Home Mangalorean News Kannada News ಗಣೇಶ ಚತುರ್ಥಿ: ಸಂಘ ನಿಕೇತನದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಉತ್ಸವ ಉದ್ಘಾಟನೆ

ಗಣೇಶ ಚತುರ್ಥಿ: ಸಂಘ ನಿಕೇತನದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಉತ್ಸವ ಉದ್ಘಾಟನೆ

Spread the love

ಗಣೇಶ ಚತುರ್ಥಿ: ಸಂಘ ನಿಕೇತನದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಉತ್ಸವ ಉದ್ಘಾಟನೆ

ಮಂಗಳೂರು: ಗಣೇಶ ಚತುರ್ಥಿ ಪ್ರಯುಕ್ತ 71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ಪ್ರತಾಪನಗರ ಇದರ ಶ್ರೀ ಮಹಾ ಗಣಪತಿ ದೇವರ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಉತ್ಸವದ ಉದ್ಘಾಟನೆ ಗುರುವಾರ ವಿಜೃಂಭಣೆಯಿಂದ ನೆರವೇರಿತು .

ಉದ್ಘಾಟನೆಯು ಶ್ರೀ ಗೋಕುಲದಾಸ್ ಬಾರ್ಕುರ್ , ಶ್ರೀ ಕಚ್ಚುರು ಮಾಲ್ತಿ ದೇವಿ ದೇವಸ್ಥಾನ ಹಾಗೂ ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಬಾರ್ಕುರ್ ಉಡುಪಿ ಇದರ ಪ್ರಧಾನ ಕಾರ್ಯದರ್ಶಿಗಳು ದೀಪ ಪ್ರಜ್ವಲನೆಯ ಮುಖಾಂತರ ಉತ್ಸವಕ್ಕೆ ಚಾಲನೆ ನೀಡಿದರು . ಬಳಿಕ ಧ್ವಜಾರೋಹಣ , ವಂದೇಮಾತರಂ , ಗಣಹೋಮ ನೆರವೇರಿತು .

ಈ ಸಂದರ್ಭದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ರಘುವೀರ್ ಕಾಮತ್ , ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಉಪಾಧ್ಯಕ್ಷರಾದ ಜೆ . ಕೆ ,ರಾವ್ , ಬಾಲಕೃಷ್ಣ ಕೊಟ್ಟಾರಿ , ಸಂತೋಷ್ ಶೆಟ್ಟಿ , ಕೆ . ಪಿ . ಟೈಲಾರ್ , ವಿನಯ ನೇತ್ರ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕರಾದ ಡಾ . ವಾಮನ್ ಶೆಣೈ , ಪಿ ಯಸ್ . ಪ್ರಕಾಶ್ , ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ , ಮಂಗಳೂರು ಉತ್ತರ ಶಾಸಕ ಡಾ . ಭಾರತ್ ಶೆಟ್ಟಿ , ಸಮಿತಿಯ ಕಾರ್ಯದರ್ಶಿ ಸತೀಶ್ ಪ್ರಭು , ಜೀವನರಾಜ್ ಶೆಣೈ , ಭರತ್ ರಾಜ್ , ಹರ್ಷವರ್ಧನ್ , ಸುರೇಶ ಕಾಮತ್ , ಕೋಶಾಧಿಕಾರಿ ಯಸ್ . ಆರ್ . ಕುಡ್ವ ಉಪಸ್ಥಿತರಿದ್ದರು . ಈ ಗಣೇಶೋತ್ಸವ ಕಾರ್ಯಕ್ರಮವು ಸಂಘನಿಕೇತನದಲ್ಲಿ 5 ದಿನಗಳ ಪರ್ಯಂತ ಜರಗಲಿರುವುದು .

ಮಹಾ ಗಣಪತಿ ದೇವರ ವಿಗ್ರಹದ ಮೆರವಣಿಗೆಯಲ್ಲಿ ಮಣ್ಣಗುಡ್ಡೆಯ ದಿವಂಗತ ಮೋಹನ್ ರಾವ್ ರವರ ಮನೆಯಿಂದ ತರಲಾಯಿತು ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಶ್ರೀ ದೇವರ ವಿಗ್ರಹಕ್ಕೆ ಭುಜ ಸೇವೆ ಸಲ್ಲಿಸಿದ ರು.


Spread the love

Exit mobile version