ಕೌಶಲ್ಯ ಭಾಗ್ಯ ಪೂರ್ವ ಕಲಿಕೆಯನ್ನು ಗುರುತಿಸುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

Spread the love

ಕೌಶಲ್ಯ ಭಾಗ್ಯ ಪೂರ್ವ ಕಲಿಕೆಯನ್ನು ಗುರುತಿಸುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಮಂಗಳೂರು : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಆಯೋಜಿಸಲಾಗುತ್ತಿರುವ ಕೌಶಲ್ಯಭಾಗ್ಯ ಪೂರ್ವ ಕಲಿಕೆಯನ್ನು ಗುರುತಿಸುವ ಕೌಶಲ್ಯಾಭಿವೃದ್ಧಿ ಕಾರ್ಯಕ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ 16 ಕೇಂದ್ರಗಳಲ್ಲಿ ಫೆಬ್ರವರಿ 27, 28 ಮತ್ತು ಮಾರ್ಚ್ 1 ರಂದು ನಡೆಸಲಾಗುತ್ತಿದೆ.

3 ದಿನಗಳ ಕಾಲ ನಡೆಯುವ ಕೌಶಲ್ಯ ಭಾಗ್ಯ ಕಾರ್ಯಕ್ರಮ ಪಟ್ಟಿಯಂತೆ ಫೆಬ್ರವರಿ 27 ರಂದು ಅಪರಾಹ್ನ 2 ಗಂಟೆಯಿಂದ 6 ಗಂಟೆಯವರೆಗೆ ಮೈಂಟ್ ಟ್ರೀ ಸಂಸ್ಥೆಯವರು ಅಭ್ಯರ್ಥಿಗಳನ್ನು ಕೌನ್ಸೆಲಿಂಗ್ ನಡೆಸಿ ಪೂರ್ವ ಕಲಿಕಾ ಕೌಶಲ್ಯತೆಯನ್ನು ಗುರುತಿಸಿ ದೃಢೀಕರಣ ಪತ್ರ ನೀಡಲಿರುವರು. ಫೆಬ್ರವರಿ 28 ರಂದು ಮತ್ತು ಮಾರ್ಚ್ 1 ರಂದು ಡಾನ್ ಬಾಸ್ಕೊ ಸಂಸ್ಥೆ ಹಾಗೂ ಟ್ಯಾಲೆಂಟ್ ಟ್ರೀ ಸಂಸ್ಥೆಯಿಂದ ಸಾಪ್ಟ್ ಸ್ಕಿಲ್ ತರಬೇತಿ ಮತ್ತು ಉದ್ಯೋಗ ಮಾಹಿತಿ ಶಿಬಿರ ನಡೆಯಲಿದೆ.

ಈಗಾಗಲೇ  ವೆಬ್‍ಸೈಟ್‍ನಲ್ಲಿ ನೊಂದಾಯಿಸಿದ 18-35 ವಯೋಮಿತಿಯ ಅರ್ಹ ಅಭ್ಯರ್ಥಿಗಳಿಗೆ ಶಿಬಿರದಲ್ಲಿ ಹಾಜರಾಗುವಂತೆ ತಿಳಿಸಿ ಮೈಂಟ್ ಟ್ರೀ ಸಂಸ್ಥೆಯಿಂದ ಎಸ್‍ಎಂಎಸ್ ರವಾನಿಸಲಾಗುತ್ತಿದ್ದು ಅಂತಿಮ ವರ್ಷದ ಐ.ಟಿ.ಐ ಪಿಯುಸಿ/ಡಿಗ್ರಿ ಅಭ್ಯರ್ಥಿಗಳು ಗುರುತಿಸಿದ ಕೇಂದ್ರಗಳಿಗೆ ಹಾಜರಾಗಿ ಸರ್ಕಾರದ ಮಹತ್ವದ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಸರಕಾರಿ ಪದವಿ ಕಾಲೇಜು ಕಾರ್‍ಸ್ಟ್ರೀಟ್, ಮಹಾವೀರ ಕಾಲೇಜು ಮೂಡಬಿದ್ರೆ, ಕಣಚೂರು ಡಿಗ್ರಿ ಕಾಲೇಜು ದೇರಳಕಟ್ಟೆ, ಕದ್ರಿ ಐ.ಟಿ ಮಂಗಳೂರು,ಬಂಟ್ವಾಳ ತಾಲೂಕಿನ ಸರಕಾರಿ ಪದವಿ ಕಾಲೇಜು ಕಾಮಾಜೆ, ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ, ಸರ್ಕಾರಿ ಐ.ಟಿ.ಐ ವಿಟ್ಲ, ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜು, ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಸರಕಾರಿ ಮಹಿಳಾ ಐ.ಟಿ.ಐ ನರಿಮೊಗರು, ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಪದವಿ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆ ಸರಕಾರಿ ಐ.ಟಿ.ಐ ಮಾಲಾಡಿ, ಸುಳ್ಯ ತಾಲೂಕಿನಲ್ಲಿ ಸರಕಾರಿ ಪದವಿ ಕಾಲೇಜು ಸುಳ್ಯ, ಸರಕಾರಿ ಪದವಿಪೂರ್ವ ಕಾಲೇಜು ಐವರ್ನಾಡು, ಕೆವಿಜಿ ಐ.ಟಿ.ಐ ಸುಳ್ಯ ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದು ಪ್ರಾಚಾರ್ಯರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿ ಹಿಲ್ಸ್ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.


Spread the love