ಕ್ರಿಶ್ಚಿಯನ್ ಅಭಿವೃದ್ಧಿ ಉಪಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಪ್ರಶಾಂತ್ ಜತ್ತನ್ನ ನೇಮಕ
ಉಡುಪಿ: ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಸದಸ್ಯ, ಬಿಗ್ ಜೆ ವಾಹಿನಿ ನಿರ್ದೇಶಕರ ಪ್ರಶಾಂತ್ ಜತ್ತನ್ನ ಸೇರಿದಂತೆ ಮೂವರನ್ನು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಉಪಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಇತರ ಇಬ್ಬರು ಸದಸ್ಯರುಗಳಾದ ಬಳ್ಳಾರಿ ಜಿಲ್ಲೆ ಕಂಪ್ಲಿ ವಿನಾಯಕ ನಗರದ ಎಂ ಪ್ರಸಾದ್ ರಾವ್ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಯರಡೋಣದ ವೈ ಆನಂದ್ ಕೂಡ ಇತರ ಸದಸ್ಯರುಗಳಾಗಿದ್ದಾರೆ.