ಕ್ರೀಡಾ, ಸಾಂಸ್ಕøತಿಕ ಮನೋಭಾವ ಬೆಳೆಸಿ, ಸಮಾಜಕ್ಕೆ ಉತ್ತಮ ಸೇವೆ ನೀಡಿ-ಪ್ರದೀಪ್‍ ಡಿ’ಸೋಜ 

Spread the love

ಕ್ರೀಡಾ, ಸಾಂಸ್ಕøತಿಕ ಮನೋಭಾವ ಬೆಳೆಸಿ, ಸಮಾಜಕ್ಕೆ ಉತ್ತಮ ಸೇವೆ ನೀಡಿ-ಪ್ರದೀಪ್‍ ಡಿ’ಸೋಜ 

ಮಂಗಳೂರು: ಸರ್ಕಾರಿ ನೌಕರರಿಗೆ ಕ್ರೀಡಾ ಮನೋಭಾವ, ಸಾಂಸ್ಕøತಿಕ ಮನೋಭಾವ ಬೆಳೆಯಬೇಕು, ಜನರಿಗೆ, ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ಸರ್ಕಾರಿ ನೌಕರರಿಗೆಂದು ನಡೆಯುವ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಹೆಸರನ್ನು ಬೆಳಗಿಸಬೇಕು ಎಂದು ದ.ಕ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜ ಹೇಳಿದರು.

ಶುಕ್ರವಾರ ಮಂಗಳೂರಿನ ಸರ್ಕಾರಿ ನೌಕರರ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಸಾಂಸ್ಕøತಿಕ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.

ಪ್ರತೀದಿನ ಕೆಲಸದ ಒತ್ತಡ ಹಾಗೂ ಮನೆಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸರಕಾರಿ ನೌಕರರಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ದೊರೆಯಲಿ, ತಮ್ಮ ಎಲ್ಲಾ ಕೆಲಸಗಳನ್ನು ಒಂದು ದಿನ ಬದಿಗೊತ್ತಿ ಸಾಂಸ್ಕøತಿಕ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

ಪ್ರತಿ ಕ್ರೀಡೆ ಅಥವಾ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲಾ ನೌಕರರು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು. ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಎಲ್ಲಾ ನೌಕರರು ಚಟುವಟಿಕೆಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (ರಿ) ಅಧ್ಯಕ್ಷ ಪಿ.ಕೆ ಕೃಷ್ಣ ಮಾತಾನಾಡಿ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದ್ದು, ನಂತರ ಸಾಂಸ್ಕøತಿಕ ಸ್ಪರ್ಧೆಯತ್ತ ಎಲ್ಲಾ ಸರ್ಕಾರಿ ನೌಕರರು ಅತೀ ಸ್ಪರ್ಧಾಸ್ಪೂರ್ತಿಯಿಂದ ಭಾಗವಹಿಸುತ್ತಿದ್ದಾರೆ. ವಿವಿಧ ಪಾರಂಪರಿಕ ಚಟುವಟಿಕೆಗಳು ನಡೆಯಲಿದ್ದು, ತೀರ್ಪುಗಾರರ ತೀರ್ಪಿಗೆ ಉತ್ತಮ ಸ್ಪಂದನೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ, ಕರ್ನಾಟಕ ರಾಜ್ಯ ನೌಕರರ ಸಂಘದ(ರಿ) ದ.ಕ ಜಿಲ್ಲೆ ಉಪಾಧ್ಯಕ್ಷ ಹೆಚ್ ಗಣೇಶ್ ರಾವ್, ಸುಜಾತ, ಕ್ರೀಡಾ ಇಲಾಖೆ ಅಧಿಕಾರಿ ವಿನೋದ್, ಕರ್ನಾಟಕ ರಾಜ್ಯ ನೌಕರರ ಸಂಘದ ಖಜಾಂಚಿಗಳಾದ ಅಕ್ಷಯ್ ಭಂಡಾರ್‍ಕರ್, ರಾಜ್ಯ ಪರಿಷತ್ ಸದಸ್ಯೆ ಶೆರ್ಲಿ ಸುಮಾಲಿನಿ, ಸಂಘದ ಉಪಾಧ್ಯಕ್ಷರಾದ ಜಗದೀಶ್, ಸುಜಾತ, ದಿ ಸೌತ್ ಕೆನರಾ ಸರ್ಕಾರಿ ನೌಕರರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ನಾಯಕ್, ‘ಡಿ’ ಗ್ರೂಪ್ ನೌಕರರ ಸಂಘದ ಅಧ್ಯಕ್ಷೆ ಶೋಭಾ ಶೆಟ್ಟಿ ಉಪಸ್ಥಿತರಿದ್ದರು.


Spread the love