Home Mangalorean News Kannada News ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಯುವಕರ ಬಂಧನ

ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಯುವಕರ ಬಂಧನ

Spread the love

ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಯುವಕರ ಬಂಧನ

ಮಂಗಳೂರು: ನಗರದಲ್ಲಿ ಇಕೊನಾಮಿಕ್ಸ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೋಲಿಸ್ ಠಾಣಾ ಪಿ.ಐ ಮತ್ತು ಸಿಬಂದಿಗಳು ಮಾದಕ ದ್ರವ್ಯ ಸಾಗಾಟ, ಮಾರಾಟ ಸೇವನೆ ಮಾಡುವವರ ಪತ್ತೆ ಬಗ್ಗೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಶನಿವಾರ ಯವಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗಾಂಜಾ ಸೇವನೆ ಮಾಡುತ್ತಿದ್ದ ಕಾರ್ತಿಕ್ ರಾಜ್ (27), ಸಂತೋಶ್ (24) ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ರಿತೇಶ್ (27) ಮತ್ತು ವರುಣ್ (21) ಎಂದು ಗುರುತಿಸಲಾಗಿದೆ.

ಬಂಧಿತರನ್ನು ಮಂಗಳೂರು ನಗರದ ಅಶೋಕ್ ನಗರದ ಶೇಡಿಗುರಿ ದಂಬೇಲ್ ಬಳಿ ಬಂಧಿಸಿದ್ದು, ಬಂಧಿತರಿಂದ 10000 ಮೌಲ್ಯದ 250ಗ್ರಾಂ ಗಾಂಜಾ, 7000 ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ರೂ 17000. ಆಗಿರುತ್ತದೆ. ಕಾರ್ಯಾಚಾರಣೆಯಲ್ಲಿ ಪೋಲಿಸ್ ನಿರೀಕ್ಷಕ ವಸೀಂ ಅಹ್ಮದ್ ಮತ್ತು ಸಿಬಂದಿಗಳು ಭಾಗವಹಿಸಿರುತ್ತಾರೆ.


Spread the love

Exit mobile version