Home Mangalorean News Kannada News ‘ಕ್ಷಮತಾ ಅಕಾಡೆಮಿ’ -2019-20; ಮೊದಲ ಶಿಬಿರ ಸಮಾರೋಪ ಸಮಾರಂಭ

‘ಕ್ಷಮತಾ ಅಕಾಡೆಮಿ’ -2019-20; ಮೊದಲ ಶಿಬಿರ ಸಮಾರೋಪ ಸಮಾರಂಭ

Spread the love
RedditLinkedinYoutubeEmailFacebook MessengerTelegramWhatsapp

‘ಕ್ಷಮತಾ ಅಕಾಡೆಮಿ’ -2019-20; ಮೊದಲ ಶಿಬಿರ ಸಮಾರೋಪ ಸಮಾರಂಭ

ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ವರ್ಷಂಪ್ರತಿ ಏರ್ಪಡಿಸುತ್ತದೆ. ಈ ಸಾಲಿನ “ಕ್ಷಮತಾ ಅಕಾಡೆಮಿ” ಮೊದಲ ಶಿಬಿರದ ಸಮಾರೋಪ ಸಮಾರಂಭ ದಿ. 28-12-2019 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಕ್ಷಮತಾ” ಶಿಬಿರದ ಸದುಪಯೋಗ ಮನವರಿಕೆ ಮಾಡಿಸಿದರು. ಹಾಗೆಯೇ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಬೇಕಾದ ಉಪಯುಕ್ತವಾದ ಸಲಹೆಗಳನ್ನು ನೀಡಿದರು.

ವಿಶ್ವ ಕೊಂಕಣಿ ಕೇಂದ್ರ ಭಾಷಾ ಸಂಸ್ಥಾನ ನಿರ್ದೇಶಕ  ಗುರುದತ್ತ ಬಂಟ್ವಾಳಕಾರ, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ  ಬಿ. ಪ್ರಭಾಕರ ಪ್ರಭು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು ಮತ್ತು ನಡೆದ ವಿವಿಧ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version