ ಉದ್ಘಾಟನೆಗೆ ಚೆಲುವನ್ನು ತಂದಿದ್ದರು. ಪಂದ್ಯಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತುಳು ಚಿತ್ರ – ನಾಟಕರಂಗದ ಮೇರು ನಟ ದೇವದಾಸ್ ಕಾಪಿಕಾಡ್‍ರವರು ಮಾತನಾಡುತ್ತಾ, ದಿನವೂ ಬೇರೆ ಬೇರೆ ಕಡೆಗಳಲ್ಲಿ ತಮ್ಮ ಕಾಯಕದಲ್ಲಿ ತೊಡಗಿರುವ ಚಿತ್ರರಂಗದ ಮಂದಿ ಇಂದು ಒಂದೇ ಮೈದಾನದಲ್ಲಿ ಒಂದಾಗಿ ಬೆರೆತಿರುವುದು ಖುಷಿ ತಂದಿದೆ. ಇಲ್ಲಿ ಆಟದ ವಿಜಯಕ್ಕಾಗಿ ಪರಸ್ಪರ ಹೋರಾಡುವ ತಂಡಗಳು, ಸೋಲು –ಗೆಲುವು ಏನೇ ಇದ್ದರೂ, ಗೆಲುವು ಎಲ್ಲರದು ಎಂದು ತಿಳಿದು, ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕಲಾಲೋಕದ ಅಭಿವೃದ್ಧಿಗಾಗಿ ದುಡಿಯಬೇಕು ಎಂದರು. ಹಿರಿಯ ನಟರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರುರವರು ಶುಭಕೋರಿದರು.

ಕಾಟ್ಕಾ (ಕೋಸ್ಟಲ್‍ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕøತಿಕ ಸಂಘಟನೆ)ದ ಆಧ್ಯಕ್ಷ ಆಶ್ವಿನಿ ಕೋಟ್ಯಾನ್, ಉಪಾಧ್ಯಕ್ಷ ರಾಜೇಶ್ ಬಂದ್ಯೋಡು ಪದಾಧಿಕಾರಿಗಳಾದ ರಾಜೇಶ್ ಸ್ಕೈಲಾಕ್, ವಿನಾಯಕ ಮೊದಲಾದವರು ಉಪಸ್ಥಿತರಿದ್ದರು.

ಅತಿಥಿಗಳಾಗಿ ವಿಜಯಕುಮಾರ್ ಕೊಡಿಯಾಲಬೈಲ್, ದೇವದಾಸ್ ಪಾಂಡೇಶ್ವರ್, ಅರವಿಂದ ಬೋಳಾರ್, ಮಿಥುನ್‍ರೈ, ಶರ್ಮಿಳಾ ಕಾಪಿಕಾಡ್, ಸಪ್ನಾ, ಯೋಗೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟ, ಸುಧಾಕರ್ ಬನ್ನಂಜೆ, ರಾಜೇಶ್ ಬ್ರಹ್ಮಾವರ್, ಮಹಾಬಲ ಮಾರ್ಲ, ವಿಠ್ಠಲ ಶೆಣೈ ಮತ್ತು ತಂಡಗಳ ಮಾಲೀಕರು, ಪ್ರಾÀ್ರಯೋಜಕರು ಭಾಗವಹಿಸಿದ್ದರು. ನಟ ಅನುರಾಗ್ ಬಂಗೇರ ಸ್ವಾಗತಿಸಿ ವಂದಿಸಿದರು.

ಕಡಂದಲೇಟೈಗರ್ಸ್‍ಗೆಜಯ
ಉದ್ಘಾಟನೆಯ ಬಳಿಕ ಜರಗಿದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕಡಂದಲೇ ಟೈಗರ್ಸ್ ತಂಡವು ಕೊಡಿಯಾಲ್‍ಬೈಲ್ ಛಾಲೆಂಜರ್ಸ್ ತಂಡವನ್ನು 23 ರನ್‍ಗಳ ಅಂತರದಿಂದ ಪರಾಜಯ ಗೊಳಿಸಿತು. ಕಡಂದಲೇ ತಂಡವು ಸುಹಾಸ್ ರೈಯವರ 5 ಸಿಕ್ಸರ್ 3 ಬೌಂಡರಿಗಳನ್ನೊಳಗೊಂಡ ಮಿಂಚಿನ 46 ಓಟಗಳ ನೆರವಿನಿಂದ 10 ಓವರುಗಳಲ್ಲಿ 5 ವಿಕೇಟುಗಳ ನಷ್ಟದಲ್ಲಿ 95 ರನ್‍ಗಳನ್ನು ಗಳಿಸಿತು. ಕೀರ್ತನ್ 26ಕ್ಕೆ 3, ಸೂರಜ್ 24ಕ್ಕೆ 2 ವಿಕೇಟುಗಳನ್ನು ಪಡೆದರು. ಉತ್ತರವಾಗಿ ಕೊಡಿಯಾಲ್‍ಬೈಲ್ ತಂಡವು 6 ವಿಕೇಟುಗಳ ನಷ್ಟದಲ್ಲಿ 76 ರನ್‍ಗಳನ್ನು ಮಾತ್ರ ಗಳಿಸಲು ಶಕ್ತವಾಗಿ 23 ರನ್‍ಗಳ ಅಂತರದ ಸೋಲನ್ನು ಕಂಡಿತು.ಸೂರಜ್ 34, ಮನೋಜ್ 14 ಓಟವನ್ನು ಗಳಿಸಿದರೆ ಸಂತೋಷ್ ಮತ್ತು ಅರುಣ್ ಶೆಟ್ಟಿ ತಲಾ 2 ವಿಕೇಟುಗಳನ್ನು ಪಡೆದರು.

ಬ್ರ್ಯಾಂಡ್ ವಿಷನ್‍ಗೆಗೆಲುವು:
ದಿನದ ಎರಡನೆಯ ಪಂದ್ಯದಲ್ಲಿ ಬ್ರ್ಯಾಂಡ್ ವಿಷನ್ ಟಸ್ಕರ್ ತಂಡವು ಆಸ್ಕರ್ ಮತ್ತು ಸಂಪತ್ ಎಸ್ ರವರು ಗಳಿಸಿದ ತಲಾ 21 ರನ್‍ಗಳ ಸಹಾಯದಿಂದ 10 ಓವರುಗಳಲ್ಲಿ 4 ವಿಕೇಟುಗಳನ್ನು ಕಳೆದುಕೊಂಡು 92 ರನ್‍ಗಳನ್ನು ಪಡೆಯಿತು. ರಾಖೇಶ್ 19ಕ್ಕೆ 2 ವಿಕೇಟ್ ಪಡೆದರು. ಬ್ರ್ಯಾಂಡ್ ವಿಷನ್‍ನ ಸಂಪತ್ (16ಕ್ಕೆ 2), ಸಚೀಂದ್ರ (14ಕ್ಕೆ 3) ಇವರ ಉತ್ತಮ ಬೌಲಿಂಗಿನೆದುರು 10 ಓವರುಗಳಲ್ಲಿ 19 ಓಟಗಳನ್ನು ಮಾತ್ರ ಗಳಿಸಲು ಶಕ್ತವಾಗಿ 33 ಓಟಗಳಿಂದ ಸೋಲನ್ನು ಕಂಡಿತು.

ತುಳುನಾಡಿಗೆ ಜಯ:
ದಿನದ ಕೊನೆಯ ಪಂದ್ಯದಲ್ಲಿ ತುಳುನಾಡ ಪ್ಯಾಂಥರ್ಸ್ ತಂಡವು ರಜತ್‍ರವರ ಭರ್ಜರಿ 48, ಗಣೇಶ್‍ರವರ 22 ಓಟಗಳ ನೆರವಿನಿಂದ 10 ಓವರುಗಳಲ್ಲಿ 6 ವಿಕೇಟುಗಳನ್ನು ಕಳೆದುಕೊಂಡು 96 ರನ್‍ಗಳನ್ನು ದಾಖಲಿಸಿತ್ತು. ಉತ್ತರವಾಗಿ ರಾಯಲ್ ರೇಂಜರ್ಸ್ ತಂಡವು ಚರಣ್ (23ಕ್ಕೆ 3), ಪ್ರಶಾಂತ್‍ರವರ (18ಕ್ಕೆ 4 ವಿಕೇಟು) ಮಾರಕ ಬೌಲಿಂಗಿಗೆ ಸಿಲುಕಿ 10 ಓವರುಗಳಲ್ಲಿ 9 ವಿಕೇಟ್ ನಷ್ಟಕ್ಕೆ 72 ರನ್‍ಗಳನ್ನು ಮಾತ್ರಗಳಿಸಿ ಸೋಲನ್ನುಕಂಡಿತು.


Spread the love

Exit mobile version