ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯುನ್ನು ಪೋಲಿಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳದ ಗೋಳ್ತಮಜಲು ನಿವಾಸಿ ಅಲೀಮ್ @ ಮಹಮ್ಮದ್ ಆಲೀಂ ಪ್ರಾಯ 36 ವರ್ಷ ಎಂದು ಗುರುತಿಸಲಾಗಿದೆ
ಜುಲೈ 29ರಂದ ಸುನೀಲ್ ನಾಯಕ್, ಪಿ.ಐ ಡಿ.ಸಿ.ಐ.ಬಿ ಮಂಗಳೂರು ರವರು ಜೊತೆಯಲ್ಲಿದ್ದ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಖಚಿತ ವರ್ತಮಾನ ಏನೆಂದರೆ ಮಾಣಿ ಕಡೆಯಿಂದ ಬಂಟ್ವಾಳ ಕಡೆಗೆ ಒಂದು ಕೆ.ಎ-37-ಪಿ-122 ನೇ ನಂಬ್ರದ ಓಮಿನಿ ವಾಹನದಲ್ಲಿ ಅಕ್ರಮವಾಗಿ ಗಾಂಜಾ ವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿರುತ್ತದೆ.
ಮೇಲ್ಕಾರ್ ಬಳಿ ವಾಹನ ತಪಾಸಣೆ ಮಾಡುತ್ತಾ ಇರುವ ಸಮಯ ಕಲ್ಲಡ್ಕ ಕಡೆಯಿಂದ ಬಿಸಿರೋಡ್ ಕಡೆಗೆ ಬರುತ್ತಿದ್ದ ಕೆಎ-37-ಪಿ-122 ಬಿಳಿ ಬಣ್ಣದ ಓಮಿನಿ ಕಾರನ್ನು ನಿಲ್ಲಿಸಲು ಸೂಚಿಸಿದ ಮೇರೆಗೆ ಅಲೀಮ್ ಗಾಡಿಯನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಆತನು ಕಲ್ಲಡ್ಕ ಕಡೆಗೆಓಡಿಹೋಗಲು ಪ್ರಯತ್ನಿಸಿದ್ದು ಪಿಐ ಹಾಗೂ ಸಿಬ್ಬಂದಿಗಳು ಆತನನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡು ವಾಹನವನ್ನು ಪರಿಶೀಲಿಸಿದಾಗ ಅಕ್ರಮವಾಗಿ ಹೊರ ಜಿಲ್ಲೆಯಿಂದ ಅಂದಾಜು 2 ಕಿಲೋ 100 ಗ್ರಾಮ್ ನಷ್ದು ಗಾಂಜಾವನ್ನು ಮಾರಾಟ ಮಾಡುವರೇ ಸಾಗಿಸುತ್ತಿದ್ದು, ಈತನನ್ನು ದಸ್ತಗಿರಿ ಮಾಡಿ ಈತನಿಂದ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಓಮಿನಿ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದು, ಒಟ್ಟು ಅಂದಾಜು ಮೌಲ್ಯ ರೂ 2,33,550/- ರೂ. ಆರೋಪಿ ಮತ್ತು ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬಂಟ್ವಾಳ ನಗರ ಠಾಣೆಗೆ ಸೂಕ್ರ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.
ಈ ಪತ್ತೆಕಾರ್ಯವನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಬಿ.ಆರ್ ರವಿಕಾಂತೇ ಗೌಡ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಜಿತ್ ರವರ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಇಕ್ಬಾಲ್, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಎಸ್, ವಿಜಯ ಗೌಡ, ಶೋನ್ಶಾ ರವರು ಭಾಗವಹಿಸಿರುತ್ತಾರೆ.