ಕ್ಯಾಂಪಸ್ ಫ್ರಂಟ್ ರಾಜ್ಯಾಧಾಕ್ಷರು ಸೇರಿದಂತೆ ಹಲವರ ಬಂಧನ : ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲೆ ಖಂಡನೆ
ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಮಂಗಳವಾರ ಬೆಳಗ್ಗೆ ಬೆಂಗಳೂರಿನ ಗಾಂಧಿ ಪ್ರತಿಮೆಯ ಬಳಿ ಏಮ್ಸ್ (ಆಲ್ ಇಂಡಿಯಾ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಡಳಿ) ಪ್ರವೇಶ ಪರೀಕ್ಷೆಗಳಲ್ಲಿ ವಸ್ತ್ರಸಂಹಿತೆಯನ್ನು ಹೇರಿ ಧಾರ್ಮಿಕ ಮತ್ತು ವೈಯುಕ್ತಿಕ ಸ್ವಾತಂತ್ರ್ಯ ಹರಣವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದ ಕ್ಯಾಂಪಸ್ ಫ್ರಂಟ್ ರಾಜ್ಯ ನಾಯಕರು ಸೆರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದು ದಕ ಜಿಲ್ಲಾ ಸಿಎಫ್ ಐ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಬಾರಿಯು ನೀಟ್ ಪ್ರವೇಶ ಪರೀಕ್ಷೆಗಳಲ್ಲಿ ಇದೇ ರೀತಿ ವಸ್ತ್ರಸಂಹಿತೆಯನ್ನು ಹೇರಿ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯನ್ನು ನೀಡಿದ ಏಮ್ಸ್ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯದಾದ್ಯಂತ ನಿಯಮವನ್ನು ಕೈಬಿಡುವಂತೆ ಮನವಿಯನ್ನು ನೀಡಿತ್ತು ಆದರೆ ಇದಕ್ಕೆ ಯಾವುದೇ ಪರಿಹಾರ ಸಿಗದಿರುವುದರ ಕಾರಣ ಈ ಬಾರಿಯು ಏಮ್ಸ್ ಪ್ರವೇಶ ಪರೀಕ್ಷೆ ಪ್ರಕ್ರಿಯೆಯಲ್ಲಿ ಇಂತಹ ಸನ್ನಿವೇಶ ಮರುಕಳಿಸಿದರ ವಿರುದ್ಧ ಇಂದು ಗಾಂಧಿ ಪ್ರತಿಮೆಯ ಬಳಿ ರಾಜಭವನಕ್ಕೆ ಮನವಿಯನ್ನು ನೀಡಲು ಸೇರಿದ ರಾಜ್ಯಾಧ್ಯಕ್ಷರು ಸೇರಿದಂತೆ ಕಾರ್ಯಕರ್ತರ ಅಕ್ರಮ ಬಂಧನವನ್ನು ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಆದುದರಿಂದ ಬಂಧಿಸಿರುವ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ಶ್ರೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲೆ ಪರವಾಗಿ ಒತ್ತಾಯಿಸಿದ್ದಾರೆ.