Home Mangalorean News Kannada News ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ಮುಸ್ಲಿಂ ಸಮುದಾಯದವರು ಸಿಹಿತಿಂಡಿ ನೀಡದಂತೆ ಮಸೀದಿಗೆ ಪತ್ರ

ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ಮುಸ್ಲಿಂ ಸಮುದಾಯದವರು ಸಿಹಿತಿಂಡಿ ನೀಡದಂತೆ ಮಸೀದಿಗೆ ಪತ್ರ

Spread the love

ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ಮುಸ್ಲಿಂ ಸಮುದಾಯದವರು ಸಿಹಿತಿಂಡಿ ನೀಡದಂತೆ ಮಸೀದಿಗೆ ಪತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿರುವ ಭಜನಾ ಮಂದಿರವೊಂದರ ಆಡಳಿತ ಮಂಡಳಿಯವರು ಗಣೇಶೋತ್ಸವ ಶೋಭಾಯಾತ್ರೆಯ ವೇಳೆ ತಿಂಡಿ ತಿನಿಸು ನೀಡದಂತೆ ಸ್ಥಳೀಯ ಮಸೀದಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ನಿಮ್ಮ ಸಮುದಾಯ(ಮುಸ್ಲಿಮರು)ದವರು ತಿಂಡಿ-ತಿನಿಸು ನೀಡಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ಕಳೆದ ವರ್ಷ ನೀವು ನೀಡಿದ್ದ ಸಿಹಿ ತಿಂಡಿಯನ್ನು ಸೇವಿಸಿದ್ದ ಹಿಂದೂ ಮಕ್ಕಳು ಅಸ್ವಸ್ಥರಾಗಿದ್ದರು ಎಂಬ ಅಂಶವನ್ನೂ ಕೂಡ ಉಲ್ಲೇಖಿಸಿರುವುದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೂ ಕಾರಣವಾಗಿದೆ. ಸದ್ಯ ಭಜನಾ ಮಂದಿರದ ಆಡಳಿತ ಮಂಡಳಿಯವರು ಮಸೀದಿಗೆ ಬರೆದಿರುವ ಪತ್ರದ ಪ್ರತಿಯು ವೈರಲ್ ಆಗಿದೆ.

ವೈರಲಾಗಿರುವ ಪತ್ರದಲ್ಲಿ, “ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗ್ರತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾ ಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ.


Spread the love

Exit mobile version