Home Mangalorean News Kannada News ಕ್ರಿಯಾಶೀಲತೆಯಿಂದ ಸಮಾಜದ ಅಭಿವೃದ್ಧಿ: ಅಪ್ಪಣ್ಣ ಹೆಗ್ಡೆ

ಕ್ರಿಯಾಶೀಲತೆಯಿಂದ ಸಮಾಜದ ಅಭಿವೃದ್ಧಿ: ಅಪ್ಪಣ್ಣ ಹೆಗ್ಡೆ

Spread the love

ಕ್ರಿಯಾಶೀಲತೆಯಿಂದ ಸಮಾಜದ ಅಭಿವೃದ್ಧಿ: ಅಪ್ಪಣ್ಣ ಹೆಗ್ಡೆ

ಮಂಗಳೂರು: ವಿವಿಧ ಧ್ಯೇಯೋದ್ದೇಶಗಳನ್ನು ಹೊತ್ತು ಅಸ್ತಿತ್ವಕ್ಕೆ ಬರುವ ಸಂಘಟನೆಗಳು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲವಾಗಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಎರಡು ವರ್ಷಗಳ ತನ್ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಸಮಾಜ ಬಾಂಧವರಲ್ಲಿ ಭರವಸೆಯನ್ನು ಮೂಡಿಸಿದೆ ಎಂದು ಕುಂದಾಪುರದ ಹಿರಿಯ ಮುಂದಾಳು, ಮಾಜಿ ಶಾಸಕ ಅಪ್ಪಣ ಹೆಗ್ಡೆ ಹೇಳಿದರು.

bunt-welfare-trust

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ನಗರದ ಕುಡ್ಲ ಪೆವಿಲಿಯನ್‍ನಲ್ಲಿ ಜರಗಿದ ಮೂರು ಜಿಲ್ಲೆಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸವಣೂರಿನಲ್ಲಿ ಸಮಾವೇಶ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈಯವರು ಮಾತನಾಡಿ “ಟ್ರಸ್ಟ್ ಕಾರ್ಯ ಚಟುವಟಿಕೆಗಳು ಒಂದೇ ಕಡೆಗೆ ಸೀಮಿತವಾಗಿರದೆ, ನಾಡು ಹೊರನಾಡುಗಳಲ್ಲಿರುವ ಸಮಾಜ ಭಾಂಧವರನ್ನು ತಲುಪುವಂತಾಗಬೇಕು.ಅದಕ್ಕಾಗಿ ಮುಂದಿನ ಸಮಾವೇಶವನ್ನು ಸವಣೂರಿನಲ್ಲಿ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರು ಟ್ರಸ್ಟ್ ನ ಮುಂದಿನ ಯೋಜನೆಗಳನ್ನು ಪ್ರಸ್ತಾಪಿಸಿ ಸರ್ವರ ಸಹಕಾರ ಕೋರಿದರು.ಇದೇ ಆಗಸ್ಟಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯಲ್ಲಿ ಪುತ್ತೂರು ಮತ್ತು ಸುಳ್ಯ ವಲಯದ ಬಂಟ ಬಾಂಧವರ ಸಮಾವೇಶ ನಡೆಸುವುದಾಗಿ ಪ್ರಕಟಿಸಿದರು.

ಟ್ರಸ್ಟ್ ಕಾರ್ಯಧ್ಯಕ್ಷರಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಕೊಳಾರು ಸತೀಶ್ಚಂದ್ರ ಭಂಡಾರಿ ಮತ್ತು ಮಹಿಳಾ ವಿಭಾಗದ ಸಂಚಾಲಕಿ ವಿಜಯಲಕ್ಷ್ಮಿ ಬಿ.ಶೆಟ್ಟಿ ಮಾತನಾಡಿದರು.ಸದಾಶಯ ತ್ರೈಮಾಸಿಕದ ಪ್ರಧಾನ ಸಂಪಾದಕ ಬಾಸ್ಕರ ರೈ ಕುಕ್ಕುವಳ್ಳಿ ವಿಶೇಷ ಸಂಚಿಕೆಯ ಕುರಿತು ಮಾಹಿತಿ ನೀಡಿದರು.

ಟ್ರಸ್ಟ್ ಪ್ರಮುಖರಾದ ಪಡು ಚಿತ್ತರಂಜನ್ ರೈ, ಕೇನ್ಯಾ ರವೀಂದ್ರನಾಥ ರೈ, ನೇಮಿರಾಜ ರೈ, ವಿನೋದ ಎಸ್.ಶೆಟ್ಟಿ,ಕಾರ್ಕಳ ಲಕ್ಷ್ಮಣರೈ ಕಾವೂರು, ಜ್ಯೋತಿ ಪ್ರಸಾದ್ ಹೆಗ್ಡೆ, ಶಮೀನಾ ಆಳ್ವ,ಕೊಟ್ಟಾರ ಕೋಡಿಕಲ್ ಬಂಟರ ಸಂಘದ ಅಧ್ಯಕ್ಷ .ಕಮಲಾಕ್ಷ ಶೆಟ್ಟಿ, ಜಪ್ಪಿನ ಮೊಗರು ಬಂಟರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ,ಗೌರವಾಧ್ಯಕ್ಷ ಶಶಿಧರ ಶೆಟ್ಟಿ, ಜಪ್ಪು ಬಂಟರ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಮತ್ತು ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ ಪ್ರಸ್ತಾವಿಕವಾಗಿ ಮಾತನಾಡಿದರು.ಪ್ರದೀಕ್ ಆಳ್ವ ವಂದಿಸಿದರು.


Spread the love

Exit mobile version