ಕ್ವಾರೆಂಟನ್ ಸಿಲ್ ಇದ್ದು, ನಗರದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳ ರಕ್ಷಿಸಿ ಕ್ವಾರೆಂಟನ್ ಕೇಂದ್ರಕ್ಕೆ ದಾಖಲು

Spread the love

ಕ್ವಾರೆಂಟನ್ ಸಿಲ್ ಇದ್ದು, ನಗರದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳ ರಕ್ಷಿಸಿ ಕ್ವಾರೆಂಟನ್ ಕೇಂದ್ರಕ್ಕೆ ದಾಖಲು

ಉಡುಪಿ: ಕೈಗೆ ಕ್ವಾರೆಂಟನ್ ಸಿಲ್ ಇದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತ ಆತಂಕ ಸೃಷ್ಟಿಸಿದ ಇರ್ವರು ಹಿರಿಯ ನಾಗರಿಕರನ್ನು ಪೊಲೀಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಅವರನ್ನು ವಶಕ್ಕೆ ಪಡೆದು, ಆದಿ ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ವಾರೆಂಟನ್ ಕೇಂದ್ರದಲ್ಲಿ ದಾಖಲಿಸಿದ್ದಾರೆ.

ಇವರಲ್ಲಿ ಒಬ್ಬರು ಕೇರಳದಲ್ಲಿರುವ ಮಠದ ಸ್ವಾಮೀಜಿ ಎಂದು ತಿಳಿದು ಬಂದಿದೆ. ಇವರು ಕೇರಳ ಮಾರ್ಗವಾಗಿ ಮಂಗಳೂರು ಮೂಲಕ ಉಡುಪಿಗೆ ಬಸ್ಸಿನಲ್ಲಿ ಆಗಮಿಸಿದ್ದರು. ಇವರ ಕೈಗೆ ಕ್ವಾರೆಂಟನ್ ಮುದ್ರೆ ಹಾಕಿರುವುದು ಕಂಡು ಬಂದಿದೆ ಹಾಗೆಯೇ ವಾರಣಾಸಿಯಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ ಶಿವಮೊಗ್ಗ ಮೂಲದ ಮಹಿಳೆಯೊರ್ವಳು, ಮಂಗಳೂರಿನಿಂದ ಊರಿಗೆ ತೆರಳಲೆಂದು ಉಡುಪಿಗೆ ಆಗಮಿಸಿದ್ದರು. ಇವರಿಗೂ ಕ್ವಾರೆಂಟನ್ ಮುದ್ರೆ ಹಾಕಲಾಗಿದೆ. ಎರಡು ಪ್ರಯಾಣಿಕರು ಹೊರ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಪಡೆದವರಾಗಿದ್ದರು. ಉಡುಪಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಇವರಿರ್ವರು ಸಂಚಾರದಲ್ಲಿದ್ದಾಗ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾರ್ಯಚರಣೆಯಲ್ಲಿ ಸಮಾಜಸೇವಕನಿತ್ಯಾನಂದ ಒಳಕಾಡು ಇಲಾಖೆಗೆ ಸಹಕಾರ ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಾರ್ಯಚರಣೆಗೆ ಉಚಿತ ಅಂಬಲೇನ್ಸ್ ಸೇವೆ ಒದಗಿಸಿತು.


Spread the love