ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ತರಬೇತಿ ಅಗತ್ಯ: ಅಜಿತ್‍ಕುಮಾರ್ ರೈ ಮಾಲಾಡಿ

Spread the love

ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ತರಬೇತಿ ಅಗತ್ಯ: ಅಜಿತ್‍ಕುಮಾರ್ ರೈ ಮಾಲಾಡಿ

ಮಂಗಳೂರು: ಕ್ರೀಡೆಯಲ್ಲಿ ಎಳೆಯ ಪ್ರತಿಭಾವಂತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತರಬೇತುಗೊಳಿಸುವ ಕಾರ್ಯನಡೆಯಬೇಕಾಗಿದೆ. ಎಳವೆಯಲ್ಲೇ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜವೂ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್‍ಕುಮಾರ್ ರೈ ಮಾಲಾಡಿ ತಿಳಿಸಿದರು.

bunts sports

ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್‍ಹಾಸ್ಟೆಲ್‍ನ ಶ್ರೀರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ಜರಗಿದ ಬಂಟರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಕೃಷ್ಣಪ್ರಸಾದ್ ರೈ ಬೆಳ್ಳಿಪ್ಪಾಡಿ, ಕೆ.ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ.ಆಶಾಜ್ಯೋತಿ ರೈ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ ಪದವು ಮೇಗಿನ ಮನೆ, ಸಿಎ ಮನಮೋಹನ್ ಶೆಟ್ಟಿ, ಉದ್ಯಮಿಗಳಾದ ಆನಂದ ಶೆಟ್ಟಿ ಅಡ್ಯಾರ್, ಪಾಂಡುರಂಗ ಶೆಟ್ಟಿ, ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ , ಕೃಷ್ಣ ರಾಜ ಸುಲಾಯ, ಬಿ. ಶೇಖರ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳಾೈರ್‍ಗುತ್ತು ಸ್ವಾಗತಿಸಿದರು. ಕ್ರೀಡಾ ಸಂಘಟಕ ಕಿರಣ್‍ಪಕ್ಕಳ ವಂದಿಸಿದರು. ಸುಖೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.


Spread the love