ಗಲ್ಫ್ ರಾಷ್ಟ್ರದಲ್ಲಿ ಮೇಳೈಸಿದ ಕುಂದಗನ್ನಡಿಗರ ಉತ್ಸವ 

Spread the love

ಗಲ್ಫ್ ರಾಷ್ಟ್ರದಲ್ಲಿ ಮೇಳೈಸಿದ ಕುಂದಗನ್ನಡಿಗರ ಉತ್ಸವ 

ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಗನ್ನಡ ಉತ್ಸವ 2023 ಮತ್ತು ಕುಂದಾಪುರ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹೆಬಿಟೆಟ್ ಸ್ಕೂಲ್ ಅಜಮಾನ್ ನಲ್ಲಿ ನಡೆಯಿತು.

ಸೌದಿ ಅರೇಬಿಯಾದ ಉದ್ಯಮಿ ವಿಶ್ವನಾಥ್ ಹೆಗಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು .

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಲ್ಫ್ ರಾಷ್ಟ್ರದಲ್ಲಿ ಕುಂದಗನ್ನಡ ಸಾಧನೆ ಮತ್ತು ಪರಿಶ್ರಮ ಜಗತ್ತಿಗೆ ಮಾದರಿಯಾಗಿದೆ .ವೃತ್ತಿ ಬದುಕಿನ ಜೊತೆಗೆ ತಾಯ್ನೆಲದ ಅಭಿಮಾನ ಹಾಗೂ ಸಂಘಟಿತ ಶ್ರಮದ ಮೂಲಕ ಕುಂದಾಪುರದ ಜನತೆಗೆ ನೆರವಾಗುವ ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಕುಂದಾಪುರದ ಹೆಮ್ಮೆ ಎಂದರು.

ನಮ್ಮ ಕುಂದಾಪುರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಮಾತನಾಡಿ ಕುಂದಾಪುರ ಕನ್ನಡ ಬಳಗ ಗಲ್ಪ್ ರಾಷ್ಟ್ರದಲ್ಲಿ ಕುಂದಗನ್ನಡಗರಿಗೆ ಧ್ವನಿಯಾಗುವ ಜೊತೆಗೆ ಪ್ರತಿ ವರ್ಷ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಗ್ರಾಮೀಣ ಶಾಲೆಗಳಿಗೆ ಕೊಡುಗೆ, ಸಾಧಕರಿಗೆ ಸನ್ಮಾನ ದುಬೈನಲ್ಲಿ ಕುಂದಗನ್ನಡಗರ ಸಮಸ್ಯೆಗಳಿಗೆ ಸ್ಪಂದನೆ ಸೇರಿದಂತೆ ನಿರಂತರ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಕುಂದಗನ್ನಡ ಉತ್ಸವದ ಮೂಲಕ ಅದ್ದೂರಿಯ ಕುಂದಾಪುರ ಕನ್ನಡಿಗ ಸಮ್ಮಿಲನ ಕಾರ್ಯಕ್ರಮ ದುಬೈನಲ್ಲಿ ಯಶಸ್ವಿಯಾಗಿ ಸಾಕಾರಗೊಂಡಿದೆ ಎಂದರು.

ಕುಂದಾಪುರ ರತ್ನ ಪ್ರಶಸ್ತಿ ಪ್ರದಾನ: ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕರಿಗೆ ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ನಾಟಿ ವೈದ್ಯ ಮ್ಯಾಕ್ಸಿಮ್ ಓಲಿವೆರ,ಹಾಗೂ ಪ್ರಾಣಿ ರಕ್ಷಕ ಸಂಜೀವ ದೇವಾಡಿಗ ಬೈಂದೂರುಇವರನ್ನು ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಮಂದಾರ್ತಿ ಮೇಳದ ಯಕ್ಷಗಾನ: ಕುಂಡಗನ್ನಡ ಉತ್ಸವದಲ್ಲಿ ಈ ವರ್ಷ ಮಂದಾರ್ತಿ ಮೇಳದ ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ ಅದ್ದೂರಿಯಾಗಿ ಪ್ರದರ್ಶನಗೊಂಡಿತು. ವಿವಿಧ ದೇಶದಿಂದ ನಮ್ಮ ಕುಂದಾಪುರ ಕನ್ನಡ ಬಳಗದ ಪ್ರತಿನಿಧಿಗಳು ಸೇರಿದಂತೆ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ನಮ್ಮ ಕುಂದಾಪ್ರ ಕನ್ನಡ ಬಳಗ ಉಪಾಧ್ಯಕ್ಷ ದಿನೇಶ್ ದೇವಾಡಿಗ,ಕಾರ್ಯದರ್ಶಿ ಸುಧಾಕರ ಪೂಜಾರಿ,ಖಜಾಂಚಿ ಸುಜಿತ್ ಶೆಟ್ಟಿ,ಕರ್ನಾಟಕ ರಾಜ್ಯ ಅರಣ್ಯಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ದೇವಾಡಿಗ, ನಿವ್ರತ್ತ ಶಿಕ್ಷಕ ಹರೀಶ್ ಶೆಟ್ಟಿ,ಮಂದಾರ್ತಿ ದೇವಸ್ಥಾನದ ಸಚಿನ್ ಶೆಟ್ಟಿ,ಉದ್ಯಮಿ ವೆಂಕಟೇಶ್ ಕಿಣಿ,ಸುಬ್ರಹಣ್ಯ ಹೆಬ್ವಾಗಿಲು ಕತಾರ್,ಸೌದಿ ಅರೇಬಿಯಾ ಸಂತೋಷ ಶೆಟ್ಟಿ,ಓಮನ್ ದೇಶದ ರಮಾನಂದ ಪ್ರಭು,ಶೀನ ದೇವಾಡಿಗ ತ್ರಾಸಿ,ನಮ್ಮ ಕುಂದಾಪ್ರ ಕನ್ನಡ ಬಳಗದ ಪದಾದಿಕಾರಿಗಳು ಉಪಸ್ಥಿತರಿದ್ದರು.

ವಿಘ್ನೇಶ್ ಸಾಂಸ್ಕ್ರತಿಕ ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು,ಆರತಿ ಅಡಿಗ ಕಾರ್ಯಕ್ರಮ ನಿರ್ವಹಿಸಿದರು


Spread the love