ಕ.ರಾ.ರ.ಸಾ.ನಿಗಮ- ವಿದ್ಯಾರ್ಥಿ ಪಾಸ್ ಪಡೆಯಲು ಅರ್ಜಿ ಅಹ್ವಾನ

Spread the love

ಕ.ರಾ.ರ.ಸಾ.ನಿಗಮ- ವಿದ್ಯಾರ್ಥಿ ಪಾಸ್ ಪಡೆಯಲು ಅರ್ಜಿ ಅಹ್ವಾನ

ಉಡುಪಿ: ಕ.ರಾ.ರ.ಸಾ.ನಿಗಮ, ಮಂಗಳೂರು ವಿಭಾಗವು ಪ್ರತಿ ವರ್ಷದಂತೆ ಈ ವರ್ಷವು 2017-18ನೇ ಸಾಲಿಗಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ಸು ಪಾಸುಗಳನ್ನು ವಿತರಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿರುತ್ತದೆ.

ಮೊದಲನೇ ಹಂತವಾಗಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಸ್ಸು ಪಾಸುಗಳನ್ನು ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಫಾರಂಗಳನ್ನು ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಯಿಂದ ದೃಢೀಕರಿಸಿ ಕರಾರಸಾ.ನಿಗಮ, ಕುಂದಾಪುರ ಹಾಗೂ ಉಡುಪಿ ಬಸ್ಸು ನಿಲ್ದಾಣಗಳಲ್ಲಿ ಸಲ್ಲಿಸಬೇಕಾಗಿರುತ್ತದೆ. ಶೈಕ್ಷಣಿಕ ಸಂಸ್ಥೆಯಿಂದ ಮತ್ತು ವಾಸ ಸ್ಥಳಕ್ಕೆ 60 ಕಿ.ಮೀ ಗರಿಷ್ಟ ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.

2017-18ನೇ ಸಾಲಿನ ಪಾಸಿನ ದರಗಳು ಈ ಮುಂದಿನಂತಿವೆ.

1 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ (ಸಂಸ್ಕರಣ ಶುಲ್ಕ ತಲಾ ರೂ: 80/- ಹಾಗೂ ಅಪಘಾತ ಪರಿಹಾರ ಶುಲ್ಕ ರೂ: 50/-) ಒಟ್ಟು ರೂ: 130/-, ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 600/- ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ರೂ: 400/-, ಕಾಲೇಜು /ಡಿಪ್ಲೊಮಾ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 900/-, ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳಿಗೆ ರೂ: 1150/-, ವೃತ್ತಿಪರ ಕೋರ್ಸ್‍ಗಳಾದ ವೈದ್ಯಕೀಯ ಇಂಜಿನಿಯರಿಂಗ್ ಇತರ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 1400/-, ಸಂಜೆ ಕಾಲೇಜು/ ಪಿ ಹೆಚ್ ಡಿ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ರೂ: 1200/- ಸಂಸ್ಕರಣ ಶುಲ್ಕ ತಲಾ ರೂ: 80/- ಹಾಗೂ ಅಪಘಾತ ಪರಿಹಾರ ಶುಲ್ಕ ರೂ: 50/- ನ್ನು ನೀಡುವುದು. ಅಲ್ಲದೆ ಪ್ರಸ್ತುತ ವರ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಪಾಸು ನೀಡಲಾಗುವುದು. ( ಸಂಸ್ಕರಣ ಶುಲ್ಕ+ ಅಪಘಾತ ಪರಿಹಾರ ಶುಲ್ಕ ಒಟ್ಟು ರೂ: 130/- ಮಾತ್ರ ಪಾವತಿಸತಕ್ಕದ್ದು) ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love