ಗಂಗೊಳ್ಳಿ ಗ್ರಾಪಂ ಚುನಾವಣೆ: ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ ಜಯ ಗಳಿಸಿದ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳು

Spread the love

ಗಂಗೊಳ್ಳಿ ಗ್ರಾಪಂ ಚುನಾವಣೆ: ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ ಜಯ ಗಳಿಸಿದ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳು

ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು ಎಸ್ ಡಿ ಪಿ ಐ ಬೆಂಬಲಿತ 7 ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ.

ಗಂಗೊಳ್ಳಿ ಗ್ರಾಮ ಪಂಚಾಯತಿಯ ಒಟ್ಟು 33 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ 2ನೇ ಹಾಗೂ 6ನೇ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಒಟ್ಟು 7 ಜನ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸ್ಪರ್ಧಿಸಿದ ಆ ಏಳೂ ಜನ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

2ನೇ ವಾರ್ಡಿನಲ್ಲಿ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳಾದ ತಬ್ರೇಜ್ ಗಂಗೊಳ್ಳಿ, ರಜ್ಜಬ್ ಬುಡ್ದಾ, ಅಬೂಬಕರ್ ನಾಖುದಾ ಹಾಗೂ ಶರೀನಾ ಜಯಗಳಿಸಿದರೆ 6ನೇ ವಾರ್ಡಿನಿಂದ ಮೋಮಿನ್ ಸಮೀರ್, ಆಲ್ಬರ್ಟ್ ಫೆರ್ನಾಂಡಿಸ್ ಮತ್ತು ಜಮೀಲಾ ಜಯಗಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ಗಂಗೊಳ್ಳಿ ಪಂಚಾಯತ್ ನಲ್ಲಿ ಬಿ ಜೆ ಪಿ ಅಧಿಕಾರದಲ್ಲಿದ್ದು ಈ ಬಾರಿ ಕಾಂಗ್ರೇಸ್ – ಎಸ್ ಡಿ ಪಿ ಐ ಮೈತ್ರಿ ಒಟ್ಟು 19 ಸ್ಥಾನಗಳನ್ನು (ಕಾಂಗ್ರೇಸ್ 12- ಎಸ್ ಡಿ ಪಿ ಐ 7) ಪಡೆಯುವ ಮೂಲಕ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ.


Spread the love
Subscribe
Notify of

0 Comments
Inline Feedbacks
View all comments