Home Mangalorean News Kannada News ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ

ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ

Spread the love

ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ

ಮಂಗಳೂರು: ಖಾಸಗಿ ಸ್ಥಳಗಳಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ದಾಸ್ತಾನು ಮಾಡಿ ಇಟ್ಟು ಅಲ್ಲಿಂದ ಸಾಗಾಟ ಮಾಡುತ್ತಿದ್ದ ಜಾಲವನ್ನು ಪಣಂಬೂರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಪ್ಟೆಂಬರ್ 21 ರಂದು ಪಣಂಬೂರು ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ನಾಯರ್ ಕುದ್ರು ಎಂಬಲ್ಲಿ ಖಾಸಗಿ ಸ್ಥಳಗಳಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ದಾಸ್ತಾನು ಮಾಡಿ ಇಟ್ಟು ಅಲ್ಲಿಂದ ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಮೇಲ್ಕಂಡ ಸ್ಥಳಗಳಿಗೆ ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀ ರಾಜೇಂದ್ರ ಡಿ.ಎಸ್ ರವರು ಮತ್ತು ಪಣಂಬೂರು ಠಾಣಾ ಪಿ.ಐ ರಫೀಕ್.ಕೆ.ಎಂ. ಹಾಗೂ ಸಿಬ್ಬಂದಿಗಳೊಂದಿಗೆ ಧಾಳಿ ಮಾಡಿ ಅಕ್ರಮ ಮರಳು ದಾಸ್ತಾನು ಅಡ್ಡೆಯನ್ನು ಪತ್ತೆ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಿದ್ದು ಸುಮಾರು 650 ಟನ್ (65 ಲೋಡ್) ಮರಳನ್ನು ಮತ್ತು ಮರಳನ್ನು ತೆಗೆಯಲು ಹಾಗೂ ಲೋಡ್ ಮಾಡಲು ಉಪಯೋಗಿಸಿದ 02 ಜೆಸಿಬಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಸ್ವಾಧೀನಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ ರೂ 4,50,000/- ಆಗಬಹುದು ಹಾಗೂ 02 ಜೆಸಿಬಿ ವಾಹನಗಳು(ತಲಾ 10 ಲಕ್ಷ) ಅಂದಾಜು ರೂ. 20,00,000/- ಬೆಲೆ ಬಾಳಬಹುದಾಗಿದೆ. ಪತ್ತೆಯಾದ ಅಕ್ರಮ ಮರಳನ್ನು ಯಾರು. ಯಾವ ಕಾರಣಕ್ಕಾಗಿ ದಾಸ್ತಾನು ಮಾಡಿರುವುದಾಗಿದೆ? ಕಳವು ಮಾಡಿ ದಾಸ್ತಾನು ಮಾಡಿರುವುದಾಗಿದೆಯೇ? ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದಾಗಿಯೇ? ಎಂದು ತನಿಖೆ ಕೈಗೊಳ್ಳಲಾಗಿದ್ದು, ಒಂದು ಜಾಗದಲ್ಲಿ ಎಲಿಯಾಸ್ ಡಿ’ಲಿಮಾ, ಶ್ರೀಕಾಂತ್ ಮತ್ತು ಜುನೈದ್ ಎಂಬವರುಗಳು ಹಾಗೂ ಇನ್ನೊಂದು ಸ್ಥಳದಲ್ಲಿ ವಿಲ್ಫಿ ಕುವೆಲ್ಲೋ, ಡಾರ್ವಿನ್ ಕುವೆಲ್ಲೋ ಮತ್ತು ನವೀನ್ ಎಂಬವರುಗಳು ಅಕ್ರಮ ದಾಸ್ತಾನು ಮಾಡಿರುವುದು ತಿಳಿದು ಬಂದಿರುತ್ತದೆ. ಸದ್ರಿ ಮರಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಉಪ-ನಿರ್ದೇಶಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಿಗೆ ಹಸ್ತಾಂತರಿಸಲಾಗಿರುತ್ತದೆ.

ಸ್ವಾಧೀನಪಡಿಸಿದ ಸೊತ್ತುಗಳು:
1) ಅಂದಾಜು ಮೌಲ್ಯ ರೂ 4,50,000/- ಬೆಲೆ ಬಾಳುವ ಸುಮಾರು 650 ಟನ್ (65 ಲೋಡ್) ಅಕ್ರಮ ಮರಳು.
2) KA 04A 2079ನೇ ನೊಂದಣಿ ಸಂಖ್ಯೆಯ ಜೆಸಿಬಿ ಅಂದಾಜು ಮೌಲ್ಯ ಹತ್ತು ಲಕ್ಷ (10,00,000/-) ರೂಪಾಯಿ.
3) KA 19A 4863ನೇ ನೊಂದಣಿ ಸಂಖ್ಯೆಯ ಜೆಸಿಬಿ ಅಂದಾಜು ಮೌಲ್ಯ ಹತ್ತು ಲಕ್ಷ (10,00,000/-) ರೂಪಾಯಿ.

ಅಕ್ರಮ ಮರಳು ದಾಸ್ತಾನು ಮಾಡಿದವರು:-
1) ಎಲಿಯಾಸ್ ಡಿ’ಲಿಮಾ, ಶ್ರೀಕಾಂತ್ ಮತ್ತು ಜುನೈದ್
2) ವಿಲ್ಫಿ ಕುವೆಲ್ಲೋ, ಡಾರ್ವಿನ್ ಕುವೆಲ್ಲೋ ಮತ್ತು ನವೀನ್

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್ ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love

Exit mobile version