ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಗಣರಾಜ್ಯೋತ್ಸವ ಆಚರಣೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ವತಿಯಿಂದ 68ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಸಲಾಯಿತು.
ಧ್ವಜಾರೋಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಮಹಮ್ಮದ್ ಇರ್ಶಾದ್ ನಮ್ಮ ಸಂವಿಧಾನವು ಪರಿಪೂರ್ಣವಾಗಿ ಜಾರಿಯಾಗಿ ಇಂದಿಗೆ 68 ವóರ್ಷ ಪೂರ್ಣಗೊಂಡಿದ್ದರೂ ಈ ದೇಶದಲ್ಲಿ ಸಂವಿಧಾನ ಮೌಲ್ಯಗಳು ಕುಸಿಯುತ್ತಿದ್ದು ಜನ ಸಾಮಾನ್ಯರು ಪ್ರಜಾಪ್ರಭುತ್ವ ನೀಡಿದ ಹಕ್ಕುಗಳಿಂದ ದಿನೇ ದಿನೇ ವಂಚಿತರಾಗುತ್ತಿದ್ದಾರೆ. ಗಣರಾಜ್ಯೋತ್ಸವ ದಿನವು ಕೇವಲ ಆಚರಣೆಗೆ ಸೀಮಿತವಾಗದೆ ಸಂವಿಧಾನ, ಪ್ರಜಾಫ್ರಭುತ್ವದ ರಕ್ಷಣೆಗೆ ಎಲ್ಲರು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಪೂಂಜಲ್ಕಟ್ಟೆ ವಹಿಸಿದ್ದರು. ಇಮ್ರಾನ್ ಪಿ.ಜೆ ಸ್ವಾಗತಿಸಿ ವಂದಿಸಿದರು.