ಕ್ರೈಂ ಮತ್ತು ಟ್ರಾಫಿಕ್ ಸುವ್ಯವಸ್ಥೆ ಡಿಸಿಪಿಯಾಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ
ಮಂಗಳೂರು: ನಗರದಲ್ಲಿ ಖಾಲಿಯಾಗಿದ್ದ ಕ್ರೈಂ ಮತ್ತು ಟ್ರಾಫಿಕ್ ಸುವ್ಯವಸ್ಥೆ ಡಿಸಿಪಿ ಹುದ್ದೆಯನ್ನು ನೂತನ ಡಿಸಿಪಿಯಾಗಿ ಉಮಾಪ್ರಶಾಂತ್ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೊದಲು ಡಿಸಿಪಿಯಾಗಿದ್ದ ಡಾ. ಸಂಜೀವ್ ಪಾಟೀಲ್ ಅವರು ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಹನುಮಂತರಾಯ ಅವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಬಳಿಕ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಶಾಂತರಾಜು ಅವರು ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಹನುಮಂತರಾಯ ಅವರನ್ನು ಸರಕಾರ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ನೇಮಿಸಿದ ಬಳಿಕ ಕ್ರೈ ಮತ್ತು ಸಂಚಾರ ಸುವ್ಯವಸ್ಥೆ ಡಿಸಿಪಿ ಹುದ್ದೆ ಖಾಲಿಯಾಗಿತ್ತು.
ಪ್ರಸ್ತುತ ಬುಧವಾರ ಖಾಲಿಯಾಗಿದ್ದ ಜಾಗಕ್ಕೆ ನೂತನ ಡಿಸಿಪಿಯಾಗಿ ಉಮಾಪ್ರಶಾಂತ್ ಅಧಿಕಾರ ವಹಿಸಿಕೊಂಡಿದ್ದಾರೆ.
ಉಮಾಪ್ರಶಾಂತ್ ಈ ಮೊದಲು ಬೆಂಗಳೂರು ಕೇಂದ್ರ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.