Home Mangalorean News Kannada News ಖಾಸಗೀ ಆಸ್ಪತ್ರೆಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ ಕೋರೋನಾ ದಂಧೆ ; ಮೌನಕ್ಕೆ ಜಾರಿದ ಜನಪ್ರತಿನಿಧಿಗಳು – ಜಯಂತಿ....

ಖಾಸಗೀ ಆಸ್ಪತ್ರೆಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ ಕೋರೋನಾ ದಂಧೆ ; ಮೌನಕ್ಕೆ ಜಾರಿದ ಜನಪ್ರತಿನಿಧಿಗಳು – ಜಯಂತಿ. ಬಿ.ಶೆಟ್ಟಿ

Spread the love

ಖಾಸಗೀ ಆಸ್ಪತ್ರೆಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ ಕೋರೋನಾ ದಂಧೆ ; ಮೌನಕ್ಕೆ ಜಾರಿದ ಜನಪ್ರತಿನಿಧಿಗಳು – ಜಯಂತಿ. ಬಿ.ಶೆಟ್ಟಿ

ಮಂಗಳೂರು: ಅತ್ತ ಕೋರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಜನತೆ ಭಯಭೀತಿಗೊಳಗಾಗಿದ್ದರೆ,ಇತ್ತ ಖಾಸಗೀ ಆಸ್ಪತ್ರೆಗಳು ಕೋರೋನಾ ಹೆಸರಿನಲ್ಲಿ ಜನತೆಯನ್ನು ವಿಪರೀತವಾಗಿ ಸುಲಿಗೆ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದೆ. ಲಾಕ್ ಡೌನ್ ನಿಂದಾಗಿ ಜನರ ಬದುಕು ತೀರಾ ತತ್ತರಿಸಿದ್ದು, ಉದ್ಯೋಗವಿಲ್ಲದೆ,ಕಾಸಿಲ್ಲದೆ, ಆಹಾರವಿಲ್ಲದೆ ಕಂಗಾಲಾಗಿರುವ ಈ ಸಂಧರ್ಭದಲ್ಲಿ ಕೋರೋನಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸರಕಾರಗಳು ಹಾಗೂ ಜನಪ್ರತಿನಿಧಿಗಳು ದಿನ್ಯಮೌನ ವಹಿಸುವ ಮೂಲಕ ಪರೋಕ್ಷವಾಗಿ ಸಹಕರಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ* ಎಂದು ಸಿಪಿಐಎಮ್ ದ.ಕ.ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದರು.

ಕೋರೋನಾ ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಫಲತೆಯ ವಿರುದ್ದ ಸಿಪಿಐಎಮ್ ಹಮ್ಮಿಕೊಂಡ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಪಕ್ಕಲಡ್ಕದಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ ಅವರು, ಈ ಮಾತುಗಳನ್ನು ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಐಟಿಯು ಜಿಲ್ಲಾ ಮುಖಂಡರಾದ ಜಯಲಕ್ಷ್ಮಿಯವರು ಮಾತನಾಡುತ್ತಾ, ಲಾಕ್ ಡೌನ್ ನಿಂದಾಗಿ ವಿವಿಧ ವಿಭಾಗದ ಕಾರ್ಮಿಕರು ತೀರಾ ಸಂಕಷ್ಟದಲ್ಲಿದ್ದು, ಇಲ್ಲಿಯವರೆಗೂ ಯಾವುದೇ ಪರಿಹಾರವನ್ನು ಘೋಷಿಸಿಲ್ಲ. ಬದಲಾಗಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯುದ್ಧದ ಉನ್ಮಾದವನ್ನು ಸ್ರಷ್ಠಿಸಲಾಗಿದೆ. ದೇಶದ ಆರ್ಥಿಕತೆಯ ಜೊತೆಗೆ ಜನರ ಬದುಕನ್ನು ಸರ್ವನಾಶ ಮಾಡಲು ಕೇಂದ್ರದ ನರೇಂದ್ರ ಮೋದಿ ಸರಕಾರ ಹವಣಿಸುತ್ತಿದೆ* ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಿಪಿಐಎಮ್ ಜಿಲ್ಲಾ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ, ಇತರ ಸ್ಥಳೀಯ ಕಾರ್ಮಿಕ ನಾಯಕರಾದ ಲೀಲಾ ಜೆ, ರೋಹಿಣಿ, ಗೀತಾ, ಭಾರತಿ, ವಿಮಲ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version